ವಿಕಲಚೇತನ ವಿದ್ಯಾರ್ಥಿಗಳ ಶುಲ್ಕ ಮರುಪಾವತಿಗೆ ಅರ್ಜಿ ಆಹ್ವಾನ

H.Mallikarjun
H.Mallikarjun - Kalyanasiri
1 Min Read

Call for applications for reimbursement of fees for differently-abled students

ವಿಕಲಚೇತನ ವಿದ್ಯಾರ್ಥಿಗಳ ಶುಲ್ಕ ಮರುಪಾವತಿಗೆ ಅರ್ಜಿ ಆಹ್ವಾನ

ಕೊಪ್ಪಳ ಆಗಸ್ಟ್ 14 (ಕರ್ನಾಟಕ ವಾರ್ತೆ): ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2026-27ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ನಂತರದ ತರಗತಿಗಳಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಅರ್ಹ ವಿಕಲಚೇತನ ವಿದ್ಯಾರ್ಥಿಗಳಿಂದ ಶುಲ್ಕ ಮರುಪಾವತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಹ ವಿದ್ಯಾರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಕಾಲೇಜು ಮುಖ್ಯಸ್ಥರಿಂದ ದೃಢೀಕರಿಸಿ, ಅಗತ್ಯ ದಾಖಲೆಗಳೊಂದಿಗೆ ಸೆಪ್ಟೆಂಬರ್ 30 ರೊಳಗೆ ಕಚೇರಿ ಅವಧಿಯಲ್ಲಿ ಸಲ್ಲಿಸಬೇಕು. ಅರ್ಜಿಗಳನ್ನು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಾರ್ಯಾಲಯ, ಸರ್ಕಾರಿ ನೌಕರರ ಭವನ, ಐ.ಬಿ. ಎದುರುಗಡೆ, ಗೋವಿಂದರಾಯ ದೇವಸ್ಥಾನದ ಹಿಂದುಗಡೆ, ಕಿನ್ನಾಳ ರಸ್ತೆ, ಕೊಪ್ಪಳ ಇಲ್ಲಿ ಸಲ್ಲಿಸಬಹುದು.
ಶುಲ್ಕ ಮರುಪಾವತಿ ಮೊತ್ತವನ್ನು ನೇರವಾಗಿ ವಿದ್ಯಾರ್ಥಿಯ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದರಿಂದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಯ ವಿವರವನ್ನು ಕಡ್ಡಾಯವಾಗಿ ನೀಡಬೇಕು. ನಿಗದಿತ ಅರ್ಜಿ ನಮೂನೆಯೊಂದಿಗೆ ಯು.ಡಿ.ಐ.ಡಿ. ಕಾರ್ಡ್ನ ಝರಾಕ್ಸ್ ಪ್ರತಿ, ಚಾಲ್ತಿಯಲ್ಲಿರುವ ದೃಢೀಕರಿಸಿದ ಜಾತಿ ಪ್ರಮಾಣ ಪತ್ರ, ದೃಢೀಕರಿಸಿದ ಚಾಲ್ತಿ ಬ್ಯಾಂಕ್ ಖಾತೆಯ ಝರಾಕ್ಸ್ ಪ್ರತಿ, ಶುಲ್ಕ ಪಾವತಿಸಿದ ಮೂಲ ರಸೀದಿ, ಆಧಾರ್ ಕಾರ್ಡ್ ಪ್ರತಿ, ಈ ಎಲ್ಲ ದಾಖಲೆಗಳನ್ನು ಲಗತ್ತಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಎಂ.ಆರ್.ಡಬ್ಲ್ಯೂಗಳಾದ ಕೊಪ್ಪಳದ ಜಯಶ್ರೀ ಮೊ.ಸಂ: 9980126391, ಯಲಬುರ್ಗಾ ಶಶಿಕಲಾ ಮೊ.ಸಂ: 8147749523, ಕುಕನೂರು ವೆಂಕರೆಡ್ಡಿ ಮೊ.ಸಂ: 6360721033, ಕುಷ್ಟಗಿ ಚಂದ್ರಶೇಖರ ಮೊ.ಸಂ: 9916308585, ಗಂಗಾವತಿ ಮಂಜುಳಾ ಮೊ.ಸಂ: 7975398202 ಅಥವಾ ಗ್ರಾಮ ಪಂಚಾಯತಿಗಳಲ್ಲಿ ಕಾರ್ಯನಿರ್ವಹಿಸುವ ವಿ.ಆರ್.ಡಬ್ಲ್ಯೂಗಳು ಹಾಗೂ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತಿಗಳಲ್ಲಿ ಕಾರ್ಯನಿರ್ವಹಿಸುವ ಯು.ಆರ್.ಡಬ್ಲ್ಯೂಗಳನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ: 08539-295496 ಗೆ ಸಂಪರ್ಕಿಸಬಹುದು ಎಂದು ಕೊಪ್ಪಳ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Total Views: 0
ಜಾಹೀರಾತು
ಜಾಹೀರಾತು
Share This Article