ಬಯಲು ರಂಗಮಂದಿರ ವಿವಾದಬಹುಜನರ ಭಾವನೆಗಳನ್ನು ಗೌರವಿಸಲು ಆಡಳಿತಾಂಗಕ್ಕೆ ಧನರಾಜ ಈ. ಕರೆ

H.Mallikarjun
H.Mallikarjun - Kalyanasiri
2 Min Read
Open-air theatre controversy
Dhanaraj E. calls upon the administration to respect the sentiments of the masses.

ಬಯಲು ರಂಗಮಂದಿರ ವಿವಾದ
ಬಹುಜನರ ಭಾವನೆಗಳನ್ನು ಗೌರವಿಸಲು ಆಡಳಿತಾಂಗಕ್ಕೆ ಧನರಾಜ ಈ. ಕರೆ

ಜಾಹೀರಾತು

ಗಂಗಾವತಿ: ನಗರದ ಐತಿಹಾಸಿಕ ಜೂನಿಯರ್ ಕಾಲೇಜು ಮೈದಾನದಲ್ಲಿದ್ದ ಬಯಲು ರಂಗಭೂಮಿ ಮಂದಿರವನ್ನು ನೆಲಸಮ ಮಾಡಿ ಅಲ್ಲಿ ಫುಡ್ಕೋರ್ಟ್ ನಿರ್ಮಿಸಲು ಉದ್ದೇಶಿಸಿರುವ ಅವೈಜ್ಞಾನಿಕ, ದೂರದೃಷ್ಟಿರಹಿತ ಯೊಜನೆಯನ್ನು ವಿದ್ಯಾರ್ಥಿ, ಕನ್ನಡಪರ ಹಾಗೂ ಇತರೆ ಸಂಘಟನೆಗಳು, ಮಾಜಿ ಶಾಸಕರು, ಶಾಲಾ ಕಾಲೇಜು ಮುಖ್ಯಸ್ಥರು, ಕ್ರೀಡಾ ಪಟುಗಳು, ಸಾಹಿತಿಗಳು, ಕಲಾವಿದರು, ಹಿರಿಯ ನಾಗರೀಕರೂ ಸೇರಿದಂತೆ ಬಹಳಷ್ಟು ಜನರು ವಿರೋಧ ವ್ಯಕ್ತಪಡಿಸಿದರೂ, ಜೊತೆಗೆ ಶಾಲಾ ಕಾಲೇಜು ಮೈದಾನಗಳನ್ನು ಕ್ರೀಡೆ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮಾತ್ರ ಉಪಯೋಗಿಸಲು ಕಾನೂನು ಇದ್ದರೂ ಜನಪರ ತೀರ್ಮಾನ ಕೈಗೊಳ್ಳದ ಆಡಳಿತಾಂಗದ ಹಠಮಾರಿ ಧೋರಣೆಯನ್ನು ಸಾಮಾಜಿಕ ಹೋರಾಟಗಾರರು ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಹೋರಾಟ ಸಮಿತಿಯ ಕಾರ್ಯಾಧ್ಯಕ್ಷರಾದ ಧನರಾಜ ಈ. ಅವರು ತೀವ್ರವಾಗಿ ಖಂಡಿಸಿದ್ದಾರೆ.
ಪ್ರತ್ರಿಕಾ ಪ್ರಕಟಣೆ ಮೂಲಕ ತಿಳಿಸಿರುವ ಅವರು. “ಜೂನಿಯರ್ ಕಾಲೇಜು ಮೈದಾನ 60-70 ವರ್ಷಗಳಿಂದ ಕ್ರೀಡೆ, ಶಿಕ್ಷಣ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಂದ ಮೈಲಿಗಲ್ಲು ಕೊಡುಗೆಗಳನ್ನು ನೀಡುವ ಮೂಲಕ ಗಂಗಾವತಿಯ ಜನರೊಂದಿಗೆ ಭಾವನಾತ್ಮಕ ಬೆಸುಗೆ ಹೊಂದಿದೆ. ಕಾಲಾನುಕ್ರಮದಲ್ಲಿ ದೂರದೃಷ್ಟಿರಹಿತ ಅಭಿವೃದ್ಧಿ ಹೆಸರಿನ ಯೊಜನೆಗಳಿಂದಾಗಿ ಸಾಕಷ್ಟು ಸ್ಥಳ ಹಾಗೂ ಗರಿಮೆಯನ್ನು ಕಳೆದುಕೊಂಡಿರುವ ಆರೋಗ್ಯ ತಾಣವಾಗಿದ್ದ ಈ ಮೈದಾನ ಈಗಿನ ತೀರ್ಮಾನದಿಂದ ಗಧಾಪ್ರಹಾರಕ್ಕೆ ಒಳಗಾಗಲಿದ್ದು, ಇಲ್ಲಿನ ಶೈಕ್ಷಣಿಕ ಹಾಗೂ ಆರೋಗ್ಯ ಸಂಬಂಧಿ ಚಟುವಟಿಕೆಗಳಿಗೆ ಖಂಡಿತವಾಗಿಯೂ ಋಣಾತ್ಮಕ ಪರಿಣಾಮ ಬೀರಲಿದೆ. ಖಂಡಿತವಾಗಿಯೂ ನಗರಕ್ಕೆ ಫುಡ್ಕೋರ್ಟ್ನ ಅಗತ್ಯವಿದೆ. ಆದರೆ ಸ್ಥಳದ ಆಯ್ಕೆಗೆ ಸರ್ವರ ವಿರೋಧವಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ, ಶಾಸಕರು ಹಾಗೂ ನಗರಸಭೆಯು ಜನರ ಭಾವನೆಗಳನ್ನು ಗೌರವಿಸಿ ಅನಗತ್ಯ ಅಹಂ-ಹಠಮಾರಿತನ ಬಿಟ್ಟು ಈ ತೀರ್ಮಾನವನ್ನು ಬದಲಾಯಿಸಿ ಜನಪರತೆಯನ್ನು ಸಾಬೀತುಪಡಿಸಲಿ” ಎಂದು ಕರೆ ನೀಡಿದರು.
ಪ್ರತಿಭಟನೆಗಳಿಗೆ ಬೆಂಬಲ – ಈ ತೀರ್ಮಾನದ ವಿರುದ್ಧ ಈಗಾಗಲೇ ಪ್ರತಿಭಟಿಸಿರುವ ವ್ಯಕ್ತಿ, ಸಂಘಟನೆ ಹಾಗೂ ಸಂಸ್ಥೆಗಳಿಗೆ ತಮ್ಮ ಸಂಪೂರ್ಣ ಬೆಂಬಲವಿದ್ದು ಒಂದು ವೇಳೆ ತೀರ್ಮಾನ ಬದಲಾಗದಿದ್ದಲ್ಲಿ ಕಾನೂನು ಹೋರಾಟದ ಜೊತೆಗೆ ಎಲ್ಲಾ ಸಮಾನ ಮನಸ್ಕರ ಜೊತೆಗೂಡಿ ಬೃಹತ್ ಪ್ರತಿಭಟನಾ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

Total Views: 0
Share This Article