ವಿಶ್ವ ಹಿಂದೂ ಪರಿಷತ್‌, ಆರ್.ಎಸ್.ಎಸ್‌ ಹಾಗೂ ಗೋರಕ್ಷಾ ಸಮಿತಿಯಿಂದಗೋಹತ್ಯೆ ನಿಷೇಧ ಕಾನೂನು ಜಾರಿಗಾಗಿ ಆಗ್ರಹ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು
Vishwa Hindu Parishad, RSS and Goraksha Samiti demand implementation of cow slaughter ban law

ವಿಶ್ವ ಹಿಂದೂ ಪರಿಷತ್‌, ಆರ್.ಎಸ್.ಎಸ್‌ ಹಾಗೂ ಗೋರಕ್ಷಾ ಸಮಿತಿಯಿಂದ
ಗೋಹತ್ಯೆ ನಿಷೇಧ ಕಾನೂನು ಜಾರಿಗಾಗಿ ಆಗ್ರಹ.

ಜಾಹೀರಾತು

ಗಂಗಾವತಿ: ರಾಷ್ಟ್ರೀಯ ಗೋಮಾತಾ ಸಮ್ಮಾನ್ ಕಾರ್ಯಕ್ರಮದ ಅಂಗವಾಗಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಗೋ-ರಕ್ಷಣಾ ವೇದಿಕೆ ಮತ್ತು ಇತರ ಧಾರ್ಮಿಕ ಸಂಘಟನೆಗಳಿಂದ ಗೋಮಾತೆಯ ಗೌರವದ ಅಭಿಯಾನದಡಿಯಲ್ಲಿ ಇಂದು ಏಪ್ರಿಲ್‌-27 ರಂದು ಗಂಗಾವತಿಯ ತಹಶೀಲ್‌ ಕಚೇರಿಯಲ್ಲಿ ಗೋ ಹತ್ಯೆ ನಿಷೇಧ, ಗೋ-ಸರಂಕ್ಷಣೆ, ಸಂವರ್ಧನೆಗಾಗಿ ಸಹಿ ಸಂಗ್ರಹ ಪ್ರತಿಗಳೊಂದಿಗೆ ತಹಶೀಲ್ದಾರ ಗಂಗಾವತಿರವರ ಮುಖಾಂತರ ದೇಶದ ಗೌರವಾನ್ವಿತ ರಾಷ್ಟ್ರಪತಿಗಳು, ಪ್ರಧಾನಮಂತ್ರಿಗಳು, ರಾಜ್ಯದ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಆನೆಗುಂದಿ ಸುಕ್ಷೇತ್ರ ಶ್ರೀ ದುರ್ಗಾದೇವಿ ಬೆಟ್ಟದ ಪೂಜ್ಯರಾದ ರಾಜಣ್ಣ ಸ್ವಾಮಿಗಳು, ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಉಪಾಧ್ಯಕ್ಷರಾದ ಉಗಮರಾಜ್ ಜೈನ್, ಜಿಲ್ಲಾ ಕಾರ್ಯದರ್ಶಿಗಳಾದ ವಿಠಲ್ ನಾವಡೆ, ಜಿಲ್ಲಾ ಕೋಶಾಧ್ಯಕ್ಷರಾದ ಸತ್ಯನಾರಾಯಣ ದರೋಜಿ, ಗಂಗಾವತಿ ನಗರ ಘಟಕದ ಅಧ್ಯಕ್ಷರಾದ ಚಿದಾನಂದಪ್ಪ ವೀರಘಂಟಿ, ಧರ್ಮಾಚಾರ್ಯ ಪ್ರಮುಖರಾದ ಸುಧೀಂದ್ರ ನವಲಿ, ಜಿಲ್ಲಾ ಧರ್ಮಾಚಾರ್ಯ ಪ್ರಮುಖರಾದ ಡಾ. ವಿಶ್ವನಾಥ ಕುಷ್ಟಗಿ, ಆರ್.ಎಸ್.‌ಎಸ್‌ ಪ್ರಮುಖರಾದ ಸಂಗಮೇಶ್‌, ರವೀಂದ್ರ, ಮದನ್‌, ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರಾದ ವಿಜಯಕುಮಾರ ಅಚ್ಚಪ್ಪ, ಸದಾನಂದ ಶೇಟ್‌, ಬುಲಾಲ್‌ ಭಾಂಟಿಯಾ, ನಿರ್ಮಲ್‌ ಜೈನ್‌, ಮನೀಷ್‌ ಬಂಬ್‌, ದೀಪಕ್‌ ಭಾಂಟಿಯಾ, ಮಂಜು ಕಟ್ಟಿಮನಿ, ಗೋರಕ್ಷಾ ಸಮಿತಿಯ ಹೇರೂರು ಮೋದಿ, ರವಿ ಹಿರೇಮಠ, ರಾಹುಲ್‌ ಗೋಗಡೆ, ಕುಮಾರ ಹೂಗಾರ, ವಿಕ್ರಮ್‌, ಎ.ಕೆ. ಮಹೇಶ, ರಾಜು ಚೋಪ್ಡಾ, ಹರೀಶ್‌ ರಾಯಕರ್‌, ಕಾಂತಿಲಾಲ್‌ ಜೈನ್‌, ಪದಂ ಜೈನ್‌, ನವೀನ್‌ ಭಾಗಮಾರ್‌, ಕಮಲ್‌ ಜೈನ್‌ ಹಾಗೂ ಗೋರಕ್ಷಾ ಸಮಿತಿಯ ನೂರಾರು ಜನ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Total Views: 0
Share This Article