Former MLA R. Narendra visited the new temple in Astur village.

ಅಸ್ತೂರು ಗ್ರಾಮದ ನೂತನ ದೇವಾಲಯಕ್ಕೆ ಬೇಟಿ ನೀಡಿದ ಮಾಜಿ ಶಾಸಕ ಆರ್ ನರೇಂದ್ರ .
ವರದಿ:ಬಂಗಾರಪ್ಪ .ಸಿ.
ಹನೂರು :ದೇವಾಲಯಗಳನ್ನು ಗ್ರಾಮಗಳಲ್ಲಿ ನಿರ್ಮಿಸಿ ಭಕ್ತರಿಗೆ ಸಮರ್ಪಣೆ ಮಾಡುವುದರಿಂದ ಆಯಾ ಗ್ರಾಮದಲ್ಲಿ ಆರೋಗ್ಯವಂತ ವಾತವರ್ಣ ನಿರ್ಮಾಣವಾಗಲಿದೆ ಎಂದು ಮಾಜಿ ಶಾಸಕರಾದ ಆರ್ ನರೇಂದ್ರ ತಿಳಿಸಿದರು.
ಹನೂರು ತಾಲೂಕಿನ ಪೊನ್ನಾಚಿ ಗ್ರಾಮ ಪಂಚಾಯತಿಯ ಅಸ್ತೂರು ಗ್ರಾಮದಲ್ಲಿ ನೂತನವಾಗಿ ನೀರ್ಮಿಸಿರುವ. ಶ್ರೀ ಶನಿಶ್ವರ ಸ್ವಾಮಿ ,ಜೆಡೆಶ್ವರಸ್ವಾಮಿ,ಹಾಗೂ ಪಡಗಲ ಮಾದೇಶ್ವರ ಸ್ವಾಮಿ ದೇವಾಲಯದ ಬೇಟಿ ನೀಡಿದ ನಂತರ ಮಾತನಾಡಿದ ಅವರು ಕಾಡಂಚಿನ ಗ್ರಾಮದಲ್ಲಿ ಇಂತಹ ದೇವಾಲಯ ನಿರ್ಮಿಸಿರುವುದು ನಮಗೆ ಬಹಳ ಸಂತೋಷವಾಗಿದೆ, ಧಾರ್ಮಿಕ ಸ್ಥಳಗಳಲ್ಲಿ ಶುಭ ಕಾರ್ಯಗಳನ್ನು ಮಾಡಲು ಭಕ್ತಾದಿಗಳು ಉಪಯೋಗಿಸಿ ಕೊಳ್ಳಲು ತಿಳಿಸಿದರು.
ನೂತನವಾಗಿ ಜೀರ್ಣೋದ್ಧಾರ ಮಾಡಿದ ದೇವಾಲಯದಲ್ಲಿ ಭಾಗವಹಿಸಿ ಮಾತನಾಡಿದ ಪೊನ್ನಾಚಿ ಮಹಾದೇವಸ್ವಾಮಿ ರವರು ನಮ್ಮ ಗ್ರಾಮದಲ್ಲಿ ದೇವಾಲಯ ನಿರ್ಮಾಣ ಮಾಡಿರುವುದು ಸಂತೋಷದ ಸಂಗತಿ ಎಲ್ಲಾ ಜನಾಂಗದವರು ಸಹ ದೇವರ ಕೃಪೆಗೆ ಪಾತ್ರರಾಗಲಿ ಎಂದು ತಿಳಿಸಿದರು.
ಇದೇ ಸಮಯದಲ್ಲಿ ಮಾತನಾಡಿದ ಉದ್ಯಮಿ ಪೊನ್ನಾಚಿ ರಂಗಸ್ವಾಮಿ ಮಾತನಾಡಿ ಹಿಂದಿನ ಕಾಲದಿಂದಲು ಸಹ ನಮ್ಮ ಪೂರ್ವಜರು ಆಚರಿಸಿಕೊಂಡು ಬಂದಿರುವ ಆಚಾರ ವಿಚಾರವು ಇಂದು ಮುಂದು ನಡೆಯುತ್ತದೆ , ಹಾಗೇಯೆ ಗ್ರಾಮಗಳಲ್ಲಿ ಶಾಂತಿ ಸುವ್ಯವಸ್ಥೆ ನೆಲೆಗೊಳ್ಳಲಿ ಎಂದರು .
ನೂತನ ಜೀರ್ಣೋದ್ದಾರ ಕಾರ್ಯದಲ್ಲಿ , ಅಸ್ತೂರು ಗ್ರಾಮದ ಸ್ವಾಮೀಜಿಗಳಾದ ಶಿವಕುಮಾರ್ ಸ್ವಾಮೀಜಿಗಳು ಹಾಗೂ ಪೂರೋಹಿತರಾದ ಶಿವಕುಮಾರ್ ಸ್ವಾಮೀಜಿಗಳು ವಿಜೃಂಭಣೆಯಿಂದ ಪೂಜಾ ಕಾರ್ಯವನ್ನು ಮಾಡಿ ಗ್ರಾಮ ಜನರ ಸಂತೋಷದ ಕ್ಷಣಕ್ಕೆ ಸಾಕ್ಷಿಯಾದರು.
ಇದೇ ಸಂದರ್ಭದಲ್ಲಿ ಕರಿಕಲ್ಲು ಮಾಲಿಕರಾದ ಮ ಬೆಟ್ಟದ ಪುಟ್ಟಸ್ವಾಮಿ , ದೇವಾಲಯದ ನೂತನ ವಿಗ್ರಹಗಳಿಗೆ ಧನ ಸಹಾಯ ಮಾಡಿದ ಕಾಂಗ್ರೆಸ್ ಮುಖಂಡರಾದ ದಾಸಪ್ಪ,ಊರು ಗೌಡರುಗಳಾದ ರಂಗಮಾದಪ್ಪ , ಚಿಕ್ಕರಂಗೇಗೌಡ. ಮುನಿಬಸವೇಗೌಡ , ಮುಖಂಡರುಗಳಾದ ಕೋಟೆಬಸಪ್ಪ, ಎ ಸಿ ವೀರಪ್ಪ , ಕಾಳಪ್ಪ. ಮುನಿಮಾರ ,ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಂಗಾರಪ್ಪ ಸಿ. ರವಿಕುಮಾರ್ ,ಮಾದಚಾರಿ. ಬಂಗಿದಾಸೆಗೌಡ,ಬಿಜೆಪಿ ಮುಖಂಡರಾದ ಮಹಾಲಿಂಗಸ್ವಾಮಿ . ಹನೂರು ಯುತ್ ಕಾಂಗ್ರೆಸ್ ಅಧ್ಯಕ್ಷರಾದ ರಮೇಶ್ , ಮುನಿರಾಜು, ಗ್ರಾ ಪ ಮಾಜಿ ಉಪಾಧ್ಯಕ್ಷರಾದ ಭದ್ರೆಗೌಡ,ಪುಟ್ಟಮಾದೇಗೌಡರು. ಬಿ ಎಸ್ ಮುತ್ತು. ರಾಮದಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.
