ದಾಂಡೇಲಿ: ಉತ್ತರಕನ್ನಡ ಜಿಲ್ಲೆಯ ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿನ ದಾಂಡೇಲಿ ನಗರ ಸಭೆಯ ವ್ಯಾಪ್ತಿಯಲ್ಲಿ ವಾಸಮಾಡುತ್ತಿರುವ ಬಡ ಹಾಗೂ ಬೀದಿ ಬದಿ ವ್ಯಾಪಾರಸ್ಥ ಕಾರ್ಮಿಕ ಕುಟುಂಬಗಳಿಗೆ 2013-14 ನೇ ಸಾಲಿನಲ್ಲಿ ವಸತಿ ರಹಿತ ಬಡ ಕುಟುಂಬಗಳಿಗೆ ವಸತಿ ಸೌಲಭ್ಯ ಕಲ್ಪಿಸಲು ಜಿ+2 ಮಾದರಿಯಲ್ಲಿ ದಾಂಡೇಲಿ ಹೊರವಲಯದ ಅಂಬೆವಾಡಿ ಕಾಲೊನಿಯ ವ್ಯಾಪ್ತಿಯಲ್ಲಿ 1200 ಮನೆಗಳನ್ನು ನಿರ್ಮಿಸಲು 50 ಕೋಟಿ ವೆಚ್ಚದಲ್ಲಿ ಕರ್ನಾಟಕ ಗೃಹ ಮಂಡಳಿಯ ಸಹಯೋಗದಲ್ಲಿ ಆರ್.ಎಸ್.ಪಿ ಇನ್ಫ್ರಾ ಕನ್ಸಷ್ಟ್ರಕ್ಷನ್ ಲಿಮಿಟೆಡ್ ಎಂಬ ಬೆಂಗಳೂರು ಮೂಲದ ಕಂಪನಿಗೆ ಗುತ್ತಿಗೆ ನೀಡಲಾಗಿದ್ದು, ಸದರಿ ಇಲ್ಲಿಯವರೆಗೂ ಸಹ ವಸತಿ ಸಮಚ್ಚಯಗಳ ಕಾಮಗಾರಿಯನ್ನು ಪೂರೈಸದೇ, ಇತ್ತ 834 ಬಡ ಕುಟುಂಬಗಳಿಂದ ತಲಾ 70,000 ಸಾವಿರಕ್ಕೂ ಹೆಚ್ಚು ಹಣ ಪಡೆದು ಬೀದಿಗೆ ಬೀಳುತ್ತಿರುವ ಕುಟುಂಬಗಳ ಪರಿಸ್ಥಿಯ ಸಮಸ್ಯೆ ಬೆಳಕಿಗೆ ಬಂದಿದೆ. ಇನ್ನೂ ಈ ಸಮಸ್ಯೆಯ ಬಗ್ಗೆ ನಗರಸಭೆ ಕಮಿಷನರ್ ರವರಿಗೆ ಕೇಳಿದ್ರೆ ಅತೀ ಶೀಘ್ರದಲ್ಲೇ ವಿತರಣೆ ಮಾಡುತ್ತೇವೆ ಅಂತಾ ಹಾರಿಕೆ ಉತ್ತರ ನೀಡುತ್ತಿದ್ದಾರೆ, ಇನ್ನೂ ಗುತ್ತಿಗೆದಾರ ಕಂಪನಿಯ ಮಾಲೀಕ ತುಂಬಾನೇ ಪ್ರಭಾವಿ ಯಾಗಿರುವುದರಿಂದ ತನ್ನ ಪ್ರಭಾವವನ್ನು ಉಪಯೋಗಿಸಿ ಉತ್ತರ ಕನ್ನಡ ಜಿಲ್ಲಾಧಿಕಾರಿಗಳು, ಜಿಲ್ಲಾ ನಗರಾಭಿವೃದ್ಧಿ ಕೋಶ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಬಾಯಿ ಮುಚ್ಚಿಸಿದರೇ ಎಂಬ ಸಂಶಯ ಕಾಡುತ್ತಿದೆ. ಇನ್ನೂ ವಸತಿ ಸಮಚ್ಚಯದ ಕಾಮಗಾರಿಯು ಸಹ ತುಂಬಾನೇ ಕಳಪೆಯಿಂದ ಕೂಡಿದ್ದು, ಕಡಿಮೆ ಗುಣಮಟ್ಟದ ಕಬ್ಬಿಣ ಹಾಗೂ ಕಡಿಮೆ ಸಾಮರ್ಥ್ಯದ ಕಬ್ಬಿಣವನ್ನು ಹಾಕಿ ಸೂಕ್ತ ನಿರ್ವಹಣೆ ಇಲ್ಲದೇ ಈಗಾಗಲೇ ನಿರ್ಮಾಣ ಮಾಡಿರುವ ಮನೆಗಳು ಸಹ ಹಾಳಾಗಿದ್ದು ತುಂಬಾನೇ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ, ಇಷ್ಟೆಲ್ಲಾ ಆಗಿ ನಗರಸಭೆ ಅಧಿಕಾರಿಗಳು ಇತ್ತೀಚೆಗೆ ಮುಕ್ತಾಯವಾದ ಚುನಾವಣಾ ಪೂರ್ವದಲ್ಲಿ ಎಲ್ಲರಿಗೂ ಸಹ ಸಮಚ್ಚಯಗಳಲ್ಲಿ ನಿರ್ಮಾಣ ಮಾಡುತ್ತಿರುವ ಮನೆಗಳನ್ನು ಅಲರ್ಟ್ ಮಾಡಿದ ಆದೇಶ ಪತ್ರಗಳನ್ನು ನೀಡಿ ಸುಮ್ಮನಾಗಿದ್ದಾರೆ, ಇನ್ನೂ ಈ ಬಗ್ಗೆ ಮಾಹಿತಿ ಪಡೆಯಲು ಮೇಲಧಿಕಾರಿಗಳಿಗೆ ಕರೆ ಮಾಡಿದ್ರೆ ಈಗಾಗಲೇ 31 ಕೋಟಿ ಹಣವನ್ನು ಪಡೆದು ಇತ್ತ ಕಾಮಗಾರಿಯನ್ನು ಪೂರೈಸದೇ ಮೊಂಡಾಟ ಆಡುತ್ತಿರುವುದು ಮೇಲ್ನೋಟಕ್ಕೆ ಎದ್ದು ಕಾಡುತ್ತಿದೆ. ಅವರು ಸಹ ಒಬ್ಬರ ಮೇಲೆ ಒಬ್ಬರು ಸಬೂಬು ಹೇಳುತ್ತಿರುವುದು ನೋಡಿದ್ರೆ ವಸತಿ ಸೌಲಭ್ಯಕ್ಕಾಗಿ ದುಡ್ಡು ಕೊಟ್ಟು ದಾಂಡೇಲಿ ನಗರ ವ್ಯಾಪ್ತಿಯ 850 ಕ್ಕೂ ಹೆಚ್ಚು ಬಡಕುಟುಂಬಗಳು ಮೋಸ ಹೋದರೇ ಎಂಬ ಸಂಶಯ ವ್ಯಕ್ತವಾಗುತ್ತಿದೆ. ಆದ್ದರಿಂದ ಇವರ ಮನವಿ ಮೇರೆಗೆ ಇಂದು ಪತ್ರಕರ್ತ ಹಾಗೂ ಹೋರಾಟಗಾರ ಬಸವರಾಜು ಇಲ್ಲಿಗೆ ಭೇಟಿ ಕೊಟ್ಟು ಸಮಗ್ರವಾಗಿ ವರದಿ ತಯಾರಿಸಿ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳು, ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಯೋಜನಾ ನಿರ್ದೇಶಕರ ಗಮನಕ್ಕೆ ತೆಗೆದುಕೊಂಡು ಬಂದು ಪಲಾನುಭವಿಗಳ ಅಭಿಪ್ರಾಯ ಸಂಗ್ರಹ ಮಾಡಿ ಸಮಗ್ರವಾಗಿ ವರದಿ ತಯಾರಿಸಿ ಬೆಳಕು ಚೆಲ್ಲುವ ಮಾಡಿದ್ದಾರೆ. ಇನ್ನಾದ್ರೂ ಈ ಬಡಕುಟುಂಬಗಳಿಗೆ ನ್ಯಾಯ ದೊರಕುವುದೇ ಎಂಬುದನ್ನು ಕಾದುನೋಡಬೇಕಿದೆ. *🙏🤝✒️*
ದಾಂಡೇಲಿ ನಗರಸಭೆಯ ವಸತಿ ಸಮಚ್ಚಯ ನಿರ್ಮಾಣ ಕಾಮಗಾರಿಯನ್ನು ಪೂರೈಸದೇ ಸತಾಯಿಸುತ್ತಿರುವ ಆರ್.ಎಸ್.ಪಿ ಕನ್ಸಷ್ಟ್ರಕ್ಷನ್ ಗುತ್ತಿಗೆದಾರ ಕಂಪನಿಯಿಂದ ಬಡ ಕುಟುಂಬಗಳಿಗೆ ನ್ಯಾಯ ದೊರಕಿಸಿ : ಪತ್ರಕರ್ತ ಹಾಗೂ ಹೋರಾಟಗಾರ ಬಸವರಾಜು ಆಗ್ರಹ
ಜಾಹೀರಾತು
ಜಾಹೀರಾತು