Allegation of massive illegality in road works: “Not disposal of file, comprehensive investigation is needed - Matin Khan

ರಸ್ತೆ ಕಾಮಗಾರಿಯಲ್ಲಿ ಭಾರೀ ಅಕ್ರಮ ಆರೋಪ: “ಕಡತ ವಿಲೇವಾರಿ ಅಲ್ಲ, ಸಮಗ್ರ ತನಿಖೆ ಬೇಕು- ಮತಿನ್ ಖಾನ್

ಕೊಪ್ಪಳ : ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ 2022-23ನೇ ಸಾಲಿನ ಮೆಗಾ-ಮ್ಯಾಕ್ರೋ ವಲಯದಲ್ಲಿ ಮಂಜೂರಾದ ಹೊಸಳ್ಳಿ–ಕೊಪ್ಪಳ ರಸ್ತೆ (ಕಿ.ಮೀ 13.00 ರಿಂದ 15.75) ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ಸಂಪೂರ್ಣ ಕಳಪೆ ಗುಣಮಟ್ಟದ ಕಾಮಗಾರಿ ನಡೆದಿದೆ ಎಂದು ಸಾಮಾಜಿಕ ಕಾರ್ಯಕರ್ತ ಮತಿನ್ ಖಾನ್..
ಆರೋಪಿಸಿದ್ದಾರೆ. ಈ ರಸ್ತೆಯಲ್ಲಿ ದಿನನಿತ್ಯ ಸಾರ್ವಜನಿಕರು ಸಂಚರಿಸುತ್ತಿದ್ದು, ಇದುವರೆಗೆ ತಗ್ಗು-ಗುಂಡಿ ಮತ್ತು ಧೂಳಿನಿಂದ ಬಳಲುತ್ತಿದ್ದವರು ಉತ್ತಮ ರಸ್ತೆ ನಿರ್ಮಾಣವಾಗುತ್ತಿದೆ ಎಂಬ ನಿರೀಕ್ಷೆಯಲ್ಲಿ ಇದ್ದರು. ಆದರೆ ಈಗ ಹೊಸ ರಸ್ತೆಯೇ ಕಳಪೆಯಾಗಿರುವುದರಿಂದ ಸ್ಥಳೀಯರು ಆಡಳಿತ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿ ಸಿ ರಸ್ತೆ ನಿರ್ಮಾಣಕ್ಕೆ ಸೂಕ್ತ ಗುಣಮಟ್ಟ ಗಮನದಲ್ಲಿಟ್ಟುಕೊಳ್ಳಬೇಕು. ಆದರೆ ಇಲ್ಲಿ ಕಾಮಗಾರಿ ನಡೆಸಿರುವುದು ಕಳಪೆ ಸ್ಪಷ್ಟವಾಗಿದ್ದು, ಇದರಿಂದ ಗುತ್ತೇದಾರರು ಹಾಗೂ ಅಧಿಕಾರಿಗಳು ಸರ್ಕಾರದ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಸಾರ್ವಜನಿಕರಿಗೆ ಮೋಸ ಮಾಡಿ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಹಲವು ಸ್ಥಳೀಯರ ಆರೋಪ ಕೇಳಿಬಂದಿದೆ. ಕೂಡಲೇ ಕಳಪೆ ಕಾಮಗಾರಿಯನ್ನು ತೆರವುಗೊಳಿಸಿ, ಪುನಃ ಎಸ್ಟಿಮೇಟ್ ಪ್ರಕಾರ ಗುಣಮಟ್ಟದ ರಸ್ತೆ ನಿರ್ಮಿಸಬೇಕು. ಈ ಕುರಿತು ಭ್ರಷ್ಟ ಅಧಿಕಾರಿಗಳು ಗುತ್ತಿಗೆದಾರರ ವಿರುದ್ಧ ತನಿಖೆ ನಡೆಯಬೇಕು ಎಂದು ಅಗ್ರಹಿಸಿದ್ದಾರೆ.
ಏನಿದು ಪ್ರಕರಣ..!?
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ 2022-23ನೇ ಸಾಲಿನ ಮೆಗಾ-ಮ್ಯಾಕ್ರೋ ವಲಯದಲ್ಲಿ ಮಂಜೂರಾದ ಹೊಸಳ್ಳಿ–ಕೊಪ್ಪಳ ರಸ್ತೆ (ಕಿ.ಮೀ 13.00 ರಿಂದ 15.75) ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ಸಂಬಂಧಿಸಿದಂತೆ ಗುತ್ತಿಗೆ ಪ್ರಕ್ರಿಯೆಯಲ್ಲಿ ಗಂಭೀರ ಅಕ್ರಮಗಳು ನಡೆದಿರುವ ಆರೋಪಗಳು ತೀವ್ರವಾಗುತ್ತಿವೆ. ಸಲ್ಲಿಸಲಾದ ದೂರು ಅರ್ಜಿಯಲ್ಲಿ, ಗುತ್ತಿಗೆದಾರರ ಅರ್ಹತೆ ಮತ್ತು ಅನುಭವವನ್ನು ಸೂಕ್ತವಾಗಿ ಪರಿಶೀಲಿಸದೇ ಒಪ್ಪಂದ ನೀಡಲಾಗಿದೆ ಎಂದು ಆರೋಪಿಸಲಾಗಿದ್ದು, ಟೆಂಡರ್ ನಿಯಮಾವಳಿಗಳ ಉಲ್ಲಂಘನೆ ನಡೆದಿದೆ ಎಂಬ ಗಂಭೀರ ಅಂಶಗಳು ಬೆಳಕಿಗೆ ಬಂದಿವೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಎಂಜಿನಿಯರ್‌ಗಳು ಹಾಗೂ ಗುತ್ತಿಗೆದಾರರ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಆದರೆ ಜಿಲ್ಲಾಧಿಕಾರಿಗಳ ಆದೇಶಕ್ಕೂ ಕ್ಯಾರೆ ಎನ್ನುತ್ತಿಲ್ಲ,
ಹಾಗೂ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಿಂದ ದಾಖಲೆಗಳನ್ನು ಪಡೆದಿರುವುದಾಗಿ ಹೇಳಿದ ಅಧಿಕಾರಿಗಳು, ಲಭ್ಯ ಮಾಹಿತಿಯ ಆಧಾರದ ಮೇಲೆ ಪ್ರಕರಣವನ್ನು ಪರಿಶೀಲಿಸಿ ಕಡತವನ್ನು ವಿಲೇವಾರಿ ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. “ಸಂಪೂರ್ಣ ತನಿಖೆ ಇಲ್ಲದೆ ಕಡತ ಮುಚ್ಚಿರುವುದು ಯಾಕೆ?” ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಗಂಗಾವತಿ ನಗರದ ರಾಂಪೂರ ನಿವಾಸಿ ಮತಿನ್ ಖಾನ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿ, “ಇದು ಸರಳ ನಿರ್ಲಕ್ಷ್ಯವಲ್ಲ, ದೊಡ್ಡ ಮಟ್ಟದ ಅಕ್ರಮವಾಗಿರುವ ಸಾಧ್ಯತೆ ಇದೆ. ಕೇವಲ ದಾಖಲೆ ಪರಿಶೀಲನೆ ಹೆಸರಿನಲ್ಲಿ ಪ್ರಕರಣ ಮುಚ್ಚುವುದು ಒಪ್ಪಲಾಗುವುದಿಲ್ಲ. ಸ್ವತಂತ್ರ ಹಾಗೂ ಪಾರದರ್ಶಕ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
ಸ್ಥಳೀಯರು ಕೂಡ ಕಾಮಗಾರಿಯ ಗುಣಮಟ್ಟ, ಗುತ್ತಿಗೆ ನೀಡುವ ವಿಧಾನ ಮತ್ತು ಅಧಿಕಾರಿಗಳ ಪಾತ್ರ ಕುರಿತು ಗಂಭೀರ ಅನುಮಾನ ವ್ಯಕ್ತಪಡಿಸುತ್ತಿದ್ದು, ಈ ಪ್ರಕರಣವನ್ನು ಮೇಲ್ಮಟ್ಟದ ತನಿಖೆಗೆ ಒಪ್ಪಿಸಬೇಕೆಂಬ ಒತ್ತಾಯ ಹೆಚ್ಚುತ್ತಿದೆ.










Leave a Reply