Virupakshi Gowda Nayaka congratulated Suresh Chaluvadi, who was elected as the district president of the Panchayat Development Officers' Welfare Development Association.

ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಸುರೇಶ ಚಲುವಾದಿ ಅವರಿಗೆ ವಿರುಪಾಕ್ಷಿಗೌಡ ನಾಯಕ ಅಭಿನಂದಿಸಿದರು.
ಗಂಗಾವತಿ: ಕರ್ನಾಟಕ ರಾಜ್ಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ (ರಿ)ಕ್ಕೆ ಕೊಪ್ಪಳ ಜಿಲ್ಲಾದ್ಯಕ್ಷರಾಗಿ ವಡ್ಡರಹಟ್ಟಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಯಾದ ಸುರೇಶ ಚಲುವಾದಿ ಅವರು ಆಯ್ಕೆಯಾಗಿರುವುದಕ್ಕೆ ಧೀರ ಕನ್ನಡಿಗರ ಕರವೇ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ವಿರುಪಾಕ್ಷಿಗೌಡ ನಾಯಕ ಸಂತಸ ವ್ಯಕ್ತಪಡಿಸಿದರು.
ಅವರು ಏ.1 ರಂದು ಸುರೇಶ ಚಲುವಾದಿ ಅವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದರು. ಸುರೇಶ ಚಲುವಾದಿ ಅವರು ಕಳೆದ ಮಾರ್ಚ್-26 ರಂದು, ಚುನಾವಣಾ ಅಧಿಕಾರಿಯಾಗಿದ್ದ ರಾಜಾಸಾಬ ನದಾಫ್ ಅವರ ನೇತೃತ್ವದಲ್ಲಿ ನಡೆದ ಸಂಘದ ಚುನಾವಣೆಯಲ್ಲಿ ಆಯ್ಕೆಯಾಗಿದ್ದು, ಸದರಿಯವರು ಗ್ರಾ.ಪಂ ಆಡಳಿತ ವ್ಯವಸ್ಥೆಯಲ್ಲಿ ಮಾತ್ರವಲ್ಲದೇ ಸಂಘದ ಚಟವಟಿಕೆಗಳಲ್ಲೂ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಲಿ ಎಂದು ಆಶಿಸಿ ಅಭಿನಂದಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಧೀರ ಕನ್ನಡಿಗರ ಕರವೇ ಸಂಘಟನೆಯ ಕೊಪ್ಪಳ ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಶಿವಕುಮಾರ ಹಾಗೂ ವಡ್ಡರಹಟ್ಟಿ ಗ್ರಾ.ಪಂ ಯ ಎಲ್ಲಾ ಸಿಬ್ಬಂದಿ ವರ್ಗದವರು ಹಾಜರಿದ್ದರು.
