ದಂಡದ ಮೊತ್ತದಲ್ಲಿ ಶೇ 50 ರಷ್ಟು ರಿಯಾಯತಿ: ಸದುಪಯೋಗ ಪಡೆದುಕೊಳ್ಳಿ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

50% discount on fine amount: Take advantage

ದಂಡದ ಮೊತ್ತದಲ್ಲಿ ಶೇ 50 ರಷ್ಟು ರಿಯಾಯತಿ: ಸದುಪಯೋಗ ಪಡೆದುಕೊಳ್ಳಿ

ಜಾಹೀರಾತು


ಕೊಪ್ಪಳ ಜೂನ್ 09 (ಕರ್ನಾಟಕ ವಾರ್ತೆ): ಸಂಚಾರಿ ಹಾಗೂ ಮೋಟಾರು ವಾಹನ ಕಾಯಿದೆ, ನಿಯಮಗಳ ಉಲ್ಲಂಘನೆ ಸಂಬAಧ ಬಾಕಿ ಇರುವ ಪ್ರಕರಣಗಳ ಇತ್ಯರ್ಥಕ್ಕೆ ಅವಕಾಶವಿದ್ದು, ದಂಡದ ಮೊತ್ತದಲ್ಲಿ ಶೇ 50 ರಷ್ಟು ರಿಯಾಯತಿ ಸೌಲಭ್ಯವಿದೆ.
 ಕರ್ನಾಟಕ ರಾಜ್ಯದ ಸಂಚಾರಿ ಹಾಗೂ ಸಾರಿಗೆ ಇಲಾಖೆಗಳಲ್ಲಿ ಸಂಚಾರಿ ಹಾಗೂ ಮೋಟಾರು ವಾಹನ ಕಾಯಿದೆ, ನಿಯಮಗಳ ಉಲ್ಲಂಘನೆ ಸಂಬಂಧ 1991 ರಿಂದ 2022ರ ಅವಧಿಯಲ್ಲಿ ಪ್ರಕರಣ ದಾಖಲಾಗಿ, ಬಾಕಿ ಇರುವ ಪ್ರಕರಣಗಳ ದಂಡದ ಮೊತ್ತದಲ್ಲಿ 50% (ಶೇಕಡಾ ಐವತ್ತರಷ್ಟು ಮಾತ್ರ) ರಿಯಾಯತಿ ನೀಡಿ, 2026ರ ಜೂನ್ 21 ರಿಂದ ಜುಲೈ 10ರ ವರೆಗೆ ಕಾಲಾವಕಾಶ ನೀಡಿ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಮತ್ತೊಮ್ಮೆ ಅವಕಾಶ ಕಲ್ಪಿಸಲಾಗಿರುತ್ತದೆ. 20 ದಿನಗಳ ನೀಡಿರುವ ಈ ಕಾಲಾವಕಾಶ ಬಳಸಿಕೊಂಡು ವಾಹನಗಳ ಮಾಲೀಕರು ದಂಡ ಪಾವತಿಸಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಎಲ್ಲಾ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾಂತೇಶ ದರಗದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Total Views: 0
Share This Article