High blood pressure from pregnancy can be dangerous for both mother and baby: Important tips for the public
ಗರ್ಭಧಾರಣೆಯಿಂದ ಉಂಟಾಗುವ ಅಧಿಕ ರಕ್ತದೊತ್ತಡದಿಂದ ತಾಯಿ, ಮಗುವಿಗೆ ಅಪಾಯ: ಸಾರ್ವಜ
ಜಾಹೀರಾತು

ನಿಕರಿಗೆ ಮಹತ್ವದ ಸಲಹೆಗಳು
ಕೊಪ್ಪಳ ಆಗಸ್ಟ್ 21 (ಕ.ವಾ): ಕೆಲವು ಗರ್ಭಿಣಿಯರಲ್ಲಿ ಗರ್ಭಧಾರಣೆಯಿಂದಾಗಿ ಅಧಿಕ ರಕ್ತದೊತ್ತಡ (ಬಿಪಿ) ಉಂಟಾಗುತ್ತದೆ. ಗರ್ಭಾವಸ್ಥೆಯಲ್ಲಿ ನಾವು ಅಧಿಕ ರಕ್ತದೊತ್ತಡದ ಬಗ್ಗೆ ಕಾಳಜಿ ವಹಿಸುವುದು ಅತೀ ಅಗತ್ಯವಿದೆ. ಒಂದು ವೇಳೆ ನಿರ್ಲಕ್ಷ್ಯ ವಹಿಸಿದಲ್ಲಿ ಸಾಕಷ್ಟು ತೊಂದರೆಗಳು ಎದುರಾಗಲಿವೆ. ಈ ಕುರಿತಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸಾರ್ವಜನಿಕರಿಗೆ ಕೆಲವು ಪ್ರಮುಖ ಸಲಹೆಗಳನ್ನು ನೀಡಿದೆ.
*ಅಧಿಕ ರಕ್ತದೊತ್ತಡ ಎಂದರೇನು?:* ಗರ್ಭಾವಸ್ಥೆಯಲ್ಲಿ ಉಂಟಾಗುವ ಅಧಿಕ ರಕ್ತದೊತ್ತಡ ಒಂದು ರೀತಿಯ ಅಧಿಕ ರಕ್ತದೊತ್ತಡ; ಇದನ್ನು ಗರ್ಭಾವಸ್ಥೆಯಲ್ಲಿ ಮೊದಲು ಗುರುತಿಸಲಾಗುತ್ತದೆ. ಎರಡು ಪ್ರತ್ಯೇಕ ಸಂದರ್ಭಗಳಲ್ಲಿ ರಕ್ತದೊತ್ತಡ 140/90 ಎಂಎಂ ಹೆಚ್‌ಜಿ ಗಿಂತ ಹೆಚ್ಚಾದಾಗ ಇದನ್ನು ನಿರ್ಣಯಿಸಲಾಗುತ್ತದೆ. ಮೊದಲ ಬಾರಿಗೆ ಗರ್ಭಧಾರಣೆ, ಬೊಜ್ಜು, ವಯಸ್ಸು (20 ರ್ವದ ಕೆಳಗೆ ಅಥವಾ 40 ವರ್ಷದ ಮೇಲೆ) ಅವಳಿ/ತ್ರಿವಳಿ ಗರ್ಭಧಾರಣೆಗಳು, ಮಧುಮೇಹದ ಜೊತೆ ಅಧಿಕ ರಕ್ತದೊತ್ತಡ ಹೆಚ್ಚಾಗಿ ಕಾಣಿಸುತ್ತದೆ.
*ಸಾಮಾನ್ಯ ಚಿಹ್ನೆಗಳು ಮತ್ತು ಲಕ್ಷಣಗಳು:* ಅಧಿಕ ರಕ್ತದೊತ್ತಡವು ಸಾಮಾನ್ಯವಾಗಿ ಲಕ್ಷಣಗಳನ್ನು ಹೊಂದಿರುವುದಿಲ್ಲ, ಆದ್ದರಿಂದ ಆರಂಭಿಕ ಪತ್ತೆಗೆ ರಕ್ತದೊತ್ತಡದ ತಪಾಸಣೆ ಅತ್ಯಗತ್ಯ. ಕೆಲಮೊಮ್ಮೆ ಉಸಿರಾಟದ ತೊಂದರೆ, ತೀವ್ರ ತಲೆನೋವು, ಕೈಗಳು, ಮುಖ ಅಥವಾ ಪಾದಗಳ ಊತ, ದೃಷ್ಟಿ ಮಂದವಾಗುವುದು ಹಾಗೂ ಹಠಾತ್ ತೂಕ ಹೆಚ್ಚಾಗುವುದು ಮತ್ತು ಮೊದಲ ತ್ರೈಮಾಸಿಕದ ನಂತರವೂ ತೀವ್ರ ವಾಕರಿಕೆ/ ಹೊಟ್ಟೆ ನೋವು ಕಂಡುಬರಬಹುದು.
*ತಪಾಸಣೆಗಳು ಅತ್ಯಗತ್ಯ:* ಗರ್ಭಾವಸ್ಥೆಯಲ್ಲಿ ಅಧಿಕ ರಕ್ತದೊತ್ತಡಕ್ಕೆ ಸಂಬಂಧಿಸಿದಂತೆ ಆರಂಭಿಕ ಪತ್ತೆ ಮತ್ತು ನಿರ್ವಹಣೆಗೆ ನಿಯಮಿತ ತಪಾಸಣೆಗಳು ಅತ್ಯಗತ್ಯವಾಗಿದೆ. ಪ್ರತಿ ಭೇಟಿಯಲ್ಲೂ ರಕ್ತದೊತ್ತಡವನ್ನು ಪರಿಶೀಲಿಸಿ ಮತ್ತು ಅದರ ದಾಖಲೆಯನ್ನು ಕ್ರಮಬದ್ಧವಾಗಿ ಇರಿಸಬೇಕು. ಗರ್ಭಧಾರಣೆಯ ಉದ್ದಕ್ಕೂ ರಕ್ತದೊತ್ತಡ ಸಾಮಾನ್ಯವಾಗಿರಬಹುದು ಮತ್ತು ಕೊನೆಯ ತಿಂಗಳುಗಳಲ್ಲಿ ಇದ್ದಕ್ಕಿದ್ದಂತೆ ಹೆಚ್ಚಾಗಬಹುದು ಅಥವಾ ಹೆರಿಗೆಗೆ ಸ್ವಲ್ಪ ಮೊದಲು ಅಥವಾ ಹೆರಿಗೆಯ ಸಮಯದಲ್ಲಿ ಅಥವಾ ನಂತರ ಇದ್ದಕ್ಕಿದ್ದಂತೆ ಹೆಚ್ಚಾಗಬಹುದು. ಲ್ಯಾಬೆಟೊಲೊಲ್/ಆಸ್ಪಿರಿನ್‌ನಂತಹ ಔಷಧಿಗಳು ಬೇಕಾಗಬಹುದು. ಸೂಚಿಸಲಾದ ಔಷಧಿಗಳನ್ನು ನಿಯಮಿತವಾಗಿ ತೆಗೆದುಕೊಳ್ಳಬೇಕು. ಡೋಸಗಳನ್ನು ತಪ್ಪಿಸಿಕೊಳ್ಳಬಾರದು.
*ಜೀವನಶೈಲಿಯ ಬದಲಾವಣೆ ಇರಲಿ:* ಕೆಳಕಾಣಿಸಿದ ಜೀವನಶೈಲಿಯ ಬದಲಾವಣೆಗಳು ಗರ್ಭಾವಸ್ಥೆಯಲ್ಲಿ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಸಹಾಯ ಮಾಡುತ್ತವೆ. ದಿನವಿಡೀ ಆಗಾಗ್ಗೆ ಸಣ್ಣ ಸಮತೋಲಿತ ಊಟಗಳನ್ನು ಸೇವಿಸಬೇಕು. ಉಪ್ಪು, ಸಂಸ್ಕರಿಸಿದ, ಹುರಿದ ಮತ್ತು ಎಣ್ಣೆಯುಕ್ತ ಆಹಾರವನ್ನು ಸೇವಿಸುವುದನ್ನು ತಪ್ಪಿಸಬೇಕು. ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳಬೇಕು. ಎಡಭಾಗಕ್ಕೆ ತಿರುಗಿ ಮಲಗಬೇಕು. ಸಲಹೆಯಂತೆ ನಿಯಮಿತವಾಗಿ ವ್ಯಾಯಾಮ ಮಾಡಬೇಕು. ತಂಬಾಕು ಸೇವನೆ ಮತ್ತು ಮದ್ಯಪಾನ ತಪ್ಪಿಸಬೇಕು.
*ಅಧಿಕ ರಕ್ತದೊತ್ತಡ ನಿರ್ಲಕ್ಷಿಸಬೇಡಿ:* ಗರ್ಭಾವಸ್ಥೆಯಲ್ಲಿ ನಾವು ಅಧಿಕ ರಕ್ತದೊತ್ತಡವನ್ನು ನಿರ್ಲಕ್ಷಿಸಿದರೆ ಏನಾಗುತ್ತದೆ? ಎಂಬುದರ ಬಗ್ಗೆ ಅರಿಯಬೇಕು. ಗರ್ಭಾವಸ್ಥೆಯಲ್ಲಿ ಅಧಿಕ ರಕ್ತದೊತ್ತಡವನ್ನು ನಿರ್ಲಕ್ಷಿಸುವುದರಿಂದ ತಾಯಿ ಮತ್ತು ಮಗು ಇಬ್ಬರಿಗೂ ಜೀವಕ್ಕೆ ಅಪಾಯಕಾರಿ ತೊಡಕುಗಳು ಉಂಟಾಗುವ ಸಂಭವ ಹೆಚ್ಚಾಗಿರುತ್ತದೆ.
*ತಾಯಿಗೆ ಅಪಾಯಗಳು:* ಅಧಿಕ ರಕ್ತದೊತ್ತಡದಿಂದ ತಾಯಿಗೆ ಅಪಾಯಗಳು ಹೆಚ್ಚಿರುತ್ತವೆ. ಪ್ರಿ-ಎಕ್ಲಾಂಪ್ಸಿಯಾ: ಅಂದರೆ ಗರ್ಭಧಾರಣೆಯ 20 ವಾರಗಳ ನಂತರ ಅಧಿಕ ರಕ್ತದೊತ್ತಡ (140/90 ಎಂಎಂ ಹೆಚ್‌ಜಿ) ಮತ್ತು ಮೂತ್ರದಲ್ಲಿ ಪ್ರೋಟೀನ್ ನಷ್ಟ ಕಂಡು ಬರುತ್ತದೆ. ಕೆಲಮೊಮ್ಮೆ ಇದರೊಂದಿಗೆ ಫಿಟ್ಸ್/ ಎಕ್ಲಾಂಪ್ಸಿಯಾ ಆಗುವ ಸಂಭವವಿರುತ್ತದೆ. ಇದು ಪ್ರಸವಾನಂತರದ ಸಮಯದಲ್ಲೂ ಸಂಭವಿಸಬಹುದು. ಹೆರಿಗೆಗೆ ಮೊದಲು ಜರಾಯು ಗರ್ಭಾಶಯದಿಂದ ಬೇರ್ಪಡುವ ಗಂಭೀರ ತುರ್ತು ಪರಿಸ್ಥಿತಿ ಹಾಗೂ ತಾಯಿಯಲ್ಲಿ ರಕ್ತಸ್ರಾವ ಸಂಭವಿಸಬಹುದು. ಅಧಿಕ ರಕ್ತದೊತ್ತಡವು ಯಕೃತ್ತು, ಮೆದುಳು, ಮೂತ್ರಪಿಂಡಗಳು, ಹೃದಯ, ಶ್ವಾಸಕೋಶ ಮತ್ತು ಇತರೆ ಪ್ರಮುಖ ಅಂಗಗಳನ್ನು ಹಾನಿಗೊಳಿಸುತ್ತದೆ. ಇವೆಲ್ಲವೂ ತುರ್ತು ಪರಿಸ್ಥಿತಿಯಾಗಿದ್ದು ವೈದ್ಯಕೀಯ ಚಿಕಿತ್ಸೆ ಅಗತ್ಯವಿರುತ್ತದೆ. ಆದ್ದರಿಂದ ತಕ್ಷಣ ಆಸ್ಪತ್ರೆಯನ್ನು ತಲುಪಬೇಕು.
*ಮಗುವಿಗೆ ಅಪಾಯಗಳು:* ಮಗು ಬೇಗನೆ ಜನಿಸುವುದರಿಂದ ಉಸಿರಾಟದ ತೊಂದರೆ ಉಂಟಾಗುತ್ತದೆ. ಕಡಿಮೆ ತೂಕದ ಮಗು ಅಧಿಕ ರಕ್ತದೊತ್ತಡದಿಂದ ಭ್ರೂಣಕ್ಕೆ ರಕ್ತದ ಹರಿವು ಕಡಿಮೆಯಾಗುತ್ತದೆ. ಇದು ಆಮ್ಲಜನಕ ಮತ್ತು ಪೋಷಕಾಂಶಗಳ ಕೊರತೆಗೆ ಕಾರಣವಾಗುತ್ತದೆ ಮತ್ತು ಹೊಟ್ಟೆಯ ಒಳಗಿನ ಮಗುವಿನ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ. ತೀವ್ರತರವಾದ ಪ್ರಕರಣಗಳಲ್ಲಿ, ಅಗತ್ಯ ಪೋಷಕಾಂಶಗಳು ಮತ್ತು ಆಮ್ಲಜನಕದ ಕೊರತೆಯಿಂದಾಗಿ ಮಗು ತನ್ನ ಜೀವವನ್ನು ಕಳೆದುಕೊಳ್ಳಬಹುದು.
*ಪ್ರಮುಖ ಸಲಹೆಗಳು:* ಪ್ರತಿ ಬಾರಿಯೂ ನಿಮ್ಮ ನರ್ಸ್/ವೈದ್ಯರನ್ನು ಬಿಪಿ ಅಳತೆ ಮತ್ತು ಮೂತ್ರ ಪ್ರೋಟೀನ್ ಪರೀಕ್ಷೆಗಾಗಿ ಕೇಳಲು ಮರೆಯಬಾರದು. ಕೆಲ ಸಂದರ್ಭಗಳಲ್ಲಿ ತಾಯಿ ಮತ್ತು ಮಗುವಿಗೆ ಮಾರಣಾಂತಿಕ ತೊಡಕಗಳನ್ನು ತಡೆಗಟ್ಟಲು ಸಮಯಕ್ಕಿಂತ ಮೊದಲೇ ಹೆರಿಗೆ ಅಗತ್ಯವಾಗಬಹುದು.
*ಎಚ್ಚರಿಕೆ ಚಿಹ್ನೆಗಳು:* ತೀವ್ರ ತಲೆನೋವು, ದೃಷ್ಟಿ ಮಂದವಾಗಿದ್ದರೆ, ಭಾರೀ ರಕ್ತಸ್ರಾವವಾಗಿದ್ದರೆ ನಿಮ್ಮ ಪಾದಗಳಲ್ಲಿ ದಿನವಿಡೀ ನಿರಂತರ ಊತವಿದ್ದರೆ ಅಥವಾ ಮಗುವಿನ ಚಲನೆ ಕಡಿಮೆಯಿದ್ದರೆ ತಕ್ಷಣ ಸಹಾಯ ಪಡೆಯಿರಿ; ಉನ್ನತ ಆರೋಗ್ಯ ಸೌಲಭ್ಯಕ್ಕೆ ಹೋಗಿರಿ.
*ನೆನಪಿಡಿ:* ಸರಿಯಾದ ಆರೈಕೆ ಮತ್ತು ಚಿಕಿತ್ಸೆಯಿಂದ ಹೆಚ್ಚಿನ ಮಹಿಳೆಯರು ಸುರಕ್ಷಿತ ಗರ್ಭಧಾರಣೆಯನ್ನು ಹೊಂದಬಹುದು. ನವಜಾತ ಶಿಶು ಜನಿಸಿದ ನಂತರ, ಎದೆಹಾಲುಣಿಸುವಿಕೆ ಮತ್ತು ತಾಪಮಾನವನ್ನು ಕಾಪಾಡಿಕೊಳ್ಳುವತ್ತ ಗಮನಹರಿಸುವುದು ಮುಖ್ಯ.

Total Views:
0
ಜಾಹೀರಾತು