Honorary Doctorate conferred on Mattihalli MD Chikkanna. Congratulations from Karnataka Bahujan Movement.

ಮತ್ತಿಹಳ್ಳಿ ಎಂ ಡಿ ಚಿಕ್ಕಣ್ಣನವರಿಗೆ ಮುಡಿಗೇರಿದ ಗೌರವ ಡಾಕ್ಟರೇಟ್ .ಕರ್ನಾಟಕ ಬಹುಜನ ಚಳುವಳಿ ಅಭಿನಂದನೆ.
ತಿಪಟೂರು.ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮತ್ತಿಹಳ್ಳಿ ಗ್ರಾಮದ ಎಂಡಿ ಚಿಕ್ಕಣ್ಣನವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರಧಾನ.
ಮತ್ತಿಹಳ್ಳಿ ಎಂಬ ಹಳ್ಳಿಗಾಡಿನಲ್ಲಿ ಬಡತನದಲ್ಲೇ ಜನಿಸಿದ ದಲಿತ ಸಮುದಾಯದ ಶ್ರೀಯುತ ಎಂ ಡಿ ಚಿಕ್ಕಣ್ಣನವರು ಹರಿಕಥೆ ಸೇರಿದಂತೆ ಹಲವು ಕಲಾಕ್ಷೇತ್ರದಲ್ಲಿ ದಶಕಗಳ ಕಾಲ ಸೇವಿ ಸಲ್ಲಿಸಿ ಇವರು ಪುರಾಣ ಕಥೆಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವಲ್ಲಿ ದೊಡ್ಡ ಹೆಸರು ಮಾಡಿದ್ದಾರೆ ಇವರ ಸಾಮಾಜಿಕ ಹಾಗೂ ಕಲಾ ಸೇವೆ ಗುರುತಿಸಿ ತಮಿಳುನಾಡಿನ ಏಷ್ಯ ಇಂಟರ್ನ್ಯಾಷನಲ್ ಕಲ್ಚರ್ ರಿಸರ್ಚ್ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರಧಾನ ಮಾಡಿ ಸನ್ಮಾನಿಸಲಾಯಿತು.
Total Views:
0
