ಸುರಭಿ ವೃದ್ಧಾಶ್ರಮದಲ್ಲಿ `ವಯೋ ಮಿತ್ರ’ ಕಾರ್ಯಕ್ರಮ

H.Mallikarjun
H.Mallikarjun - Kalyanasiri
1 Min Read

Surabhi Old Age Home’s ‘Vayo Mitra’ Program

ಸುರಭಿ ವೃದ್ಧಾಶ್ರಮದಲ್ಲಿ `ವಯೋ ಮಿತ್ರ’ ಕಾರ್ಯಕ್ರಮ

ಕೊಪ್ಪಳ ಆಗಸ್ಟ್ 01 (ಕರ್ನಾಟಕ ವಾರ್ತೆ): ಸರ್ಕಾರಿ ಆಯುರ್ವೇದ ಆಸ್ಪತ್ರೆ ಕೊಪ್ಪಳದ ವತಿಯಿಂದ ಕೊಪ್ಪಳ ನಗರದ ಸುರಭಿ ವೃದ್ಧಾಶ್ರಮದಲ್ಲಿ ನೆಲೆಸಿರುವ 40 ವಯೋ ವೃದ್ಧರಿಗಾಗಿ “ವಯೋ ಮಿತ್ರ” ಉಚಿತವಾಗಿ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಕಾರ್ಯಕ್ರಮವನ್ನು ಶುಕ್ರವಾರ (ಜು. 31ರಂದು) ಹಮ್ಮಿಕೊಳ್ಳಲಾಗಿತ್ತು.
ಹಿರಿಯ ವೈದ್ಯಾಧಿಕಾರಿಗಳಾದ ಡಾ. ಸುಜಾತ ಪಾಟೀಲ್ ಅವರು ವಯೋ ವೃದ್ಧರನ್ನು ಉದ್ದೇಶಿಸಿ ಮಾತನಾಡಿ, ಹಿರಿಯ ನಾಗರಿಕರು ಮಕ್ಕಳ ಸಮಾನ, ಸುರಭಿ ವೃದ್ಧಾಶ್ರಮದಲ್ಲಿ ಹಿರಿಯ ನಾಗರಿಕರ ಆರೈಕೆ ಮಾಡುತ್ತಿದ್ದು, ಹಿರಿಯ ನಾಗರಿಕರ ಆರೋಗ್ಯ ರಕ್ಷಿಸಲು ಆಯುಷ್ ಇಲಾಖೆ ಸದಾ ಸಿದ್ದವಿದೆ ಎಂದು ಹೇಳಿದರು ಹಾಗೂ ಸ್ವಚ್ಚತೆ ಮತ್ತು ಆರೋಗ್ಯದ ಬಗ್ಗೆ ಅರಿವು ಮೂಡಿಸಿದರು.
ಡಾ. ಕೆ.ಬಿ. ರಾಘವೇಂದ್ರ ಅವರು ರೋಗಿಗಳನ್ನು ತಪಾಸಣೆ ಮಾಡಿ ಚಿಕಿತ್ಸೆ ನೀಡಿದರು. ಗುರು ಸ್ವಾಮಿ ಶೂಶ್ರುಷಾಧಿಕಾರಿಗಳು, ರಾಧಾ ಚಲವಾದಿ, ಅರ್ಜುನ ದೊಡ್ಡಮನಿ, ರಾಮರೆಡ್ಡಿ, ಗಿರಿಜಾ ಮತ್ತು ಭಾಗ್ಯಲಕ್ಷ್ಮೀ ಅವರೊಂದಿಗೆ ಬಿ.ಪಿ ತಪಾಸಣೆ ಮತ್ತು ರಕ್ತ ತಪಾಸಣೆ ಮಾಡಿದರು. ಮುಂಜಿರ ಖಾನಮ್, ನಂದಿನಿ ಮತ್ತು ಮಹಾಲಕ್ಷ್ಮೀ ಯವರು ಔಷಧಿಗಳನ್ನು ವಿತರಿಸಿದರು.
ಈ ಕಾರ್ಯಕ್ರಮದಲ್ಲಿ ಸುರಭಿ ವೃದ್ಧಾಶ್ರಮದ ವ್ಯವಸ್ಥಾಪಕರಾದ ಕೃಷ್ಣ ಸೇರಿದಂತೆ ಕೊಪ್ಪಳ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿಗಳು, ವೈದ್ಯಾಧಿಕಾರಿಗಳು, ಶೂಶ್ರುಷಾಧಿಕಾರಿಗಳು, ಔಷಧಿ ವಿತರಕರು ಸೇರಿದಂತೆ ಒಟ್ಟು 12 ಜನ ಸಿಬ್ಬಂದಿ ಹಾಗೂ ಸುರಭಿ ವೃದ್ಧಾಶ್ರಮದ ಸಿಬ್ಬಂದಿಗಳು ಉಪಸ್ಥಿತರಿದ್ದರು. ಒಟ್ಟು 40 ಜನ ವಯೋ ವೃದ್ಧರಿಗೆ ರಕ್ತ ತಪಾಸಣೆ, ಬಿಪಿ ತಪಾಸಣೆ ಸಹಿತ ಚಿಕಿತ್ಸೆ ನೀಡಲಾಯಿತು.
Total Views: 0
Share This Article