ಜೀ ವಾಹಿನಿ ಸರಿಗಮಪ ಸೀಸನ್ 20ರ ರನ್ನರ್ ಅಪ್ ರಮೇಶ ಲಮಾಣಿಗೆ ಗಂಗಾವತಿ ತಾಲೂಕ ಚುಟಕು ಸಾಹಿತ್ಯ ಪರಿಷತ್ತು ಸಮ್ಮಾನ.

H.Mallikarjun
H.Mallikarjun - Kalyanasiri
2 Min Read
ಜಾಹೀರಾತು




Gangavati Taluka Chutaku Sahitya Parishad honors Ramesh Lamani, the runner-up of Zee Vahini Sarigamapa Season 20.

ಜೀ ವಾಹಿನಿ ಸರಿಗಮಪ ಸೀಸನ್ 20ರ ರನ್ನರ್ ಅಪ್ ರಮೇಶ ಲಮಾಣಿಗೆ ಗಂಗಾವತಿ ತಾಲೂಕ ಚುಟಕು ಸಾಹಿತ್ಯ ಪರಿಷತ್ತು ಸಮ್ಮಾನ.

ಜಾಹೀರಾತು

ಗಂಗಾವತಿ: ಸ್ಥಳಿಯ ಬಂಜಾರ ಸಮುದಾಯದ ಮದುವೆ ಸಮಾರಂಭಕ್ಕೆ ಆಗಮಿಸಿದ ಗಾಯಕ ರಮೇಶ ಲಮಾಣಿಯವರಿಗೆ ಚುಟುಕು ಸಾಹಿತ್ಯ ಪರಿಷತ್ತಿನ ತಾಲುಕ ಅದ್ಯಕ್ಷರಾದ ಅಶೋಕ ಗುಡಿಕೋಟಿಯವರು ಸನ್ಮಾನಿಸಿ ಗೌರವಿಸಿದರು.
ಅವರನ್ನು ಸಂಪರ್ಕಿಸಿ ತಮ್ಮ ಕುಟುಂಬ, ಉದ್ಯೋಗ, ಹವ್ಯಾಸ, ಊರು ಮತ್ತು ಗಾಯನದ ಬಗ್ಗೆ ಚರ್ಚಿಸಿದಾಗ
ನನ್ನ ಊರು ಮಜ್ಜೂರು, ನಾವು ನಾಲ್ಕು ಜನ ಮಕ್ಕಳು, ನಾನು ನಾಲ್ಕನೆಯವನು, ನಾಲ್ಕನೆ ತರಗತಿ ಓದಿರುವೆ, ಉದ್ಯೋಗ ಊರಿಂದ ಊರಿಗೆ ಸಂಚರಿಸಿ ಕುರಿಸಾಕಾಣಿಕೆ ಮಾಡುವ ಕಾಯಕ, ಅದರ ಮದ್ಯ ಮನಸಿನ ನೆಮ್ಮದಿಗೆ ಊರಲ್ಲಿ ಸಿಕ್ಕಾಗ ಭಜನೆ ಮಾಡುವುದು, ಹಾಡುವುದು ಮತ್ತು ರೇಡಿಯೋ ಟೈಪ್ ರಿಕಾಡ್೯ ರ ಮುಖಾಂತರ ಹಾಡುಗಳನ್ನು ಕೇಳಿ ಅದರಂತೆ ಹಾಡುವ ಹವ್ಯಾಸ. ಹೀಗೆ ಒಂದು ದಿನ ಸಾಹುಕಾರ ನಿಂಗನಗೌಡ ಪಾಟೀಲ ಅವರ ಹೊಲದಲ್ಲಿ ಹಾಡುವಾಗ ಅವರು ನಾನು ಹಾಡುವದನ್ನು ಆಲಿಸಿ ಚೆನ್ನಾಗಿ ಹಾಡ್ತಿಯಾ ನೀ ಹಾಡುವುದು ಎಲ್ಲರಿಗು ತಿಳಿಯಬೇಕು ಎಂದು ಆ ಸಮಯ ಗದಗನಲ್ಲಿ ಜಿ ಕನ್ನಡ ವಾಹಿನಿಯವರು ನಡೆಸುತ್ತಿದ್ದ ಸರಿಗಮಪ ಹಾಡು ಧ್ವನಿ ಪರಿಕ್ಷೆಗೆ ಕರಿದೊಯ್ದರು ಅದರಲ್ಲಿ ಆಯ್ಕೆಯಾಯಿತು. ವಾಹಿನಿಯವರು ಬೆಂಗಳೂರುಗೆ ತಮ್ಮನ್ನು ಕರೆದಾಗ ಬರಲು ತಿಳಿಸಿದರು. ನಂತರ ಬೆಂಗಳೂರಿಗೆ ಕರೆ ಬಂದಾಗ ಖುಷಿ ಜೊತೆಗೆ ಭಯವು ಶುರುವಾಯಿತು. ಹೋಗಿ ಇರುವದೆಲ್ಲಿ, ಉಳಿಯುವುದೆಲ್ಲಿ ಮತ್ತೆ ಗೌಡರು ಬೆನ್ನು ತಟ್ಟಿ ಕಳಸಿದರು. ಅಲ್ಲಿ ಹೋದ ಮೇಲೆ ಮೆಘಾ ಆಡಿಷನ್‌ ನಲ್ಲಿ ಸರಳ ಸಹೃದಯಿ ಸಮಾಜ ಸೇವಕಿ ಕನ್ನಡತಿ ರಶ್ಮಿಯವರ ಪರಿಚಯವಾಯಿತು. ಅವರು ಮನೆಯಲ್ಲಿಯೇ ಊಟ ಮಾಡಲು ತಂಗಲು ಅನುವು ಮಾಡಿದರು.
ಮುಂದೆ ಹಾಡ್ತಾ ಹಾಡ್ತಾ ನಾದಬ್ರಹ್ಮ ಹಂಸಲೇಖರವರು ನಿನ್ನ ಧ್ವನಿ ಚೆನ್ನಾಗಿದೆ ನಮ್ಮ ಸಂಸ್ಥೆಯಲ್ಲೆ ಅಬ್ಯಾಸ ಮಾಡು ಎಂದು ಸೂಚಿಸಿದರು. ತರುವಾಯ ಡಾ. ಸುಖೇತನ ರಂಗಸ್ವಾಮಿಯವರ ಸನ್ಮಾರ್ಗದಲ್ಲಿ ಅಭ್ಯಾಸ ಪ್ರಾರಂಭಿಸಿ ಜನಪದಗೀತೆ, ಭಕ್ತಿಗೀತೆ, ಭಾವಗೀತೆ, ಚಲನಚಿತ್ರಗೀತೆ, ಸುಗಮ ಸಂಗೀತ, ಕರ್ನಾಟಕ ಸಂಗಿತ ಯಾವ ರೀತಿ ಹಾಡಬೇಕೆಂದು ಹೇಳಿಕೊಟ್ಟರು. ಇವರೆಲ್ಲರ ಸಹಕಾರದಿಂದ ನನಗೆ ಜಯಶಾಲಿಯಾಗಲು ಕಾರಣವಾಯಿತು.
ಅಂದಿನಿಂದ ಜನಪ್ರಿಯತೆ ಮತ್ತು ಬೇಡಿಕೆ ಹೆಚ್ಚಾಗಿ ಸುಮಾರು 1500 ಕಾರ್ಯಕ್ರಮಗಳು, ಸಾಕಷ್ಟು ಇವೆಂಟ್ ಗಳು ಬಂದಿವೆ. ನಮ್ಮ ಸಮುದಾಯವಷ್ಟೆ ಅಲ್ಲದೆ ಎಲ್ಲ ಸಮುದಾಯದವರು ಸಂಘ-ಸಂಸ್ಥೆಗಳು ಪ್ರತ್ಯಕ್ಷ ಪರೋಕ್ಷವಾಗಿ ಪ್ರೀತಿ ಸಹಕಾರವನ್ನು ತೋರಿಸುತ್ತಿದ್ದಾರೆಂದು ತಿಳಿಸಿ, ಮಾರ್ಚ ತಿಂಗಳಲ್ಲಿ ಈಗಿನ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಹ ನನ್ನನ್ನು ಕರೆಸಿ ಕೇವಲ ಒಂದು ನಿಮಿಷದಲ್ಲಿ ಕೌರವರ ನೂರಾ ಒಂದು ಮಕ್ಕಳ ಹೆಸರುಗಳನ್ನು ಹಾಡಿಸಿ ಹರಸಿದರು ಎಂದು ತಿಳಿಸಿದರು
ಈ ಶುಭ ಸಂದರ್ಭ ಅಶೋಕ ಗುಡಿಕೋಟಿ, ಸಮುದಾಯದ ಯವ ಮುಖಂಡರಾದ ರವಿಚಂದ್ರ ಚವ್ಹಾಣ್‌, ಶಿವು ರಾಥೋಡ್‌, ಪರುಶುರಾಮ ಜಾಧವ, ವೆಂಕಟೇಶ ಗೋಬಿ, ಪಕೀರ ನಾಯ್ಕ, ಉಪಸ್ಥಿತರಿದ್ದರು.

Total Views: 0
Share This Article