ವ್ಯಕ್ತಿ ಕಾಣೆ: ಪತ್ತೆಗೆ ಸಹಕರಿಸಲು ಬೇವೂರು ಪೊಲೀಸ್ ಠಾಣೆಯಿಂದ ಮನವಿ

H.Mallikarjun
H.Mallikarjun - Kalyanasiri
1 Min Read

Missing person: Request from Bevooru police station to help in locating

ವ್ಯಕ್ತಿ ಕಾಣೆ: ಪತ್ತೆಗೆ ಸಹಕರಿಸಲು ಬೇವೂರು ಪೊಲೀಸ್ ಠಾಣೆಯಿಂದ ಮನವಿ

ಕೊಪ್ಪಳ ಆಗಸ್ಟ್ 12 (ಕರ್ನಾಟಕ ವಾರ್ತೆ): ಕುಕನೂರು ತಾಲೂಕಿನ ಮಂಗಳೂರು ಗ್ರಾಮದ ನಿವಾಸಿಯಾದ ಮಂಜುನಾಥ ತಂದೆ ಶಂಕ್ರಪ್ಪ ನಡುಲಮನಿ ಈತನು ಕಾಣೆಯಾಗಿದ್ದು, ಪತ್ತೆಗೆ ಸಹಕರಿಸುವಂತೆ ಬೇವೂರು ಪೊಲೀಸ್ ಠಾಣೆಯ ಅಸಿಸ್ಟೆಂಟ್ ಸಬ್ ಇನ್ಸಪೆಕ್ಟರ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಮಂಜುನಾಥ ತಂದೆ ಶಂಕ್ರಪ್ಪ ನಡುಲಮನಿ ಎಂಬ ವ್ಯಕ್ತಿಯು 2026ರ ಫೆಬ್ರವರಿ 2 ರಂದು ತಮ್ಮ ಮನೆಯಿಂದ ಯಾವುದೋ ಕಾರಣಕ್ಕೆ ಯಾರಿಗೂ ಹೇಳದೆ ಕೇಳದೆ ಹೋಗಿದ್ದು, ವಾಪಸ್ ಬಂದಿರದ ಕಾರಣ ಬೇವೂರು ಪೊಲೀಸ್ ಠಾಣೆ ಗುನ್ನೆ ನಂ.12/2026 ಕಲಂ ಮನುಷ್ಯ ಕಾಣೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
*ವ್ಯಕ್ತಿ ಚಹರೆ ಪಟ್ಟಿ:* ಮಂಜುನಾಥ ತಂದೆ ಶಂಕ್ರಪ್ಪ ನಡುಲಮನಿ, ವಯಸ್ಸು 31 ವರ್ಷ, 5.6 ಅಡಿ ಎತ್ತರ,ಸಾಧಾರಣ ಮೈಕಟ್ಟು,ದುಂಡನೆಯ ಮುಖ ,ಕಪ್ಪು ಮೈಬಣ್ಣ,,ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುತ್ತಾನೆ. ವ್ಯಕ್ತಿಯು ಮನೆಯಿಂದ ಹೊರಡುವಾಗ ಟೀಶರ್ಟ್,ಚಾಕಲೇಟ್ ಬಣ್ಣದ ಪ್ಯಾಂಟ್ ಧರಿಸುತ್ತಾನೆ. ಈ ವ್ಯಕ್ತಿಯ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತಲ್ಲಿ ಬೇವೂರು ಪೊಲೀಸ್ ಠಾಣೆ ಪಿಎಸ್‌ಐ ಮೊ.ನಂ.9480803751 ಹಾಗೂ ದೂರವಾಣಿ ಸಂಖ್ಯೆ 08534-227641 ಅಥವಾ ಕೊಪ್ಪಳ ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ 08539-220222 ಗೆ ಮಾಹಿತಿ ನೀಡಲು ಬೇವೂರು ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.
Total Views: 0
Share This Article