Request to find heirs of an unknown deceased
ಅಪರಿಚಿತ ಮೃತನ ವಾರಸುದಾರರ ಪತ್ತೆಗೆ ಮನವಿ
ಕೊಪ್ಪಳ ಆಗಸ್ಟ್ 12 (ಕರ್ನಾಟಕ ವಾರ್ತೆ): ಬೇವೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಅಪರಿಚಿತ ಮೃತ ವ್ಯಕ್ತಿಯ ವಾರಸುದಾರರ ಪತ್ತೆಗೆ ಬೇವೂರು ಪೊಲೀಸ್ ಠಾಣೆಯ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಆಗಸ್ಟ್ 7 ರಂದು ಬೆಳಗಿನ ಜಾವ 4 ಗಂಟೆಯಿಂದ 5 ಗಂಟೆಯ ನಡುವೆ ಯಾವುದೋ ವಾಹನ ಚಾಲಕ ತನ್ನ ವಾಹನವನ್ನು ಕುಷ್ಟಗಿ ಕಡೆಯಿಂದ ಹೊಸಪೇಟೆ ಕಡೆಗೆ ಅತಿ ವೇಗವಾಗಿ ನಿರ್ಲಕ್ಷತನದಿಂದ ಜೀವಕ್ಕೆ ಹಾನಿಯಾಗುವಂತೆ ಚಲಾಯಿಸಿಕೊಂಡು ಬಂದು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ 55 ರಿಂದ 60 ವರ್ಷದ ವಯಸ್ಸಿನ ಅಪರಿಚಿತ ವ್ಯಕ್ತಿಗೆ ಅಪಘಾತ ಮಾಡಿದ್ದರಿಂದ ವ್ಯಕ್ತಿಯು ಬಾರಿ ಗಾಯಗೊಂಡು ಮೃತಪಟ್ಟಿದ್ದು,ಅಪರಿಚಿತ ವ್ಯಕ್ತಿಯು ತನ್ನ ವಾಹನವನ್ನು ನಿಲ್ಲಿಸದೆ ಹಾಗೆ ಹೋಗಿದ್ದು, ಈ ಬಗ್ಗೆ ಬೇವೂರು ಪೊಲೀಸ್ ಠಾಣೆ ಗುನ್ನೆ ನಂ.119/2026 281, 106 ಭಾರತೀಯ ನ್ಯಾಯ ಸಂಹಿತೆ 2023 ಮತ್ತು 187 ಐ.ಎಮ್.ವಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಮೃತನ ಚಹರೆ ಪಟ್ಟಿ: ಅನಾಮಧೇಯ ವ್ಯಕ್ತಿ,ಎತ್ತರ 5.9 ಅಡಿ, ವಯಸ್ಸು 55 ರಿಂದ 60 ವರ್ಷ, ತೆಳ್ಳನೆಯ ಮೈಕಟ್ಟು, ಸಾದಾ ಗೋಧಿ ಮೈ ಬಣ್ಣ, ಉದ್ದನೆಯ ಮುಖ ಹೊಂದಿದ್ದು, ಮೃತನು ಬಿಳಿ ಬಣ್ಣದ ಅಂಗಿ ಹಾಗೂ ಹಳದಿ ಬಣ್ಣದ ಲುಂಗಿ ಧರಿಸಿರುತ್ತಾನೆ. ಈ ಮೃತನ ವಾರಸುದಾರರು ಪತ್ತೆಯಾದಲ್ಲಿ ಅಥವಾ ಇತನ ಬಗ್ಗೆ ಮಾಹಿತಿ ದೊರೆತಲ್ಲಿ ಬೇವೂರು ಪೊಲೀಸ್ ಠಾಣೆ ಪಿಎಸ್‌ಐ ಮೊ.ನಂ. 9480803751 ಹಾಗೂ ದೂರವಾಣಿ ಸಂಖ್ಯೆ 08534-227641 ಅಥವಾ ಕೊಪ್ಪಳ ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ 08539-220222 ಗೆ ಮಾಹಿತಿ ನೀಡಲು ಬೇವೂರು ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.

Total Views:
0