If Kavivani is a flower, Janavani is the root of Mahadevappa’s salt
ಚಿಟಗುಪ್ಪ : ಕವಿವಾಣಿ ಹೂವಾದರೆ ಜನವಾಣಿ ಬೇರು ಎಂಬಂತೆ ಯಾವುದೇ ಭಾಷೆಯಾಗಲಿ ಅದು ಸ್ವಯಂಸಹಜಭಾವದಿಂದ ಭಾವದೀಪ್ತಿಯಾಗಿ ಬಂದುದು ಜಾನಪದ ಎನಿಸುತ್ತದೆ ಎಂದು ವಿಶ್ರಾಂತ ಪ್ರಾಚಾರ್ಯರಾದ ಮಹಾದೇವಪ್ಪ ಉಪ್ಪಿನ ನುಡಿದರು.
ನಗರದ ಸದ್ಬೋದಿನಿ ಮಹಿಳಾ ಕಲಾ ಮಹಾವಿದ್ಶಾಲಯದಲ್ಲಿ ಚಿಟಗುಪ್ಪ ತಾಲೂಕಾ ಜಾನಪದ ಪರಿಷತ್ತಿನ ವತಿಯಿಂದ ಹಮ್ಮಿಕೊಂಡ ವಿಶ್ವ ಜಾನಪದ ದಿನಾಚರಣೆ ಅಂಗವಾಗಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು ಕವಿ ಅಞ್ಞ್ ತವಾಗಿ ಕವಿಭಾವ ಮಾತ್ರ ಲಿಪಿರೂಪದಲ್ಲಿ ವ್ಶಕ್ತವಾಗುತ್ತದೆ. ಜನಪದ ಸಾಹಿತ್ಶ ಜನಪದರ ಉಸಿರಿರುವವರೆಗೂ ಜೀವಂತವಿರುತ್ತದೆ ಮತ್ತು ಅದು ಗೇಯಗುಣ ಪ್ರದಾನವಾಗಿರುತ್ತದೆ ಎಂದು ಸುಂದರವಾಗಿ ವಿದ್ಯಾರ್ಥಿನಿಯರಿಗೆ ಮನಮುಟ್ಟುವಂತೆ ತಿಳಿಸಿದರು.
ತಾಲೂಕಾ ಜಾನಪದ ಪರಿಷತ್ತಿನ ಅಧ್ಶಕ್ಷರಾದ ಸಂಗಮೇಶ ಎನ್ ಜವಾದಿಯವರು ಮಾತನಾಡಿ ನಿಜವಾದ ಸಾಹಿತ್ಶವೆಂದರೆ ಅದು ಜಾನಪದ ಸಾಹಿತ್ಶವೇ ಆಗಿದ್ದು ಇಂದಿನ ದಿನ ಇದರ ರಕ್ಷಣೆ ಮಾಡಬೇಕಾಗಿದ್ದು ಎಲ್ಲರ ಆದ್ಯ ಕರ್ತವ್ಯವಾಗಿದೆ. ಹಳ್ಳಿ ಸಂಸ್ಕೃತಿ ಉಳಿಸಿ, ಬೆಳೆಸಬೇಕು, ಇದು ಈ ನಾಡಿನ ನೆಲದ ಮೂಲ ಸಂಸ್ಕೃತಿಯಾಗಿದೆ ಎಂದು ವಿದ್ಯಾರ್ಥಿನಿಯರಿಗೆ ಕರೆ ಕೋಟ್ಟರು.
ಪರಿಷತ್ತಿನ ಗೌರವ ಅಧ್ಶಕ್ಷರಾದ ಮಾರುದ್ರಪ್ಪ ಅಣದೂರೆಯವರು ಜಾನಪದ ಸಾಹಿತ್ಶದ ಉಳಿವು ಭಾವೀ ಜನಾಂಗದ ಮೇಲಿದೆಯೆಂದು ತಿಳಿಸಿದರು.
ಸಮಾರಂಭದ ಅಧ್ವಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಪ್ರಭುಶೆಟ್ಟಿ ತುಗಾಂವರವರು ವಹಿಸಿಕೊಂಡು ಮಾತನಾಡಿದ ಅವರು ಮಹಿಳೆಯರು ಮನಸ್ಸು ಮಾಡಿದರೆ ಜಾನಪದ ಸಾಹಿತ್ಶವನ್ನು ಹೆಚ್ಚು ಶ್ರೀಮಂತಗೊಳಿಸಬಹುದು ಎಂದರು.
ಪ್ರಾಂಶುಪಾಲರಾದ ಸಂಗೀತಾ ಪಾಟೀಲ ಮಹಿಳಾ ಸ್ವಾಗತ ಕೋರಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಾನಪದ ಗೀತೆಗಳನ್ನು ಹಾಡಿದವರಿಗೆ ಪ್ರಮಾಣಪತ್ರ ನೀಡಲಾಯಿತು.
ಸಂಸ್ಥೆಯ ಉಪಾಧ್ಯಕ್ಷ ಶರದ ಘಂಟೋಜಿ,
ಕೋಶಾಧ್ಯಕ್ಷ ರೇವಣ್ಣಸಿದ್ದಪ್ಪ ಕಂಚನಾಳ,
ಪದವಿ ಪೂರ್ವ ಕಾಲೇಜು ಪ್ರಾಚಾರ್ಯರಾದ ವಿಜಯಕುಮಾರ್ ಪಾಟೀಲ, ಮುಖ್ಯೋಪಾಧ್ಯಾಯರಾದ ರತ್ನಪ್ಪಾ ನೆಲ್ವಾಳೆ, ಉಪನ್ಯಾಸಕರಾದ ಶಾಹಿನ ಮೇಡಂ,
ತಬಸುಮ ಮೇಡಂ ,ರಾಜಕುಮಾರ್ ಸರ್ ಸೇರಿದಂತೆ ಪರಿಷತ್ತಿನ ಪದಾಧಿಕಾರಿಗಳು, ವಿದ್ಯಾರ್ಥಿನಿಯರು ಹಾಜರಿದ್ದರು.