
Be careful, cruel children, if they push their parents into the street, they will be prosecuted.


ಸ್ವಾರ್ಥ ಹೆಚ್ಚು ಆಗುತ್ತಿದೆ, ಕೂಡು ಕುಟುಂಬ ದಲ್ಲಿ ಇದ್ದ ಭಾಂಧವ್ಯ ಕಡಿಮೆ ಆಗಿ ಒಡಕು ಕುಟುಂಬ ಹೆಚ್ಚು ಆಗಿದೆ, ಯಾರಿಗೂ ಜವಾಬ್ದಾರಿ ಹೊತ್ತು ಕೊಳ್ಳುವುದು ಬೇಡ…ನಮ್ಮ ಜಾಲಿ ಜೀವನ ಕ್ಕೆ ತೊಂದ್ರೆ ಆಗುತ್ತೆ ಅಂತ ಯೋಚನೆ ಮಾಡೋರ್ ಹೆಚ್ಚು, ಕೆಲವರು ಇರ್ತಾರೆ ಶ್ರವಣ್ ಕುಮಾರ್ ತರ ಹೆತ್ತವರ ಬಗ್ಗೆ ಪ್ರೀತಿ ಗೌರವ ಇಡ್ಕೊಂಡು ಇರ್ತಾರೆ.ಇತ್ತೀಚಿಗೆ ಅಂತ ಅಲ್ಲ…ನಾನು ಸಣ್ಣ ವಯಸ್ಸು ಲಿ ಇದ್ದಾಗ ನೂ ನೋಡಿದೀನಿ, ಮೈಸೂರು ನಲ್ಲಿ ಇದ್ವಿ ನಾವು ಅವಾಗ, ನಮ್ಮ ಮನೆ ಪಕ್ಕ, ಅದರ ಪಕ್ಕದ ಮನೆಯಲ್ಲಿ ಒಬ್ರು ಇದ್ರೂ…ಅವರು ಒಬ್ರು ಇಂಜಿನಿಯರ್, ಅವರ ತಂದೆ ನ ಮನೆ ಹಿಂದೆ ನೀರಿನ ತೊಟ್ಟಿ ಉಂಟಲ್ಲ, ಅದ್ರಲ್ಲಿ ಹಾಕಿದ್ರು. ಹರಿದ ಚಾಪೆ, ಹರಿದ ಪಂಚೆ, ಮಾಸಲು ಬಟ್ಟೆ ಎಲ್ಲ ಮಲಗಿದ ಜಾಗ ದಲ್ಲೇ…ಊಟ ಒಣಗಿದ ತಟ್ಟೆ…ನಿಜ್ವಾಗ್ಲೂ ನರಕ ದ ದೃಶ್ಯ…. ಆ ದೃಶ್ಯ ನೋಡೋವರೆಗೂ ಹೀಗೆ ಒಂದು ದಾರುಣ ಘಟನೆ ಆಗ್ತಿದೆ ಅಂತ ನೇ ನಮಗೆ ಗೊತ್ತಿರ್ಲಿಲ್ಲ. ಬಹುಷಃ ಅವರು ನಿದ್ದೆ ಮಾತ್ರೆ ಕೊಡ್ತಾ ಇದ್ರಾ ಅಂತ! ಆ ದಿನ ಗಂಡ ಹೆಂಡತಿ ಇಬ್ಬರು ಟ್ರಿಪ್ ಅಂತ ಹೋಗಿದ್ರು ಅಂತ ಕಾಣುತ್ತೆ…ಮನೆಯಲ್ಲಿ ಯಾರೂ ಇಲ್ಲಾ…ಹೊಟ್ಟೆ ಹಸಿವಿಗೆ ಜೋರಾಗಿ ಕೂಗ್ತಾ ಇದ್ದರು. ಯಾರಾದ್ರೂ ಕಾಪಾಡಿ ಅಂತ! ಮನೆ ಹಿತ್ತಲಲ್ಲಿ ಅಡ್ತ ಇದ್ದ ನಾವು, ಹೋಗಿ ನಮ್ಮ ಅಮ್ಮ ಗೆ ಹೇಳಿದ್ವಿ, ಯಾರೋ ಹೀಗೆ ಕೂಗ್ತಾ ಇದ್ದಾರೆ ಅಂತ, ಆ ಭೂಪತಿ, ಕಾಂ ಪೌನ್ಡ್ ಎತ್ತರ ಕಟ್ಟಿಸಿದ್ದ, ಪಕ್ಕದ್ ಮನೆ ಗೆ ಹೋಗಿ ಕೇಳಿದ್ದಕ್ಕೆ ಅವರು ಕೂಡ ನೆಗ್ಲೆಟ್ ಮಾಡಿದ್ರೂ, ಅವರದು ಇದ್ದದ್ದೇ ಗೋಳು ನಿಮಗೆ ಯಾಕೆ ಇಲ್ಲದ ಪಂಚಾಯತ್ ಅಂತ, ಮುಂದೆ ಯಿಂದ ಹೋಗೋಕ್ ಬೀಗ ಹಾಕಿತ್ತಲ್ಲ…ಅಮ್ಮ ನನ್ನ ಹಾಗೆ ನನ್ನ ತಂಗಿ ನ ಕರ್ಕೊಂಡು ಹಿತ್ತಲಿಗೆ ಬಂದ್ರೂ…ಅಲ್ಲೊಂದು ಏಣಿ ಇತ್ತು, ಅದು ಮುರುಕಲು ಏಣಿ ಬೇರೆ…ಅಮ್ಮ ಹತ್ತೋಕೆ ಆಗ್ತಾ ಇರ್ಲಿಲ್ಲ, ಅಮ್ಮ ಹೇಳಿದ್ದು ಒಂದೇ, ಕಣ್ಣ್ ಮುಚ್ಚಿ ಮೇಲೆ ಹತ್ತು, ಬಿದ್ರೆ ನಿಮ್ಮ ಡ್ಯಾಡಿ ಇದ್ದಾರೆ ಹುಷಾರು ಮಾಡೋಕೆ…ಆಯ್ತಾ ಹತ್ತು ಹೋಗಿ ನೋಡು ಅಂತ ಧೈರ್ಯ ತುಂಬಿ ಹತ್ತಿಸಿದರು. ಒಳಗೆ ಭಯ ಇದ್ದರೂ ಆ ಹಿರಿಯ ಜೀವಿ ಯ ನೋವು ಸಂಕಟ ಉಂಟು ಮಾಡ್ತಾ ಇತ್ತು, ಭಯ ದಿಂದಲೇ ಹತ್ತಿ ಗೋಡೆ ಇಣುಕಿ ನೋಡಿದೆ…ಎಂಥ ಕ್ರೂರಿ ಮನುಷ್ಯ ಇರ್ಬೇಕು ಅನ್ಸ್ತು ಆ ದೃಶ್ಯ ನೋಡಿ, ನೀರಿನ ತೊಟ್ಟಿ ಒಳಗೆ ಒಂದು ಹರಕಲು ಚಾಪೆ, ಹಳದಿ ಆಗಿರುವ ಮಾಸಲು ಹರಿದ ಬಿಳಿ ಪಂಚೆ ಹಾಗೆ ಒಂದು ಬನಿಯನ್ ಮೂಳೆ ರೀತಿ ಇರುವ ವಯಸ್ಸು ಆದ ತಾತ, ಗಾಬರಿ ಯಿಂದ ಕೂಗ್ತಾ ಇದ್ರೂ, ನಾನು ನನ್ನ ಮಮ್ಮಿ ಗೆ ಕೂಗಿ ಹೇಳ್ದೆ, ಹೀಗೆ ತೊಟ್ಟಿ ಒಳಗೆ ಇದೆ ತಾತ ಅಂತ, ನನ್ನ ಧ್ವನಿ ಕೇಳಿ ಆ ತಾತ ಬಾಯಿ ತೋರಿಸಿ ಕೈ ಸನ್ನೆ ಲಿ ಊಟ ಬೇಕು ಅಂತ ಕೇಳಿದ್ರು, ತಾತ ಊಟ ಬೇಕು ಅಂತ ಇದ್ದಾರೆ ಮಮ್ಮಿ ಅಂತ ಹೇಳ್ದೆ, ತಾತ ಗೆ ಹೇಳು ಐದು ನಿಮಿಷ ಇರೋಕೆ ಅಮ್ಮ ಮಾಡಿ ಕೊಡ್ತಾರೆ ಅಂತ ಅಂದ್ರೂ, ನಾನು ತಾತ, ಅಮ್ಮ ತರ್ತಾರೆ ಊಟ ಅಳ್ಬೇಡಿ ನೀವು ಅಂತ ಹೇಳ್ದೆ, ಅವರು ಪಾಪ ಕೈ ಮುಗಿತಾ ಇದ್ರೂ, ಹಾಗೆ ಹೇಳಿ ಆದ್ಮೇಲೆ ಅಮ್ಮ ನಿಧಾನ ಕ್ಕೆ ಇಳಿ ಅಂತ ಹೇಳಿ…ವಾಪಾಸ್ ಮನೆಗೆ ಬಂದು, ಒಂದು ಬಾಟಲ್ ನೀರು, ಜೊತೆಗೆ ತೆಳ್ಳಗೆ ರವೆ ಗಂಜಿ ಮಾಡಿ ಒಂದು ಬಾಕ್ಸ್ ಗೆ ಹಾಕಿ, ಒಂದು ವೈರ್ ಬ್ಯಾಗಿಗೆ ದಾರ ಕಟ್ಟಿ ಮತ್ತೆ ಏಣಿ ಹತ್ತೋಕೆ ಹೇಳಿ, ದಾರದ ಸಹಾಯ ದಿಂದ ಮೇಲೆ ಬುಟ್ಟಿ ತಗೊಂಡು, ನಂತರ ಆ ತಾತ ಬುಟ್ಟಿ ಸಿಗೋ ಹಾಗೆ ಮಾಡಿ, ಅವರಿಗೆ ಊಟ ಕೊಟ್ವಿ, ಆಮೇಲೆ ಪಕ್ಕದ್ಎ ಮನೆಯಲ್ಲಿ ಫೋನ್ ಇತ್ತು, ಅಲ್ಲಿ ಹೋಗಿ ನಮ್ಮ ತಂದೆ ಗೆ ಇರುವ ವಿಷಯ ತಿಳಿಸಿ, ನಮ್ಮ ತಂದೆ ಪೊಲೀಸ್ ಜೊತೆಗೆ ಬಂದು, ಆ ಮನೆ ಬೀಗ ಕುಟ್ಟಿ ಆ ಬೀಗ ಒಡೆದು ಹಿತ್ತಲಿಗೆ ಬಂದ್ರೂ…ಹಿಂದೆ ಕಸದ ರಾಶಿ ಅಲ್ಲೇ ಈ ತಾತ…. ಆ ದೃಶ್ಯ ನೋಡಿ ಅಮ್ಮ ಅಳ್ತಾ ಇದ್ರೂ, ಅವರ ಹತ್ತಿರ ಹೋಗಿ ನಿಧಾನ ಕ್ಕೆ ಎಬ್ಬಿಸಿ, ಅವರನ್ನು ಹಾಸ್ಪಿಟಲ್ ಗೆ ಅಡ್ಮಿಟ್ ಮಾಡಿ, ಆ ಕ್ರೂರಿ ವ್ಯಕ್ತಿ ನ ಹುಡುಕಿ ಸರ್ಯಾಗಿ ಮರ್ಯಾದೆ ಮಾಡಿದ್ರೂ…ಪೊಲೀಸ್…ಒಬ್ನೇ ಮಗ, ಚೆನ್ನಾಗಿ ಓದಿಸಿದ್ದೆ, ಯಾಕೆ ಹೀಗೆ ಆದ್ನೋ…ಅವ್ನಿಗೆ ಭಾರ ಅಂತ ಅಂದ್ಮೇಲೆ ನಾನು ಅಲ್ಲಿ ಇರೋದು ಬೇಡ, ಎಲ್ಲಾದ್ರೂ ಸೇರಿಸಿ ಬಿಡಿ ಡಾಕ್ಟ್ರೇ…ಅಂತ ಅಂದಿದ್ರು, ಪೊಲೀಸ್ ನವರು ನೀವು ಯಾಕೆ ಅಲ್ಲೆಲ್ಲೋ ಇರ್ಬೇಕು, ನಿಮ್ಮ ಮನೇಲಿ ನೀವು ಇರಿ ಸ್ವಾಮಿ, ಯಾವನ್ ಏನು ಮಾಡೋಕೆ ಆಗೋಲ್ಲ, ಮತ್ತೆ ಏನಾದ್ರು ಹೀಗೆ ಮಾಡಲಿ ಗ್ರಾಚಾರ ಬಿಡುಸ್ತೀನಿ ಅಂತ ಅವಾಜ್ ಹಾಕಿದ್ರು, ಪೊಲೀಸ್ ಗೆ ಪರಿಚಯ ಇರುವ ಕೆಲಸ ಮಾಡುವ ಹೆಂಗಸು ಗೊತ್ತು ಮಾಡಿ ಅವರು ಇರೋ ವರೆಗೂ ನೋಡ್ಕೋಬೇಕು…. ಅಂತ ಷರತ್ತು ಹಾಕಿ ಅವರನ್ನು ಬಿಟ್ಟು ಬಿಟ್ಟಿದ್ರು…ಮರ್ಯಾದೆ ಹೋಯ್ತು ಅಂತ ಮನೇಲಿ ಗಲಾಟೆ ಮಾಡ್ತಾ ಇದ್ದ ಅವಯ್ಯ, ಈ ಘಟನೆ ನೆಡೆದು ಸುಮಾರು ಇಪ್ಪತ್ತು ವರ್ಷ ದ ಮೇಲ್ ಆಯ್ತು…
