
Vehicle-04 Software Maintenance: Temporary delay in RTO services
ವಾಹನ-04 ತಂತ್ರಾಂಶ ನಿರ್ವಹಣೆ: ಆರ್‌ಟಿಒ ಸೇವೆಗಳಲ್ಲಿ ತಾತ್ಕಾಲಿಕ ವಿಳಂಬ

ಕೊಪ್ಪಳ, ಮೇ 15 (ಕರ್ನಾಟಕ ವಾರ್ತೆ): ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ, ಕೊಪ್ಪಳದಲ್ಲಿ ಬಳಸಲಾಗುತ್ತಿರುವ ವಾಹನ-04 ತಂತ್ರಾಂಶವು ತಾಂತ್ರಿಕ ನಿರ್ವಹಣೆಯಲ್ಲಿರುವ ಹಿನ್ನೆಲೆ ಕಚೇರಿಯ ವಿವಿಧ ಸೇವೆಗಳಲ್ಲಿ ತಾತ್ಕಾಲಿಕ ವಿಳಂಬ ಉಂಟಾಗುತ್ತಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.
ತಂತ್ರಾಂಶ ನಿರ್ವಹಣೆ ಕಾರ್ಯ ನಡೆಯುತ್ತಿರುವುದರಿಂದ ಮಾಲೀಕತ್ವ ವರ್ಗಾವಣೆ, ಕಂತು ಕರಾರು ನಮೂದು ಹಾಗೂ ರದ್ದತಿ, ತಿರುವಳಿ ಪತ್ರ ನೀಡಿಕೆ, ಹೊಸ ವಾಹನ ನೊಂದಣಿ, ರಹದಾರಿ ಸೇರಿದಂತೆ ಇತರ ವಾಹನ ಸಂಬಂಧಿತ ಸೇವೆಗಳ ಕಾರ್ಯನಿರ್ವಹಣೆಯಲ್ಲಿ ವಿಳಂಬವಾಗುವ ಸಾಧ್ಯತೆ ಇದ್ದು, ಸಾರ್ವಜನಿಕರು ಹಾಗೂ ವಾಹನ ಮಾಲೀಕರು ಅನಗತ್ಯ ಗೊಂದಲಕ್ಕೆ ಒಳಗಾಗದೇ ಕಚೇರಿಯೊಂದಿಗೆ ಸಹಕಾರ ನೀಡುವಂತೆ ಈ ಮೂಲಕ ಕೋರಲಾಗಿದೆ.
ತಂತ್ರಾಂಶದ ನಿರ್ವಹಣೆ ಪೂರ್ಣಗೊಂಡ ಬಳಿಕ ಸೇವೆಗಳು ಎಂದಿನಂತೆ ಸುಗಮವಾಗಿ ಆರಂಭವಾಗಲಿವೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಸಾರ್ವಜನಿಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
