ಕೊಪ್ಪಳದಲ್ಲಿ ರಾಜ್ ಸಂಭ್ರಮ: ಡಾ.ರಾಜಕುಮಾರ ಸಿನಿಮಾ ಗೀತೆಗಳಗಾಯನ, ಡಾ.ರಾಜ್ ಮಿಮಿಕ್ರಿಗೆ ಸಾರ್ವಜನಿಕರಿಗೆ ವಿಶೇಷ ಅವಕಾಶ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

Raj celebration in Koppal: Special opportunity for the public to sing Dr. Rajkumar's movie songs, Dr. Raj's mimicry




ಕೊಪ್ಪಳದಲ್ಲಿ ರಾಜ್ ಸಂಭ್ರಮ: ಡಾ.ರಾಜಕುಮಾರ ಸಿನಿಮಾ ಗೀತೆಗಳ
ಗಾಯನ, ಡಾ.ರಾಜ್ ಮಿಮಿಕ್ರಿಗೆ ಸಾರ್ವಜನಿಕರಿಗೆ ವಿಶೇಷ ಅವಕಾಶ

ಜಾಹೀರಾತು

 


ಕೊಪ್ಪಳ ಏಪ್ರೀಲ್ 17 (ಕ.ವಾ): ಕೊಪ್ಪಳ ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಬೆಂಗಳೂರು ಇವರ ಸಹಯೋಗದಲ್ಲಿ ಏಪ್ರೀಲ್ 24ರಂದು ಸಂಜೆ 5.30ಕ್ಕೆ ನಗರದ ಸಾಹಿತ್ಯ ಭವನದಲ್ಲಿ ಆಯೋಜನೆ ಮಾಡಲಾದ ವರನಟ ಡಾ.ರಾಜಕುಮಾರ ಜನ್ಮದಿನಾಚರಣೆಯ ಡಾ.ರಾಜ್ ಸಂಭ್ರಮ ಕಾರ್ಯಕ್ರಮದಲ್ಲಿ ಡಾ.ರಾಜಕುಮಾರ ಅವರ ಚಲನಚಿತ್ರ ಗೀತೆಗಳನ್ನು ಹಾಡಲು ಆಸಕ್ತ ಸಾರ್ವಜನಿಕರಿಗೆ ಮತ್ತು ಡಾ.ರಾಜಕುಮಾರ ಅವರ ಸಿನಿಮಾದ ಡೈಲಾಗ್ (ಮಿಮಿಕ್ರಿ) ಹೇಳಲು ಆಸಕ್ತ ಕಲಾವಿದರಿಗೆ ವಿಶೇಷ ಅವಕಾಶ ಕಲ್ಪಿಸಲಾಗಿದೆ.
ಕಾರ್ಯಕ್ರಮದಲ್ಲಿ ಕರೋಕೆ ಹಾಡುಗಾರರಿಗೆ ಆದ್ಯತೆ ನೀಡಲಾಗುವುದು. ಡಾ.ರಾಜಕುಮಾರ ಅಭಿಮಾನಿಗಳು ಯಾರೇ ಇದ್ದರೂ ಎಲ್ಲರಿಗೂ ಅವಕಾಶವಿದ್ದು, ವಯಸ್ಸಿನ ಮಿತಿ ಇರುವುದಿಲ್ಲ. ಒಬ್ಬರಿಗೆ ಒಂದು ಹಾಡಿಗೆ ಮಾತ್ರ ಅವಕಾಶವಿದ್ದು, ತಮ್ಮ ಹೆಸರು ಮತ್ತು ಪೂರ್ಣವಿಳಾಸವನ್ನು ನೋಂದಾಯಿಸಲು ಇದೆ ಏಪ್ರೀಲ್ 20 ಕೊನೆಯ ದಿನವಾಗಿರುತ್ತದೆ. ಕಾರ್ಯಕ್ರಮಕ್ಕೆ ಹೆಸರು ನೋಂದಾಯಿಸುವ ಹಾಡುಗಾರರು, ಕಲಾವಿದರು, ಸಾರ್ವಜನಿಕರು ಸ್ವಂತ ಖರ್ಚಿನಲ್ಲೇ ಬರತಕ್ಕದ್ದು. ಕಾರ್ಯಕ್ರಮದಲ್ಲಿ ಪ್ರಮಾಣ ಪತ್ರವನ್ನು ಮಾತ್ರ ಗೌರವವಾಗಿ ಕೊಡಲಾಗುತ್ತದೆ. ಆಸಕ್ತರು, ಗವಿಸಿದ್ದಪ್ಪ ಹೊಸಮನಿ, ಜಿಲ್ಲಾ ವಾರ್ತಾಧಿಕಾರಿಗಳು, ವಾರ್ತಾ ಇಲಾಖೆ ಕೊಪ್ಪಳ ಮೊಬೈಲ್ 9916111356 ಅಥವಾ ಶ್ರೀಮತಿ ಸಾವಿತ್ರಿ ಮುಜುಮದಾರ, ಸದಸ್ಯರು, ಕರ್ನಾಟಕ ಚಲನಚಿತ್ರ ಅಕಾಡೆಮಿ ಬೆಂಗಳೂರು ಮೊಬೈಲ್ 9886922815 ಇವರಿಗೆ ಸಂಪರ್ಕಿಸಿ ಹೆಸರು ನೋಂದಾಯಿಸಬಹುದಾಗಿದೆ ಎಂದು ಕೊಪ್ಪಳ ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Total Views: 0
Share This Article