
Kanakagiri: Taluk unit of State Government Employees Association has appealed to resolve the problems faced by primary and high school teachers.

ಕನಕಗಿರಿಯ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ವತಿಯಿಂದ
ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿತಹಶೀಲ್ದಾರ್ ಚಂದ್ರಶೇಖರ ಗಾಳಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು

ಕನಕಗಿರಿ: ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮುಖ್ಯಶಿಕ್ಷಕರು ಎದುರಿಸುತ್ತಿರುವ
ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಇಲ್ಲಿನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದಿಂದ ಇಲ್ಲಿನ ತಹಶೀಲ್ದಾರ್ ಚಂದ್ರಶೇಖರ ಗಾಳಿ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಸಂಘದ ತಾಲ್ಲೂಕು ಅಧ್ಯಕ್ಷೆ ಶಂಶಾದಬೇಗ್ಂ ಮಾತನಾಡಿ
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಬಿಸಿಯೂಟ ಯೋಜನೆಯನ್ನು ಸಮರ್ಪಕವಾಗಿ ನಿರ್ವಹಿಸಲಾಗುತ್ತಿದೆ,
ದಿನದಿಂದ ದಿನಕ್ಕೆ ಮೊಟ್ಟೆ, ಬಾಳೆಹಣ್ಣು, ಬೇಳೆ, ಅಡುಗೆ ಎಣ್ಣೆಯ ದರಗಳು ಹೆಚ್ಚಾಗುತ್ತಿದ್ದು ಸರ್ಕಾರದಿಂದ ಬಿಡುಗಡೆಯಾದ ಅನುದಾನದಿಂದ ನಿರ್ವಹಿಸಲು ಶಿಕ್ಷಕರಿಗೆ ತೊಂದರೆಯಾಗುತ್ತಿದೆ ಹೀಗಾಗಿ ನಿಗದಿತ
ಅನುದಾನವನ್ನು ನೀಡಬೇಕೆಂದು
ಕೋರಿದರು.
ತಲಾ ಒಂದುಮೊಟ್ಟೆ ಮತ್ತು ಬಾಳೆಹಣ್ಣು ಖರೀದಿ ಮಾಡಲು ಸರ್ಕಾರದಿಂದ 5.20 ಪೈಸೆ ಇದ್ದು ಪ್ರಸೃತ್ತ ದರ ತಲಾ ಒಂದಕ್ಕೆ 7 ರೂಪಾಯಿ ಇರುವುದರಿಂದ ಶಿಕ್ಷಕರಿಗೆ ಹೊರೆಯಾಗುತ್ತಿದೆ ಎಂದು ತಿಳಿಸಿದರು.
ಇಲ್ಲಿ ವರೆಗೆ ಬಿಸಿಯೂಟ ಯೋಜನೆಯ ಅಕ್ಷರ ದಾಸೋಹ ಇಲಾಖೆಯು ಅಡುಗೆ ಎಣ್ಣೆ, ಬೇಳೆ ಪೊರೈಕೆ ಮಾಡದ ಹಿನ್ನೆಲೆಯಲ್ಲಿಕಿರಾಣಿ ಅಂಗಡಿಗಳಲ್ಲಿ ಖರೀದಿಸಬೇಕಾಗಿದೆ,
ಅಡುಗೆ ಎಣ್ಣೆ ಖರೀದಿಗೆ ಸರ್ಕಾರಕೆಜಿಗೆ 110 ರೂಪಾಯಿ ನೀಡಿದರೆ ಅಂಗಡಿಗಳಲ್ಲಿ 180 ರೂಪಾಯಿ ಇದೆ,ತೊಗರಿ ಬೇಳೆ ಕೆಜಿಗೆ ಮಾರುಕಟ್ಟೆಯಲ್ಲಿ ರೂ 140 ಇದ್ದು ಆದರೆ ಸರ್ಕಾರದಿಂದ ಕೆಜಿಗೆ 105 ರೂಪಾಯಿ ನೀಡಲಾಗುತ್ತಿದೆ ಹೀಗಾಗಿ ದರ ಏರಿಕೆ ಶಿಕ್ಷಕರಿಗೆ ಭಾರವಾಗಿದೆ ಎಂದು ಅಳಲು ತೋಡಿಕೊಂಡರು.
ಜಿಲ್ಲೆಯಲ್ಲಿ ಶಿಕ್ಷಕರು ಬೂತ ಮಟ್ಟದ ಅಧಿಕಾರಿ( ಬಿಎಲ್‌ಒ) ಆಗಿ ಕೆಲಸ ಮಾಡುತ್ತಿದ್ದು ಚುನಾವಣೆ ಆಯೋಗ
ಎಸ್ ಐ ಆರ್ ಪ್ರಕ್ರಿಯೆ ನಡೆಸುತ್ತಿದೆ ಬೂತ ಮಟ್ಟದ ಅಧಿಕಾರಿಗಳು ಕಾರ್ಯ ಕ್ಷೇತ್ರವಲ್ಲದ ಗ್ರಾಮ, ಸ್ಥಳದಲ್ಲಿ ಕೆಲಸಮಾಡುತ್ತಿರುವುದರಿಂದ ಕಾಮ್ಸ್ ಹಾಜರಾತಿಗೆ ತೊಂದರೆ ಅನುಭವಿಸುತ್ತಿದ್ದಾರೆ
ಶಿಕ್ಷಕರಿಗೆ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳಬೇಕೆಂದುತಿಳಿಸಿದರು.
ಶಿಕ್ಷಣಾಧಿಕಾರಿಗಳ ಸಂಘದ ತಾಲ್ಲೂಕು ಅಧ್ಯಕ್ಷಜಗದೀಶ ಹಾದಿಮನಿ, ನೌಕರರ ಸಂಘದ ಕೋಶಾಧ್ಯಕ್ಷ ಗುರುಲಿಂಗ ಯ್ಯ,ಪ್ರಧಾನ ಕಾರ್ಯದರ್ಶಿ ಉಮೇಶ ಕಂದಕೂರು, ನಿರ್ದೇಶಕರಾದ ಶೇಖರಯ್ಯ ಕಲ್ಮಠ,ಮಹ್ಮದ ಸಲೀಂ ಆಗೋಲಿ, ಸುರೇಶ ರಾಠೋಡ್, ಜಿಪಿಟಿ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಕನಕಪ್ಪ, ಪ್ರೌಢ ಶಾಲಾ ಶಿಕ್ಷಕರಸಂಘದಪ್ರಧಾನಕಾರ್ಯದರ್ಶಿಮಹಾದೇವಸ್ವಾಮಿಶಿಕ್ಷಕ ಪಾಂಡುರಂಗ ಜಾಲಿ ಇತರರು ಇದ್ದರು.
