Food Inspector Vishnumurthy Betti seized unauthorized cylinders from various places in Hanur town.

ಹನೂರು ಪಟ್ಟಣದ ವಿವಿಧೆಡೆ ಆಹಾರ ನಿರೀಕ್ಷಕ ವಿಷ್ಣುಮೂರ್ತಿ ಬೇಟಿ ಅನಧಿಕೃತ ಸಿಲಿಂಡರುಗಳ ವಶ.
ವರದಿ: ಬಂಗಾರಪ್ಪ .ಸಿ.
ಹನೂರು:ವಿದೇಶದಲ್ಲಿ ನಡೆಯುವ ಯುದ್ದದಿಂದ ದೇಶದಲ್ಲಿ ಅನಿಲಗಳ ಕೊರತೆಯನ್ನು ಎದುರಿಸುವಾಗ ನಮ್ಮ ತಾಲ್ಲೂಕು ಕೇಂದದಲ್ಲಿ ಅಂತಹ ಕೊರತೆ ಕಡಿಮೆಯಾಗಿದೆ ,ಇದೇ ಸಮಯದಲ್ಲಿ ಸಾರ್ವಜನಿಕರಿಂದ ದೂರು ಬಂದ ಹಿನ್ನಲೆಯಲ್ಲಿ ಇಂದು ಪಟ್ಟಣದ ಬಾರ್ ಅಂಡ್ ರೆಸ್ಟೋರೆಂಟ್,ಹೋಟೆಲ್ ಗಳು ಹಾಗೂ ಬೇಕರಿ, ಟೀ ಅಂಗಡಿಗಳ ಮೇಲೆ ದಾಳಿ ನಡೆಸಿ ಗೃಹಬಳಕೆಯ 11 ಗ್ಯಾಸ್ ಸಿಲಿಂಡರ್ ಗಳನ್ನು ಪಡೊಸಿಕೊಳ್ಳಲಾಯಿತು ಎಂದು ಆಹಾರ ನಿರೀಕ್ಷಕ ವಿಷ್ಣುಮೂರ್ತಿ ತಿಳಿಸಿದರು.
ರಾಜ್ಯ ಸೇರಿದಂತೆ ಜಿಲ್ಲೆಯಾದ್ಯಂತ ಗೃಹಬಳಕೆಯ ಸಿಲಿಂಡರ್ ಗಳನ್ನು ಹೋಟೆಲ್, ಬೇಕರಿ, ಟೀ ಹೋಟೆಲ್ ಗಳಲ್ಲಿ ಬಳಸುತ್ತಿರುವ ಹಿನ್ನೆಲೆ ಸಾರ್ವಜನಿಕರಿಂದ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಆಹಾರ ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರಾದ ವಸುಂದರವರ ಸೂಚನೆಯ ಮೇರೆಗೆ 11 ಸಿಲಿಂಡರ್ ಗಳನ್ನು ಪಡೆದುಕೊಳ್ಳಲಾಗಿದೆ,
ಹನೂರು ಪಟ್ಟಣದ ಶ್ರೀ ಸಾಯಿ ರೆಸ್ಟೋರೆಂಟ್, ಬಸವೇಶ್ವರ ಟೀ ಸ್ಟಾಲ್, ಮಹದೇಶ್ವರ ಹೋಟೆಲ್, ಹರ್ಷ ಆರಾಧ್ಯ ಟೀ ಸ್ಟಾಲ್, ರಾಜಮಣಿ ಟೀ ಸ್ಟಾಲ್, ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ನಂದಿನಿ ಹಾಲಿನ ಕೇಂದ್ರ, ಟೈಮ್ ಫಾರ್ ಟಿ, ಶಾಂತಿ ಬೇಕರಿ ಅಶ್ವಿನಿ ಬೇಕರಿಯಲ್ಲಿ ಮೂರು ಸಿಲಿಂಡರ್ ಸೇರಿದಂತೆ 11 ಸಿಲಿಂಡರ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಗೃಹಬಳಕೆಯ ಸಿಲಿಂಡರ್ ಬಳಕೆ ಮಾಡುತ್ತಿದ್ದ ಮಾಲೀಕರ ಮೇಲೆ ಎಲ್‌ಪಿಜಿ 2000ರ ಆದೇಶದಂತೆ ಜಿಲ್ಲಾಧಿಕಾರಿಗಳ ನ್ಯಾಯಾಲಯಕ್ಕೆ ಪ್ರಕರಣವನ್ನು ವರ್ಗಾಯಿಸಲಾಗಿದೆ.
ವಶಪಡಿಸಿಕೊಂಡ ಗೃಹಬಳಕೆಯ ಸಿಲಿಂಡರ್ ಗಳನ್ನು ಭಾರತ್ ಗ್ಯಾಸ್ ಏಜೆನ್ಸಿ ಮಾಲೀಕರಿಗೆ ಹಸ್ತಾಂತರ ಮಾಡಲಾಗಿದೆ.
ದಾಳಿಯಲ್ಲಿ ಹನೂರು ಪೊಲೀಸ್ ಠಾಣೆಯ ಎಎಸ್ಐ ಶಿವರಾಜ್, ಆಹಾರ ಇಲಾಖೆಯ ಸಿಬ್ಬಂದಿಯಾದ ಸೋಮಣ್ಣ ಸೇರಿದಂತೆ ಇನ್ನಿತರರು ಹಾಜರಿದ್ದರು.










Leave a Reply