
The 385th Shivanubhav gathering at Sri Bhimambikadevi Math was graced by the Guru's sermon: Shri

ಶ್ರೀ ಭಿಮಾಂಬಿಕಾದೇವಿ ಮಠದಲ್ಲಿ 385 ನೆ ಶಿವಾನುಭವ ಗೋಷ್ಠಿ ಶ್ರೀ ಗುರು ವಚನೋಪದೇಶವನಾಲಿಸಿ : ಶ್ರೀಗಳು

ಯಲಬುರ್ಗಾ: ನಾವು ಉತ್ತಮ ನಡೆ ನುಡಿಗಳಿಂದ ಸುದ್ದ ಇದ್ದು,ಕೆಟ್ಟ ಕೆಲಸಗಳಿಂದ ದೂರವಿದ್ದು ಒಳ್ಳೆಯ ಕೆಲಸ ಕಾರ್ಯದಲ್ಲಿ ಭಾಗವಹಿಸಿ ಪುಣ್ಯ ಕಾರ್ಯಗಳನ್ನು ಮಾಡಬೇಕು ,ಸಜ್ಜನರ ಸಂಘದಲ್ಲಿ ನಿರತರಾಗಬೇಕು ಇದರಿಂದ ಕೆಟ್ಟ ಚಟಗಳಿಂದ ದೂರವಿರಲು ಸಾದ್ಯವಾಗುತ್ತದೆ ಎಂದು ಶ್ರೀ ಭೀಮಾಂಬಿಜಾದೇವಿ ಮಠದಲ್ಲಿ , ಅಕ್ಷತ್ತದಿಗಿ ಅಮಾವಾಸ್ಯೆ ಚತುರ್ದಶಿ ನಿಮಿತ್ತವಾಗಿ ತಾಲೂಕಿನ ದಮ್ಮೂರ ಗ್ರಾಮದಲ್ಲಿ 385 ನೇ ಶಿವಾನುಭವ ಗೋಷ್ಠಿಯಲ್ಲಿ ಶ್ರೀ ಗುರು ವಚನೋಪದೇಶವನಾಲಿಸಿ ದಾಗಳಹುದು ನರರಿಗೆ ಮುಕುತಿ ವಿಷಯ ಕುರಿತು ಮಕ್ಕಳ್ಳಿ ಶಿವಾನಂದಮಠದ ಶಿವಾನಂದ ಸ್ವಾಮೀಜಿ ಅವರು ಮಾತನಾಡಿದರು. ಮಠದ ಒಡೆಯರಾದ ಹನುಮಂತಪ್ಪಜ್ಜ ಧರ್ಮರಮಠ, ಹಾಗು ಶರಣಯ್ಯ ಹಿರೇಮಠ ಸಾನಿಧ್ಯ ವಹಿಸಿದ್ದರು. ಶ್ರೀ ಭೀಮಾಂಭಿಕಾದೇವಿ ಶಿವಾನುಭವ ಸೇವಾ ಸಮಿತಿ ಅದ್ಯಕ್ಷ ಶರಣಬಸಪ್ಪ ದಾನಕೈ ಅವರು ಅದ್ಯಕ್ಷತೆ ವಹಿಸಿ ಮಾತನಾಡಿದರು.ಸಂಗೀತ ಬಳಗದ ಯಮನೂರಪ್ಪ ಹಳ್ಳಿಕೇರಿ, ಕಳಕಪ್ಪ ಹಡಪದ ಸಂಗೀತ ಸೇವೆ ನಿಡಿದರು. ಈ ವೇಳೆ ದುರಗಪ್ಪ ಮಕ್ಕಳ್ಳಿ, ಮಳಿಯಪ್ಪಯ್ಯ ಸ್ವಾಮಿ,ಸೋಮಪ್ಪ್ಪ ರಾಠೋಡ,ಭೀಮಣ್ಣ ಹವಳಿ, ಬಸವರಾಜ ಮಂಡಾಲಿ ಶರಣಪ್ಪ ರಾಠೋಡ, ಬಾಷುಸಾಬ ಕುಷ್ಟಗಿ, ಭೀಮಣ್ಣ ಚಿಕ್ಕಗೌಡ್ರ ,ಬಸವರಾಜ ಮೇಲಸಕ್ರಿ,ಬಾಲಪ್ಪ ಜರಕುಂಟಿ,ಬಸವರಾಜ ಮರಗಪ್ಪನವರ, ಮೇಘರಾಜ ಕುಡಗುಂಟಿ, ಇತರರು ಇದ್ದರು.ಬಳಿಕ ಅನ್ನ ಸಂತರ್ಪಣೆ ಜರುಗಿತು.
