Rudrabhishekam', starring Vijay Raghavendra, to hit screens on September 25.


ವಿಜಯ ರಾಘವೇಂದ್ರ ಅಭಿನಯದ ‘ರುದ್ರಾಭಿಷೇಕಂ’ ಚಿತ್ರ ಸೆ.೨೫ಕ್ಕೆ ತೆರೆಗೆ


ಬೆಂಗಳೂರು: ‘ಪಾನ್ ಇಂಡಿಯಾ ಕ್ರಿಯೇಷನ್ಸ್’ ವಿಜಯಪುರ ಅವರ ನ್ಯಾಚುರಲ್ ಸ್ಟಾರ್ ವಿಜಯರಾಘವೇಂದ್ರ ದ್ವಿಪಾತ್ರದಲ್ಲಿ ಅಭಿನಯಿಸಿರುವ ‘ರುದ್ರಾಭಿಷೇಕಂ’ ಸೆಪ್ಟಂಬರ್ ೨೫ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.
‘ಪಾನ್ ಇಂಡಿಯಾ ಕ್ರಿಯೇಶನ್ಸ್’ (ವಿಜಯಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆ) ಸಂಸ್ಥೆಯು ಈ ಚಿತ್ರದ ಮೂಲಕ ಕನ್ನಡ ಚಲನಚಿತ್ರರಂಗಕ್ಕೆ ಪ್ರಪ್ರಥಮ ಬಾರಿಗೆ ಪಾದಾರ್ಪಣೆ ಮಾಡುತ್ತಿದ್ದು ಚಿತ್ರದಲ್ಲಿ ನಟ ವಿಜಯ ರಾಘವೇಂದ್ರ ಅವರದು ವಿಶಿಷ್ಟವಾದ ವೀರಗಾಸೆ ಪಾತ್ರದಲ್ಲಿ ಮಿಂಚಿದ್ದಾರೆ. ವೀರಭದ್ರ ಸ್ವಾಮಿಯ ಜಾನಪದ ಕಥೆ ಹಿನ್ನೆಲೆಯನ್ನು ಒಳಗೊಂಡ ಈ ಸಾಹಸಮಯ ಚಿತ್ರದಲ್ಲಿ ವಿಜಯ ರಾಘವೇಂದ್ರ ಅವರು ಹಿಂದೆಂದೂ ಕಾಣದ ವಿಭಿನ್ನ ಹಾಗೂ ಶಕ್ತಿಶಾಲಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಾದಬ್ರಹ್ಮ ವಿ. ಮನೋಹರ್ ಅವರ ಸಂಗೀತ ಸಂಯೋಜನೆ ಮತ್ತು ಥ್ರಿಲ್ಲರ್ ಮಂಜು ಅವರ ಭರ್ಜರಿ ಸಾಹಸ ದೃಶ್ಯಗಳು ಚಿತ್ರಕ್ಕೆ ಪ್ರಮುಖ ಆಕರ್ಷಣೆಯಾಗಿವೆ. ದೇವನಹಳ್ಳಿ, ಗೋಕರ್ಣ, ಹೊನ್ನಾವರ, ಕುಮಟಾ, ಅಬ್ಬಕ್ಕ ಫೋರ್ಟ್ ಹಾಗೂ ಅಘನಾಶಿನಿ ಹಿನ್ನೀರು ಪ್ರದೇಶಗಳಲ್ಲಿ ೫೦ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದ್ದು ಈ ಚಿತ್ರವು ಕನ್ನಡ ಕಲಾಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದ್ದು, ಸೆಪ್ಟೆಂಬರ್ ೨೫ರಂದು ಅದ್ಧೂರಿಯಾಗಿ ತೆರೆಗೆ ಬರಲಿದೆ ಎಂದು ನಿರ್ದೇಶಕ ವಸಂತಕುಮಾರ ತಿಳಿಸಿದ್ದಾರೆ.
ಚಿತ್ರದಲ್ಲಿ ನಾಯಕರಾಗಿ ನ್ಯಾಚುರಲ್ ಸ್ಟಾರ್ ವಿಜಯ ರಾಘವೇಂದ್ರ, ನಾಯಕಿಯಾಗಿ ‘ಮಿಲ್ಕ್ ಬ್ಯೂಟಿ’ ಪ್ರಿಯಾಂಕಾ ತಿಮ್ಮೇಶ್, ರಾಜ್ ಬಲವಾಡಿ, ವಸಂತ್ ಕುಮಾರ್, ಮನು, ಬುಲೆಟ್ ವಿನು, ಸಂದೀಪ್, ಸನತ್, ಸೌಂದರ್ಯ, ನವನೀತ, ಮಮತಾ, ಸ್ವಾತಿ ಮೊದಲಾದವರಿದ್ದಾರೆ. ತಾಂತ್ರಿಕ ವರ್ಗದಲ್ಲಿ ಛಾಯಾಗ್ರಹಣ ಮುತ್ತುರಾಜ್, ವಿ.ಮನೋಹರ್ ಸಂಗೀತ , ಭಜರಂಗಿ ಮೋಹನ್ ನೃತ್ಯ ಸಂಯೋಜನೆ, ಥ್ರಿಲ್ಲರ್ಮಂಜು ಸಾಹಸ, ಬಾಬುಖಾನ್ ಕಲಾ ನಿರ್ದೇಶನ, ನೊಣವಿನಕೆರೆ ಕುಮಾರ ಪ್ರಸಾಧನ, ಮುತ್ತುರಾಜ್.ಟಿ ಸಂಕಲನ, ನಾಗೇಂದ್ರ, ಡಾ. ಪ್ರಭು.ಗಂಜಿಹಾಳ, ಡಾ.ವೀರೇಶ್ ಹಂಡಿಗಿ ಪಿ.ಆರ್.ಓ, ಸಹ ನಿರ್ದೇಶನ ಮನು ಮತ್ತು ಧೀರಜ್ ಅವರದಿದ್ದು, ಕೆ ವಸಂತ್ಕುಮಾರ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಜೊತೆಗೆ ಚಿತ್ರಕ್ಕೆ ಹಾಡುಗಳನ್ನು ಬರೆದು ತತ್ವಜ್ಞಾನಿಯಾಗಿ ಅಭಿನಯಿಸಿದ್ದಾರೆ. ಎನ್. ಜಯರಾಮ್, ಕೆ. ಎನ್. ಮಂಜುನಾಥ್, ಕೆ. ವೆಂಕಟೇಶ್, ಬಿ. ಚಿದಾನಂದ ಮೂರ್ತಿ, ಸುರೇಶ್ ಬಾಬು, ರವಿ, ಅಶ್ವಥನಾರಾಯಣ, ಡಾ. ಎಮ್. ಶಿವಕುಮಾರ್ ಹಾಗೂ ಕುಸುಮ ವಸಂತ್ ಕುಮಾರ್ ಚಿತ್ರ ನಿರ್ಮಿಸಿದ್ದಾರೆ.
**
-ಡಾ.ಪ್ರಭು ಗಂಜಿಹಾಳ
ಮೊ:೯೪೪೮೭೭೫೩೪೬


