ಕೊಟ್ಟೂರು : ಛಲವಾದಿ ಮಹಾಸಭಾ ತಾಲೂಕು ಅಧ್ಯಕ್ಷರಾಗಿ – ಹ್ಯಾಳ್ಯಾ ಡಿ. ಮಂಜುನಾಥ ಪುನರಾಯ್ಕೆ-

H.Mallikarjun
H.Mallikarjun - Kalyanasiri
2 Min Read
ಜಾಹೀರಾತು

Kotturu: Halya D. Manjunath re-elected as Chalavadi Mahasabha Taluk President

ಕೊಟ್ಟೂರು : ಛಲವಾದಿ ಮಹಾಸಭಾ ತಾಲೂಕು ಅಧ್ಯಕ್ಷರಾಗಿ – ಹ್ಯಾಳ್ಯಾ ಡಿ. ಮಂಜುನಾಥ ಪುನರಾಯ್ಕೆ

ಜಾಹೀರಾತು

ವಿಜಯನಗರ ಜಿಲ್ಲೆ ಕೊಟ್ಟೂರು :ಜೂನ್ 14 ರಂದು , ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜರುಗಿದ , ಛಲವಾದಿ ಮಹಾಸಭಾದ ಕೊಟ್ಟೂರು ತಾಲೂಕು ಘಟಕ ಪದಾಧಿಕಾರಿಗಳ ಸಭೆಯಲ್ಲಿ. “ಸಂಜೆವಾಣಿ ” ದಿನಪತ್ರಿಕೆ ವರದಿಗಾರರು , ಹಾಗೂ ಹ್ಯಾಳ್ಯಾಗ್ರಾಮವಾಸಿಗಳಾದ ಡಿ.ಮಂಜುನಾಥ ರವರನ್ನು. ಸತತ ಎರಡನೇ ಬಾರಿಗೆ , ಛಲವಾದಿ ಮಹಾಸಭಾ ಕೊಟ್ಟೂರು ತಾಲೂಕು ಘಟಕ ಅಧ್ಯಕ್ಷರನ್ನಾಗಿ ಸರ್ವಾನು ಮತದಿಂದ ಆಯ್ಕೆ ಮಾಡಲಾಯಿತು. ಸಂಘದ ಜಿಲ್ಲಾಧ್ಯಕ್ಷರಾದ ಸೋಮಶೇಖರ್ ಬಣ್ಣದ ಮನೆರವರು , ನೇಮಕಾತಿ ಪತ್ರದ ಆದೇಶವನ್ನು ಮಂಜುನಾಥರವರಿಗೆ ನೀಡುವುದರ ಮೂಲಕ ಘೋಷಣೆ ಮಾಡಿ ಅವರನ್ನು ಅಭಿನಂದಿಸಿದರು.
ಛಲವಾದಿ ಮಹಾಸಭಾ ಗೌರವಾಧ್ಯಕ್ಷರಾಗಿ ಸಿ. ಅಜ್ಜಪ್ಪ , ಉಪಾಧ್ಯಕ್ಷರಾಗಿ ವಾಮದೇವ , ಅಲಬೂರು ನಿಂಗೇಶ್ , ಉಜ್ಜಿನಿ ಪ್ರಕಾಶ್ , ಹನುಮನಹಳ್ಳಿ ಸಿ.ಎಂ. ಮಂಜುನಾಥ್, ನಾಣಿಕೇರಿ ಕೊಟ್ರೇಶ್ , ಪ್ರಧಾನ ಕಾರ್ಯದರ್ಶಿ ಹ್ಯಾಳ್ಯಾ ಸಿ. ನಾಗೇಶ್, ಸಹಕಾರ್ಯದರ್ಶಿ ಸಾಲಿಮನಿ ಅಜ್ಜಯ್ಯ , ಮಂಗಾಪುರ ಸಿದ್ದೇಶ , ಸಂಘಟನಾ ಕಾರ್ಯದರ್ಶಿ ಅಂಬಳಿ ಸಿ.ನಾಗರ‍ಜ , ಸಿ.ಡಿ ಶಿವಕುಮಾರ್ , ಕಾನೂನು ಸಲಹೆಗಾರರಾಗಿ ಸಿ. ಚೌಡಪ್ಪ , ಸಂದೀಪ್ ಸಾಲುಮನಿ , ಖಜಾಂಚಿ ಸಿ. ಮೂಗಪ್ಪ , ಸಾಮಾಜಿಕ ಮಾಧ್ಯಮ ಸಲಹೆಗಾರರಾಗಿ ಸಿ.ಕೆ
ಸುಮನ್ , ಮತ್ತು ಮಹಿಳಾ ಘಟಕ ತಾಲೂಕು ಅಧ್ಯಕ್ಷರಾಗಿ ಜಿ.ಹುಲಿಗೆಮ್ಮ, ಉಪಾಧ್ಯಕ್ಷರಾಗಿ ಎಂ.ಶಶಿಕಲಾ ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಎಲ್ಲರಿಗೂ ನೇಮಕಾತಿ ಪತ್ರದ ನೀಡಲಾಯಿತು , ಸಭೆಯಲ್ಲಿ ಕೊಟ್ಟೂರು ಪಟ್ಟಣ ಸೇರಿದಂತೆ , ತಾಲೂಕಿನ ಮಂಗಾಪುರ , ಉಜ್ಜಿನಿ, ತೂಲಹಳ್ಳಿ, ಹನುಮನಹಳ್ಳಿ, ಬೇವೂರು, ಅಲಬೂರು, ಅಂಬಳಿ, ಹ್ಯಾಳ್ಯಾ ಹಾಗೂ ಕೊಟ್ಟೂರು ತ‍ಾಲೂಕಿನ ವಿವಿದೆಡೆಗಳ ಛಲವಾದಿ ಸಮಾಜದ ಮುಖಂಡರು.ಕೂಡ್ಲಿಗಿ ತಾಲೂಕು ಮುಖಂಡರು ಹಾಗೂ ಉರುಮೆ ವಾಧ್ಯ ಕಲಾವಿದರಾದ ಮರಬನಹಳ್ಳಿ ಸಿ.ಮಾರಪ್ಪರವರು. ಹಾಗೂ ವಿವಿದ ಘಟಕಗಳ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು. ✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ – 9008937428 / 8151937428

Total Views: 0
Share This Article