Struggle to Protect Women's Rights: State President Vijayalakshmi Asoti

ಕರ್ನಾಟಕ ಸ್ವಾಭಿಮಾನಿ ಮಹಿಳಾ ವೇದಿಕೆ ಜಿಲ್ಲಾ ಸಭೆ


ಮಹಿಳೆಯರ ಹಕ್ಕುಗಳ ರಕ್ಷಣೆಗೆ ಹೋರಾಟ : ರಾಜ್ಯಾಧ್ಯಕ್ಷೆ ವಿಜಯಲಕ್ಷ್ಮಿ ಅಸೋಟಿ
ಗಂಗಾವತಿ:ಮಹಿಳಾ ದೌರ್ಜನ್ಯ ವಿರುದ್ಧ ಧ್ವನಿ ಎತ್ತಲು ಹಾಗೂ ಮಹಿಳಾ ಸಬಲೀಕರಣಕ್ಕಾಗಿ ವೇದಿಕೆ ರಚಿಸಲಾಗಿದೆ ಎಂದು ಕರ್ನಾಟಕ ಸ್ವಾಭಿಮಾನಿ ಮಹಿಳಾ ವೇದಿಕೆ ರಾಜ್ಯಾಧ್ಯಕ್ಷೆ ವಿಜಯಲಕ್ಷ್ಮಿ ಅಸೂಟಿ ಹೇಳಿದರು.
ನಗರದ ಖಾಸಗಿ ಹೋಟೆಲ್ ನಲ್ಲಿ ಬುಧವಾರ ಕರ್ನಾಟಕ ಸ್ವಾಭಿಮಾನಿ ಮಹಿಳಾ ವೇದಿಕೆ ಹಾಗೂ ಕರ್ನಾಟಕ ಯುವಶಕ್ತಿ ಸಂಘಟನೆ ಯಿಂದ ಏರ್ಪಡಿಸಿದ ಸಭೆಯಲ್ಲಿ ಮಾತನಾಡಿದರು.
ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಆದರೆ, ವೇದಿಕೆ ಸಿಕ್ಕಿಲ್ಲ. ಆದ್ದರಿಂದ ಮಹಿಳೆಯರಿಗಾಗಿಯೇ ಕರ್ನಾಟಕ ಸ್ವಾಭಿಮಾನಿ ಮಹಿಳಾ ವೇದಿಕೆ ರಚಿಸಲಾಗಿದೆ. ಮಹಿಳೆಯರು ಸ್ವಾಭಿಮಾನದಿಂದ ಬದುಕುತ್ತಿದ್ದಾರೆ. ಮಹಿಳೆಯ ಮೇಲಿನ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಲು ವೇದಿಕೆ ನಿರ್ಮಿಸಲಾಗಿದೆ ಎಂದರು.
ಹಳ್ಳಿಯಿಂದ ದೆಲ್ಲಿಯವರೆಗೂ ಮಹಿಳೆಯರು ಬಲಿಷ್ಠರಾಗಿದ್ದಾರೆ ಎಂಬುದನ್ನು ಗುರುತಿಸಲು ಸಂಘಟನೆ ನೆರವಾಗಲಿದೆ. ಮಹಿಳೆಯರಿಗೆ ಕಾನೂನು ನೆರವನ್ನು ಸಂಘಟನೆ ನೀಡಲಿದೆ. ಅಧಿಕಾರಿಗಳನ್ನು ನಡುಗಿಸುವ ಶಕ್ತಿ ವೇದಿಕೆ ಇದೆ. ಇನ್ನು ಮಹಿಳೆಯರ ಸ್ವಾವಲಂಬಿ ಜೀವನೆ ನಡೆಸಲು ಸಹಕಾರಿಯಾಗಿದೆ ಎಂದು ತಿಳಿಸಿದರು.
ಯುವಶಕ್ತಿ ಸಂಘಟನೆಯ ಮುತ್ತಣ್ಣ ಮಾತನಾಡಿ, ಮಹಿಳೆಯರು, ಮಕ್ಕಳ ಮೇಲೆ ದೌರ್ಜನ್ಯ ಆಗುತ್ತಿದೆ. ಇದರ ವಿರುದ್ಧ ಮಹಿಳಾ ಸಂಘಟನೆ ಧ್ವನಿ ಎತ್ತಲಿದೆ. ಮಹಿಳೆಯರನ್ನು ಗುರುತಿಸಿ ಅವರ ಹಕ್ಕನ್ನು ಒದಗಿಸಲು ಕರ್ನಾಟಕ ಸ್ವಾಭಿಮಾನಿ ಮಹಿಳಾ ವೇದಿಕೆ ಹುಟ್ಟಿಕೊಂಡಿದೆ. ಈ ವೇದಿಕೆ ಜತೆ ಯುವಶಕ್ತಿ ಸಂಘಟನೆ ಸಹಕಾರ ನೀಡಿದೆ ಎಂದು ತಿಳಿಸಿದರು
ಮಾಲಾ ನಾಯ್ಕ್ ಮಾತನಾಡಿ, ಸಂಘಟನೆ ಎಂದರೆ ಒಗ್ಗಟ್ಟು. ಮಹಿಳಾ ವೇದಿಕೆ ದೌರ್ಜನ್ಯ, ಅತ್ಯಾಚಾರ, ಹಲ್ಲೆ ಬಗ್ಗೆ ಧ್ವನಿ ಎತ್ತಿ ಕೆಲಸ ಮಾಡಬೇಕು. ಯಾವುದೇ ಅಹಿತಕರ ಘಟನೆ ನಡೆಯುವ ಸ್ಥಳಕ್ಕೆ ವೇದಿಕೆ ಮೂಲಕ ನ್ಯಾಯ ಒದಗಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ರಾಜ್ಯ ಖಜಾಂಚಿ ಸುಮಂಗಲಾ ಸಿಂಪಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಮಹಿಳೆಯರ ಸಬಲೀಕರಣ, ಮತ್ತು ಸಮಾಜದಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ ದ್ವನಿ ಎತ್ತಲು ಒಂದು ವೇದಿಕೆಯ ಅವಶ್ಯಕತೆ ಇತ್ತು, ಸ್ವಾಭಿಮಾನಿ ಮಹಿಳಾ ವೇದಿಕೆ ನಮ್ಮಲ್ಲರ ಎಂದರು.
ಸಭೆಯ ಅಧ್ಯಕ್ಷತೆಯನ್ನು , ಕರ್ನಾಟಕ ಸ್ವಾಭಿಮಾನಿ ಮಹಿಳಾ ವೇದಿಕೆಯ ಜಿಲ್ಲಾಧ್ಯಕ್ಷೆ ಸಿ.ಹೆಚ್.ಪದ್ಮಾವತಿ ವಹಿಸಿದ್ದರು, ಸಾಮಾಜಿಕ ಕಾರ್ಯಕರ್ತ ಮೌಲಾಹುಸೇನ ಬುಲ್ಡಿಯಾರ್, ಭಾರತಿ ಆಲಗೂರು, ಲಕ್ಷ್ಮಿ ದೇವಿ ಸಂಡೂರು, ಮಾತನಾಡಿದರು. ರವಿಕುಮಾರ ನಾಯಕ, ಮಂಜುನಾಥ ನಾಯಕ, ಅಮೀನಾಬೇಗಂ,
ನಿರ್ಮಲಾ ಎಸ್., ಸುಜಾತ, ಶೇಕ್ಷಾವಲಿ, ಪಾರ್ವತಿ ಪಾಟೀಲ್, ರಾಜೇಶ್ವರಿ, ಅಪರ್ಣ, ಕಮಲಾಕ್ಷಿ, ಭಾರತಿ ಆಲಗೂರ್, ಎ. ರತ್ನಮ್ಮ, ಲಕ್ಷ್ಮೀ ಶಿವಶಿಂಪಗೇರ, ಶಿವಕುಮಾರ್, ವೆಂಕಟೇಶ ದಂಡಿನ, ಚಿದನಂದಮೂರ್ತಿ, ಮುತ್ತಣ್ಣ ಅನವಾಲದ ಸೇರಿದಂತೆ ಇತರರಿದ್ದರು.





