Milk and fruits were distributed at the Taluk Women and Children's Hospital to mark the birthday of Whitefield Murugesh, the State President of the Bhim Praja Sangha.



ಭೀಮ್ ಪ್ರಜಾ ಸಂಘದ ರಾಜ್ಯಾಧ್ಯಕ್ಷ ವೈಟ್ ಫೀಲ್ಡ್ ಮುರಗೇಶ್ ಹುಟ್ಟುಹಬ್ಬ ಅಂಗವಾಗಿ,ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಹಾಲು, ಹಣ್ಣು ವಿತರಣೆ,,

ಗಂಗಾವತಿ : ಭಾನುವಾರದಂದು ಭೀಮ್ ಪ್ರಜಾ ಸಂಘದ ರಾಜ್ಯಾಧ್ಯಕ್ಷರಾದ ವೈಟ್ ಫೀಲ್ಡ್ ಮುರಗೇಶ್ ಅವರ ಹುಟ್ಟು ಹಬ್ಬವನ್ನು ಜಿಲ್ಲಾ ಘಟಕದ ವತಿಯಿಂದ ಗಂಗಾವತಿ ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ರೋಗಿಗಳಿಗೆ ಬ್ರೆಡ್, ಹಾಲು ಮತ್ತು ಹಣ್ಣುಗಳು ವಿತರಣೆ ಮಾಡುವ ಮೂಲಕ ಅದ್ದೂರಿಯಾಗಿ ಆಚರಿಸಲಾಯಿತು.
ಈ ವೇಳೆ ಜಿಲ್ಲಾ ಭೀಮ್ ಪ್ರಜಾ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಕಟ್ಟಿಮನಿ ರೋಗಿಗಳಿಗೆ ಹಣ್ಣು ಹಾಲು ವಿತರಿಸಿ ಮಾತನಾಡಿ ಮುರಗೇಶ ಅಣ್ಣನವರ ಸದಾ ಕ್ರೀಯಾಶೀಲ ವ್ಯಕ್ತಿಯಾಗಿದ್ದು, ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಸಮಾಜ ಚಿಂತನೆಯನ್ನು ಹೊಂದಿದವರಾಗಿದ್ದಾರೆ ಎಂದರು.
ಸಮಾಜದಲ್ಲಿ ನೊಂದವರ ಹಾಗೂ ಶೋಷಿತರ ದ್ವನಿಯಾಗಿ ಸದಾ ಸಮಾಜ ಸೇವೆ ಮಾಡುವಲ್ಲಿ ಸಂಘಟನೆಗಳ ಕಾರ್ಯ ನಿರ್ವಹಿಸಬೇಕು ಎನ್ನುವ ರಾಜ್ಯಾಧ್ಯಕ್ಷರ ಆಸೆಯಂತೆ ನಮ್ಮ ಸಂಘಟನೆ ಜಿಲ್ಲೆಯಾದ್ಯಂತ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾರಟಗಿ ತಾಲ್ಲೂಕು ಅಧ್ಯಕ್ಷರು ಅನಿಲ್ ರಾಠೋಡ್ ಮತ್ತು ಆನಂದ್ ರಾತೋಡ್, ನವಲಿ ಕನಕಗಿರಿ ತಾಲ್ಲೂಕು ಅಧ್ಯಕ್ಷ ಯಮನೂರ ಜೆ, ಚಂದ್ರು ಗಂಗಾವತಿ, ನವೀನ್ ಗಂಗಾವತಿ, ರವಿಕುಮಾರ್ ಜಂತಗಲ್, ಹನುಮೇಶ್ ಗಂಗಾವತಿ, ಪಾಮಣ್ಣ ಗಂಗಾವತಿ, ನಾಗರಾಜ್ ಜಂತಗಲ್, ಚಂದ್ರಶೇಖರ ಜಂತಗಲ್, ಶಿವು ಜಂತಗಲ್, ಕಾರ್ತಿಕ್ ಜಂತಗಲ್, ಪಾಮಣ್ಣ ಜಂತಗಲ್, ರಾಮು ಸೇರಿದಂತೆ ಇನ್ನಿತರರು ಇದ್ದರು.
