
Youth should take more interest in sports - K. Somashekar

ಯುವಕರು ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ವಹಿಸಲಿ – ಕೆ.ಸೋಮಶೇಖರ

ಕೊಪ್ಪಳ: ಯುವಕರು ಹೆಚ್ಚು ಹೆಚ್ಚು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡು ತಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಸದೃಢಪಡಿಸಿಕೊಳ್ಳಬೇಕೆಂದು ಕಾಂಗ್ರೆಸ್ ಪಕ್ಷದ ಯುವ ಧುರೀಣರು, ಸಮಾಜ ಸೇವಕರೂ ಆದ ಕೆ.ನಾಗರಾಜ ಅವರ ಪುತ್ರ ಕೆ.ಸೋಮಶೇಖರ Hitnal ಅವರು ಕರೆ ನೀಡಿದರು.
ಶಹಪುರ ಗ್ರಾಮದಲ್ಲಿ ಗೋಂಧಳಿ ಸಮಾಜದ ಯುವಕರ ಪಡೆ ಆಯೋಜಿಸಿದ್ದ ಎಸ್.ಪಿ.ಎಲ್.- ಶಹಪುರ ಪ್ರೀಮಿಯರ್ ಲೀಗ್ -೨೦೨೬ ರ ಕ್ರಿಕೆಟ್ ಪಂದ್ಯಾವಳಿಗಾಗಿ ಆಕ್ಷನ್ ಗೆ ಚಾಲನೆ ನೀಡಿ ಮಾತನಾಡಿದ ಅವರು, ೧೨ ತಂಡಗಳ ಕ್ರೀಡಾಪಟುಗಳಿಗೆ ಪ್ರೋತ್ಸಾಹವಾಗಿ ಜೆರ್ಸಿ ನೀಡಿದರು. ಯುವಕ, ಯುವತಿಯರು ಕೇವಲ ಕ್ರಿಕೆಟ್ ಮಾತ್ರವಲ್ಲ ಕಬ್ಬಡ್ಡಿ, ವಾಲಿಬಾಲ್, ಖೋಖೋ, ಶೆಟಲ್ ಕಾಕ್ ಯಾವುದೇ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರೆ ಅಗತ್ಯ ನೆರವು ನೀಡುವುದಾಗಿ ಹೇಳಿದರು. ಭವಿಷ್ಯದಲ್ಲಿ ಕೊಪ್ಪಳ ಜಿಲ್ಲೆಯ ಎಲ್ಲ ಕ್ರೀಡಾಪಟುಗಳಿಗೆ ಉತ್ತೇಜನಾತ್ಮಕವಾಗಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಮಾದರಿಯಲ್ಲಿ ಜಿಲ್ಲಾ ಕೇಂದ್ರವಾದ ಕೊಪ್ಪಳ ನಗರದಲ್ಲಿ ಕ್ರೀಡಾ ಮೈದಾನ ನಿರ್ಮಿಸುವ ಕನಸು ಇದೆ ಎಂದು ಕ್ರೀಡೆಗೆ ತಮಗಿರುವ ಒಲವನ್ನು ವ್ಯಕ್ತಪಡಿಸಿದರು.
ಇದೇವೇಳೆ ಗೋಂಧಳಿ ಸಮಾಜದ ಅಧ್ಯಕ್ಷರಾದ ವೀರಣ್ಣ ಜೋಷಿ ಮತ್ತು ಎಲ್ಲ ಪದಾಧಿಕಾರಿಗಳು ಕೆ.ಸೋಮಶೇಖರ್ ಅವರಿಗೆ ಸನ್ಮಾನಿಸಿ ಗೌರವಿಸಿದರು. ಬಳಿಕ ತಂಡಗಳ ಆಕ್ಷನ್ ಪ್ರಕ್ರಿಯೆ ನಡೆಯಿತು. ಶಹಪುರ ಪ್ರೀಮಿಯರ್ ಲೀಗ್ – ೨೦೨೬ ನ ಉಸ್ತುವಾರಿಗಳಾದ ಅಭಿಷೇಕ್ ಎನ್.ಸಿಂಧೆ, ಪ್ರವೀಣ್ ಟಿ.ವಾಕೋಡೆ, ಸತೀಶ್ ಪಿ.ಗೋಗರೆ, ಮೇಘರಾಜ್ ಪಿ.ವಾಕೋಡೆ, ಸಂತೋಷ್ ಕೆ.ಗೋಗರೆ, ಉದಯ್ ಸಿಂಧೆ, ಮಹಾಂತೇಶ್, ಕೃಷ್ಣ ಮತ್ತು ಅಣ್ಣಪ್ಪ ಗೋಗರೆ ಅವರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ನಿಂಗಜ್ಜ ಚೌಧರಿ, ಗೋಂಧಳಿ ಸಮಾಜದ ಹಿರಿಯರಾದ ಕೋಳೂರಪ್ಪ ಗೋಗರೆ, ಮಾರ್ಕಂಡೆಪ್ಪ ಗೋಗರೆ, ಹಿರಿಯ ಧುರೀಣರಾದ ಎಸ್.ಎಚ್.ಕಿನ್ನಾಳ್, ಪುಂಡಲೀಕಪ್ಪ ವಾಕೋಡೆ, ಮಲ್ಲೇಶ್ ಗೋಗರೆ, ಸುಭಾಷ್ಚಂದ್ರ ವಾಕೋಡೆ, ದೇವಣ್ಣ ಗೋಗರೆ, ಲಕ್ಷö್ಮಣ ವಾಕೋಡೆ, ಪ್ರಾಚಾರ್ಯರಾದ ಡಾ.ದಯಾನಂದ್ ಕಿನ್ನಾಳ್, ರಮೇಶ್ ಸಿಂಧೆ, ಕೃಷ್ಣ ಭೋರಾತ್, ತುಕಾರಾಮ್ ವಾಕೋಡೆ, ಯಮುನಪ್ಪ ನಾಯ್ಕಲ್, ಬಸವರಾಜ ರೇಣಿಕೆ, ಮಂಜು ಕೆ.ಜೋಷಿ, ಪ್ರಭು ನಾಯ್ಕಲ್, ರವಿ ಕೃಷ್ಣ ನಾಯ್ಕಲ್ ಸೇರಿದಂತೆ ಗೋಂಧಳಿ ಸಮುದಾಯದ ಅನೇಕ ಹಿರಿಯರು, ಯುವಕರು ಮತ್ತು ಕ್ರೀಡಾಭಿಮಾನಿಗಳು ಇದ್ದರು. ಕಾರ್ಯಕ್ರಮದ ನಿರ್ವಹಣೆಯನ್ನು ಪತ್ರಕರ್ತರಾದ ಮಲ್ಲಿಕಾರ್ಜುನ ವಿ.ಜೋಷಿ ಅವರು ನಡೆಸಿಕೊಟ್ಟರು.
