ರಸ್ತೆ ಸುರಕ್ಷತೆಗೆ ಹೆಲ್ಮೆಟ್ ಕಡ್ಡಾಯ : ಡಿವೈಎಸ್ಪಿ ನ್ಯಾಮಗೌಡರ್ ಮನವಿ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು
Helmet mandatory for road safety: DySP Nyamgoudar appeals




ರಸ್ತೆ ಸುರಕ್ಷತೆಗೆ ಹೆಲ್ಮೆಟ್ ಕಡ್ಡಾಯ : ಡಿವೈಎಸ್ಪಿ ನ್ಯಾಮಗೌಡರ್ ಮನವಿ

ಜಾಹೀರಾತು


ಗಂಗಾವತಿ :ಜು13 ರಸ್ತೆ ಅಪಘಾತಗಳಿಂದ ಜೀವಹಾನಿ ತಪ್ಪಿಸಲು ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಡಿವೈಎಸ್ಪಿ ಜೆ.ಎಸ್. ನ್ಯಾಮಗೌಡರ್ ಸಾರ್ವಜನಿಕರಿಗೆ ಕರೆ ನೀಡಿದರು ಮಾದ್ಯಮನೊಂದಿಗೆ ಮಾತನಾಡಿದ ಅವರು, ದ್ವಿಚಕ್ರ ವಾಹನ ಸವಾರರು ಹಾಗೂ ಹಿಂಬದಿ ಸವಾರರೂ ಹೆಲ್ಮೆಟ್ ಧರಿಸುವುದರಿಂದ ಗಂಭೀರ ಗಾಯಗಳು ಮತ್ತು ಜೀವಹಾನಿಯನ್ನು ತಡೆಗಟ್ಟಬಹುದು ಎಂದು ಹೇಳಿದರು.
ವಾಹನ ಚಲಾಯಿಸುವ ವೇಳೆ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅತಿವೇಗ, ಮೊಬೈಲ್ ಬಳಕೆ ಹಾಗೂ ನಿರ್ಲಕ್ಷ್ಯದಿಂದ ವಾಹನ ಚಲಾಯಿಸುವುದನ್ನು ತಪ್ಪಿಸಬೇಕು ಎಂದು ಸಲಹೆ ನೀಡಿದರು.
“ಹೆಲ್ಮೆಟ್ ಧರಿಸುವುದು ಕೇವಲ ಕಾನೂನು ಪಾಲನೆಯಷ್ಟೇ ಅಲ್ಲ, ಅದು ನಮ್ಮ ಜೀವ ರಕ್ಷಣೆಗೆ ಅತ್ಯಗತ್ಯವಾಗಿದೆ. ಪ್ರತಿಯೊಬ್ಬರೂ ಜವಾಬ್ದಾರಿಯಿಂದ ನಡೆದುಕೊಂಡು ಸುರಕ್ಷಿತ ಸಂಚಾರಕ್ಕೆ ಸಹಕರಿಸಬೇಕು” ಎಂದು ಡಿವೈಎಸ್ಪಿ ಜೆ.ಎಸ್. ನ್ಯಾಮಗೌಡರ್ ತಿಳಿಸಿದರು.

Total Views: 0
Share This Article