Rusted electric pole in the vegetable market: A threat to life?!
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ ಕಾಯಿಪಲ್ಲೆ ಮಾರುಕಟ್ಟೆಯಲ್ಲಿ ತುಕ್ಕು ಹಿಡಿದ ವಿದ್ಯುತ್ ಕಂಬ: ಪಾದಚಾರಿಗಳು, ಬಡ ವ್ಯಾಪಾರಿಗಳ ಜೀವಕ್ಕೆ ಕಂಟಕ?!
ಅಥಣಿ (ಬೆಳಗಾವಿ):ಪಟ್ಟಣದ ವಾರ್ಡ್ ನಂಬರ್ 5ರ ಕಾಯಿಪಲ್ಲೆ ಮಾರುಕಟ್ಟೆಯ ತಗಾರಿ ಗಲ್ಲಿಯಲ್ಲಿರುವ ಕಬ್ಬಿಣದ ವಿದ್ಯುತ್ ಕಂಬವೊಂದು ತೀವ್ರವಾಗಿ ತುಕ್ಕು ಹಿಡಿದು ಕೆಳಭಾಗದಲ್ಲಿ ಸಂಪೂರ್ಣವಾಗಿ ಕಟ್ಟಾಗಿದ್ದು, ಬಡ ತರಕಾರಿ ವ್ಯಾಪಾರಿಗಳು ಹಾಗೂ ಸಾರ್ವಜನಿಕರ ಜೀವಕ್ಕೆ ತೀವ್ರ ಆತಂಕ ತಂದೊಡ್ಡಿದೆ.
ಮಳೆಯಾಗುತ್ತಿರುವುದರಿಂದ, ಕೆಳಭಾಗದಲ್ಲಿ ಮುರಿದುಬಿದ್ದಿರುವ ಈ ಕಬ್ಬಿಣದ ಕಂಬಕ್ಕೆ ವಿದ್ಯುತ್ (Current Leakage) ಪ್ರವಹಿಸುತ್ತಿದೆ.? ಇದೇ ಕಂಬದ ಕೆಳಗೆ ದಿನನಿತ್ಯ ಬಡ ತರಕಾರಿ ವ್ಯಾಪಾರಿಗಳು ಕುಳಿತು ವ್ಯಾಪಾರ ಮಾಡುತ್ತಿದ್ದು, ಸಾವಿರಾರು ಸಾರ್ವಜನಿಕರು ಸಂಚರಿಸುತ್ತಾರೆ. ಮಳೆಯ ನೀರು ಮತ್ತು ವಿದ್ಯುತ್ ಸ್ಪರ್ಶದಿಂದ ಯಾವಾಗ ಏನು ಅನಾಹುತ ಸಂಭವಿಸುತ್ತದೆಯೋ ಎಂಬ ಭಯದಲ್ಲೇ ವ್ಯಾಪಾರಿಗಳು ಕಾಲ ಕಳೆಯುವಂತಾಗಿದೆ.
ಸಾರ್ವಜನಿಕರು – ಮಾರುಕಟ್ಟೆಯಲ್ಲಿರುವ ಒಂದು ಕಬ್ಬಿಣದ ಕಂಬಕ್ಕೆ ಪ್ಲಾಸ್ಟಿಕ್ ಪೈಪ್ ಕಟ್ ಮಾಡಿ ಹಾಕಿ ಅಪಾಯ ತಪ್ಪಿಸುವ ಸಣ್ಣ ಪ್ರಯತ್ನ ಮಾಡಲಾಗಿದ್ದರೆ, ಪಕ್ಕದಲ್ಲೇ ಇರುವ ಮತ್ತೊಂದು ಕಂಬಕ್ಕೆ ಯಾವುದೇ ರಕ್ಷಣೆಯನ್ನೂ ನೀಡದೆ ಹಾಗೆಯೇ ಬಿಡಲಾಗಿದೆ. ಸಂಬಂಧಪಟ್ಟ ಹೆಸ್ಕಾಂ (HESCOM) ಹಾಗೂ ಸ್ಥಳೀಯ ಆಡಳಿತದ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸಿ ಹೋದರೂ, ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸದೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೀವಹಾನಿಯಾದರೆ ಅಧಿಕಾರಿಗಳೇ ಹೊಣೆ: ಪ್ರವೀಣ್ ನಾಯಕ್ ಆಕ್ರೋಶ
ಈ ಕುರಿತು ಮಾಧ್ಯಮಗಳ ಮೂಲಕ ಆಡಳಿತದ ಗಮನ ಸೆಳೆದಿರುವ ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ಅಥಣಿ ತಾಲೂಕು ಅಧ್ಯಕ್ಷರಾದ ಪ್ರವೀಣ್ ನಾಯಕ್ ಅವರು ಮಾತನಾಡಿ, ಈಗಾಗಲೇ ಮಾಧ್ಯಮದಲ್ಲಿ ವರದಿ ಮಾಡಿದ್ರು ಎಚ್ಚರಿಕೆ ಕೊಳ್ಳುತ್ತಿಲ್ಲ “ಸುಮಾರು ವರ್ಷಗಳ ಹಿಂದೆ ಅಳವಡಿಸಲಾಗಿದ್ದ ಈ ಕಬ್ಬಿಣದ ಕಂಬಗಳು ತುಕ್ಕು ಹಿಡಿದು ತಳಭಾಗದಲ್ಲಿ ಮುರಿದುಬಿದ್ದಿವೆ. ಮಳೆಯಿಂದಾಗಿ ಕಂಬಕ್ಕೆ ಕರೆಂಟ್ ಬರುತ್ತಿದ್ದು, ಸಾರ್ವಜನಿಕರು ಭಯದಲ್ಲಿದ್ದಾರೆ. ಅಧಿಕಾರಿಗಳು ಬಂದು ನೋಡಿ ಹೋದರೂ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ. ಒಂದು ವೇಳೆ ಏನಾದರೂ ಜೀವಹಾನಿ ಅಥವಾ ಅನಾಹುತ ಸಂಭವಿಸಿದರೆ ಅದಕ್ಕೆ ಸಂಬಂಧಪಟ್ಟ ಹೆಸ್ಕಾಂ ಹಾಗೂ ಪುರಸಭೆ ಅಧಿಕಾರಿಗಳೇ ಸಂಪೂರ್ಣ ಹೊಣೆಗಾರರಾಗುತ್ತಾರೆ,” ಎಂದು ಎಚ್ಚರಿಸಿದರು.
ಆದ್ದರಿಂದ ಸಂಬಂಧಪಟ್ಟ ಇಲಾಖೆಯ ಮೇಲಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ, ಅಪಾಯಕಾರಿ ಕಬ್ಬಿಣದ ಕಂಬಗಳನ್ನು ತೆರವುಗೊಳಿಸಿ ನೂತನ ಸಿಮೆಂಟ್ ಕಂಬಗಳನ್ನು ಅಳವಡಿಸುವ ಮೂಲಕ ಸಾರ್ವಜನಿಕರ ಹಾಗೂ ಬಡ ವ್ಯಾಪಾರಿಗಳ ಜೀವ ರಕ್ಷಣೆಗೆ ಧಾವಿಸಬೇಕಿದೆ.
ಸಂಬಂಧಪಟ್ಟ ಹೊಸ್ಕಾಂ ಅಧಿಕಾರಿಗಳು ಪುರಸಭೆ ಅಧಿಕಾರಿಗಳು ತಾಲೂಕ ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ರಾಜ್ಯ ಸರ್ಕಾರದ ಸಚಿವರು ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರ ಕೇಂದ್ರ ಸರ್ಕಾರದ ಸಚಿವರು ಪ್ರಧಾನ ಮಂತ್ರಿಗಳು ಹಾಗೂ ರಾಜ್ಯಪಾಲರು ರಾಷ್ಟ್ರಪತಿಗಳು ಮಾನ್ಯ ಶಾಸಕರು ಇನ್ನಾದರೂ ಈ ಸಮಸ್ಯೆ ಕಬ್ಬಿಣದ ಲೈಟ್ ಕಂಬ ಕಟ್ಟಾಗಿರುತ್ತದೆ ಎರಡು ಕಂಬಕ್ಕೆ ಮಳೆ ಆಗುತ್ತಿರುವುದರಿಂದ ಕರೆಂಟ್ ಬರುತ್ತಿದೆ ಮತ್ತು ಅಥಣಿ ತಾಲೂಕಿನ ಅಭಿವೃದ್ಧಿ ಕೆರೆ ಅಭಿವೃದ್ಧಿ ಟ್ರಾಫಿಕ್ ಸಮಸ್ಯೆ ಅಭಿವೃದ್ಧಿ ಪುರಸಭೆ ಇದ್ದಿದ್ದ ನಗರಸಭೆಯಾಗಿ ವರ್ಗಾವಣೆ ಮುರುಗೇಂದ್ರ ಶಿವಯೋಗಿಗಳ ರೈಲ್ವೆ ನಿಲ್ದಾಣ ಸಿದ್ದೇಶ್ವರ ಇಮಾನ್ ನಿಲ್ದಾಣ ಜಿಲ್ಲಾ ಕಾರ್ಯಾಲಯಗಳನ್ನು ಜಿಲ್ಲೆಯ ನಾಗಿ ಹಾಗೂ ಅಭಿವೃದ್ಧಿಗಳನ್ನಾಗಿ ಯಾವಾಗ ಮಾಡುತ್ತಾರೆ ಬಗೆಹರಿಸುತ್ತಾರ ಯಥಾಸತಿ ಮುಂದುವರಿಸುತ್ತಾರೆ
ವಿಶೇಷ ವರದಿ: ಮಹೇಶ್ ಶರ್ಮಾ, ಅಥಣಿ

