ಲಂಚದ ಹಣ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಕೋಳೂರು ಗ್ರಾ.ಪಂ ಕಾರ್ಯದರ್ಶಿ, ಬಿಲ್ ಕಲೆಕ್ಟರ್, ದಿನಗೂಲಿ ನೌಕರ

H.Mallikarjun
H.Mallikarjun - Kalyanasiri
2 Min Read
ಜಾಹೀರಾತು
Kolur Gram Panchayat Secretary, Bill Collector, Daily Wages Worker Caught in Lokayukta's Trap While Accepting Bribe




ಲಂಚದ ಹಣ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಕೋಳೂರು ಗ್ರಾ.ಪಂ ಕಾರ್ಯದರ್ಶಿ, ಬಿಲ್ ಕಲೆಕ್ಟರ್, ದಿನಗೂಲಿ ನೌಕರ

ಜಾಹೀರಾತು

ಕೊಪ್ಪಳ ಮೇ 08, (ಕರ್ನಾಟಕ ವಾರ್ತೆ): ರೂ. 75,000 ಲಂಚದ ಹಣವನ್ನು ಸ್ವೀಕರಿಸಿದ ಕೋಳೂರು ಗ್ರಾಮ ಪಂಚಾಯತಿ ಕಛೇರಿಯ ಕಾರ್ಯದರ್ಶಿ ಮತ್ತು ಬಿಲ್ ಕಲೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಹಾಗೂ ಲಂಚದ ಹಣ ಸ್ವೀಕರಿಸಲು ಸಹಕರಿಸಿದ ದಿನಗೂಲಿ ನೌಕರನನ್ನು ಮೇ 6 ರಂದು ಕೊಪ್ಪಳ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಮರಿಯಪ್ಪ ತಂದೆ ಶಿವಪ್ಪ ಮಡಿವಾಳರ ವಯ: 59 ವರ್ಷ, ಜಾ: ಮಡಿವಾಳ, ಉ: ಕಾರ್ಯದರ್ಶಿಗಳು, ಗ್ರಾಮ ಪಂಚಾಯತ್ ಕಾರ್ಯಾಲಯ, ಕೊಳೂರು, ತಾ/ಜಿ. ಕೊಪ್ಪಳ, ಸಾ. ಬೆಟಗೇರಿ, ತಾ/ಜಿ ಕೊಪ್ಪಳ, 2) ನಾಗರಾಜ ತಂದೆ ಗವಿಸಿದ್ದಪ್ಪ ಬಡಿಗೇರ ವಯಾ: 31 ವರ್ಷ, ಜಾ: ನಾಯಕ, ಉ: ಬಿಲ್ ಕಲೆಕ್ಟರ್, ಗ್ರಾಮ ಪಂಚಾಯತ್ ಕಾರ್ಯಾಲಯ, ಕೋಳೂರು, ತಾ/ಜಿ, ಕೊಪ್ಪಳ, ಸಾ. ದದೇಗಲ್, ತಾ/ಜಿ. ಕೊಪ್ಪಳ, 3) ಮಾರುತಿ ತಂದೆ ಮುದಿಯಪ್ಪ ಮೈನಳ್ಳಿ ವಯ: 22 ವರ್ಷ, ಉ: ಕೋಳೂರು ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ದಿನಗೂಲಿ ನೌಕರ, ಸಾ. ದದೇಗಲ್, ತಾ/ಜಿ. ಕೊಪ್ಪಳ.
ಫಿರ್ಯಾದಿದಾರರಾದ ಎಮ್ ಜ್ಞಾನೇಶ್ವರಯ್ಯ ತಂದೆ ಎಮ್ ಕೊಟ್ರಯ್ಯ ವಯಾ:65 ವರ್ಷ ಉ:ನಿವೃತ್ತ ಗ್ರಾಮ ಪಂಚಾಯತ ಕಾರ್ಯದರ್ಶಿ, ಸಾ: ದುರ್ಗಾ ರಸ್ತೆ ರಾಮನಗರ ಹಗರಿಬೊಮ್ಮನಹಳ್ಳಿ, ಜಿ:ವಿಜಯನಗರ ರವರು ದೂರುದಾರರ ಹೆಂಡತಿಯಾದ ಕೆ. ಸುಮಂಗಲಾ ವಯಾ:62 ವರ್ಷ ಇವರ ಹೆಸರಿನಲ್ಲಿರುವ ಕೊಪ್ಪಳ ತಾಲೂಕಿನ ದದೇಗಲ್ ಗ್ರಾಮದ ರಿ.ಸ.ಸಂ. 74/+/29, ಕ್ಷೇತ್ರ 08 ಗುಂಟೆ ಕೃಷಿ ಜಮೀನನ್ನು ಮಾನ್ಯ ಜಿಲ್ಲಾಧಿಕಾರಿಗಳು ಕೊಪ್ಪಳ ಜಿಲ್ಲೆ ರವರು ದಿನಾಂಕ: 08.11.2024 ರಂದು ಮಾಸ್ಟರ್ ಪ್ಲಾನ್ ಆಧಾರಿತ ಡೀಮ್ಸ್ ಭೂ ಪರಿವರ್ತನೆ ಮಾಡಿ ಆದೇಶವನ್ನು ಹೊರಡಿಸಿರುತ್ತಾರೆ. ನಂತರ ದಿನಾಂಕ:27.03.2025 ರಂದು ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ ಕೊಪ್ಪಳ ರವರು ಈ ಜಮೀನಿಗೆ ಏಕ ನಿವೇಶನ ವಸತಿ ಉಪಯೋಗಕ್ಕಾಗಿ ವಿನ್ಯಾಸ ಅನುಮೋದಿಸಿ ಆದೇಶಿಸಿರುತ್ತಾರೆ. ನಂತರ ಈ ಜಮೀನು ವಸತಿ ಉದ್ದೇಶಕ್ಕಾಗಿ ಭೂ ಪರಿವರ್ತನೆ ಪ್ರಕಾರ ಪಂಚಾಯತಿ ಖಾತಾ ದಾಖಲಾತಿ ಮಾಡಿ ಫಾರಂ ನಂ 9-11 ನೀಡಲು ಕೋಳೂರು ಗ್ರಾಮ ಪಂಚಾಯತಿ ಕಛೇರಿಯ ಕಾರ್ಯದರ್ಶಿ ಮತ್ತು ಬಿಲ್ ಕಲೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು 75,000 ರೂ.ಗಳ ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ ಎಂದು ಫಿರ್ಯಾದಿದಾರರು ಆರೋಪಿಸಿದ್ದು, ಇವರಿಗೆ ಲಂಚದ ಹಣ ನೀಡಲು ಇಷ್ಟ ಇಲ್ಲದ ಕಾರಣ ದಿನಾಂಕ 05.05.2026 ರಂದು ಲೋಕಾಯುಕ್ತ ಪೊಲೀಸರಿಗೆ ಮಾಹಿತಿ ನೀಡಿ ಪ್ರಕರಣ ದಾಖಲಿಸಿರುತ್ತಾರೆ.
ಲೋಕಾಯುಕ್ತ ಎಸ್‌ಪಿ ಸಿದ್ದರಾಜು ಸಿ. ಅವರ ಮಾರ್ಗದರ್ಶನದಲ್ಲಿ ಮತ್ತು ಡಿವೈಎಸ್‌ಪಿ ಲೋಕೇಶ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಈ ಬಲೆ ಬೀಸಿತ್ತು. ಈ ಪ್ರಕರಣದ ತನಿಖಾಧಿಕಾರಿಗಳಾದ ಚಂದ್ರಪ್ಪ ಪಿಐ ಹಾಗೂ ಲೋಕಾಯಕ್ತ ಇನ್ಸ್ಪೆಕ್ಟರಗಳಾದ ಸುನೀಲ್ ಪಿಐ ಹಾಗೂ ಶೈಲಾ ಎಸ್. ಪ್ಯಾಟಿಶೆಟ್ಟರ್ ಮತ್ತು ಇತರ ಸಿಬ್ಬಂದಿರವರು ತಂಡದಲ್ಲಿ ಭಾಗವಾಗಿದ್ದರು ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

Total Views: 0
Share This Article