
Koppal man missing: Request for assistance in finding him

ಕೊಪ್ಪಳ ವ್ಯಕ್ತಿ ಕಾಣೆ: ಪತ್ತೆಗೆ ಸಹಕರಿಸಲು ಮನವಿ

ಕೊಪ್ಪಳ ಮೇ 26 (ಕರ್ನಾಟಕ ವಾರ್ತೆ): ಕೊಪ್ಪಳದ ತೆಗ್ಗಿನಕೇರಿ ಓಣಯಾ ನಿವಾಸಿ ಆಸೀಮ್ ತಂದೆ ಗೌಸ್ ಜಭೇದಾರ (26) ಎಂಬ ವ್ಯಕ್ತಿ ಕಾಣೆಯಾಗಿದ್ದು, ಪತ್ತೆಗಾಗಿ ಸಹಕರಿಸುವಂತೆ ಕೊಪ್ಪಳ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಈ ವ್ಯಕ್ತಿಯು 2026ರ ಜನವರಿ 25ರಂದು ಬೆಳಿಗ್ಗೆ ಸುಮಾರು 11 ಗಂಟೆಗೆ ಎಡರು ದಿನ ಬಿಸನೂರು ಗ್ರಾಮದಲ್ಲಿ ವಸ್ತಿ ಕೆಲಸ ಇದೆ ಹೋಗಿಬರುತ್ತೇನೆ ಎಂದು ಮನೆಯಿಂದ ಹೋಗಿದ್ದು, ಮನೆಗೆ ವಾಪಸ್ಸಾಗಿಲ್ಲ. ಮೊಬೈಲ್ ನಂಬರ್‌ಗೆ ಕರೆ ಮಾಡಿದರು ಸ್ವೀಚ್ ಆಫ್ ಅಂತ ಬಂದಿದ್ದು, ಹೊಸಪೇಟೆ, ಬಳ್ಳಾರಿ, ಗಿಣಿಗೇರಿ ಹಾಗೂ ಕೊಪ್ಪಳ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಹಾಗೂ ಸಂಬಂಧಿಕರ ಮನೆಗಳಲ್ಲಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ದೊರೆತಿಲ್ಲ ಎಂದು ಕಾಣೆಯಾದ ವ್ಯಕ್ತಿಯ ಹೆಂಡತಿ ಕೊಪ್ಪಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕೊಪ್ಪಳ ನಗರ ಪೊಲೀಸ್ ಠಾಣೆಯ ಪೊಲೀಸರು ಗುನ್ನೆ ಸಂಖ್ಯೆ 51/2026ರಡಿ ಮನುಷ್ಯ ಕಾಣೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
*ಕಾಣೆಯಾದ ವ್ಯಕ್ತಿಯ ಚಹರೆ:* ಆಸೀಮ್ ತಂದೆ ಗೌಸ್ ಜಭೇದಾರ, ವಯಸ್ಸು 26 ವರ್ಷ, 5.5 ಅಡಿ ಎತ್ತರ, ಕೆಂಪು ಮುಖಬಣ್ಣ, ಸಾಧಾರಣ ಮೈಕಟ್ಟು, ತಲೆಯಲ್ಲಿ ಕಪ್ಪು ಕೂದಲು, ಕುರುಷಲು ದಾಡಿ, ಕೋಲು ಮುಖ, ಹಳದಿ ಬಣ್ಣದ ತುಂಬು ತೋಳಿನ ಅಂಗಿ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದು, ಅಲ್ಪಸ್ವಲ್ಪ ಕನ್ನಡ, ಹಿಂದಿ ಬಾಷೆ ಮಾತನಾಡುತ್ತಾನೆ.
ಈ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಸಾರ್ವಜನಿಕರು ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಕೊಪ್ಪಳ ಕಂಟ್ರೋಲ್ ರೂಂ.ನಂ: 08539-230100 ಮತ್ತು 230222, ಪೊಲೀಸ ಇನ್ಸಪೆಕ್ಟರ್ ನಗರ ಪೊಲೀಸ ಠಾಣೆ ಕೊಪ್ಪಳ ಮೊ.ಸಂ: 9480803745, ಕೊಪ್ಪಳ ನಗರ ಠಾಣೆ ದೂರವಾಣಿ ಸಂ: 08539-220333 ಗೆ ಸಂಪರ್ಕಿಸುವಂತೆ ಕೊಪ್ಪಳ ನಗರ ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.
