ಮಾ.16ರಂದು ನಗರಸಭೆ ಬಜೆಟ್ ಪೂರ್ವಭಾವಿ ಸಭೆಸಾರ್ವಜನಿಕರು ಭಾಗವಹಿಸಲು ಪೌರಾಯುಕ್ತರು ಕರೆ
Municipal Council budget pre-meeting on March 16th
Public invited to participate by civic commissioner
ಮಾ.16ರಂದು ನಗರಸಭೆ ಬಜೆಟ್ ಪೂರ್ವಭಾವಿ ಸಭೆ
ಸಾರ್ವಜನಿಕರು ಭಾಗವಹಿಸಲು ಪೌರಾಯುಕ್ತರು ಕರೆ


ಗಂಗಾವತಿ:ನಗರಸಭೆಯ 2026-27ನೇ ಸಾಲಿನ ಆಯ-ವ್ಯಯದ ಬಜೆಟ್ ಮಂಡಣೆ ಕುರಿತು ಮಾ.16 ರಂದು ಸೋಮವಾರ ಸಂಜೆ 4 ಗಂಟೆಗೆ ಪೂರ್ವಭಾವಿ ಸಭೆ ನಡೆಸಲಾಗುತ್ತಿದೆ.
ಈ ಸಭೆಗೆ ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ನಗರಸಭೆ ಮಾಜಿ ಅಧ್ಯಕ್ಷರು, ಮಾಜಿ ಸದಸ್ಯರು, ವ್ಯಾಪಾರಸ್ಥರು, ಉದ್ಯಮಿಗಳು, ಸಾರ್ವಜನಿಕರು, ಪತ್ರಕರ್ತರು ಆಗಮಿಸಿ ಬಜೆಟ್ ಮಂಡನೆ ಕುರಿತು ತಮ್ಮ ಸಲಹೆ ನೀಡಬೇಕು ಎಂದು ಪೌರಾಯುಕ್ತ ವಿರುಪಾಕ್ಷಮೂರ್ತಿ ಕರೆ ನೀಡಿದ್ದಾರೆ.
ಈ ಕುರಿತು ಅವರು ಮಾಧ್ಯಮಗಳಿಗೆ ಪ್ರಕಟಣೆ ನೀಡಿದ್ದಾರೆ.
ಮಾ.16ರಂದು ಸಂಜೆ 4 ಗಂಟೆಗೆ ಗಂಗಾವತಿ ನಗರಸಭೆಯ ಸಭಾಂಗಣದಲ್ಲಿ ನಗರಸಭೆಯ 2026-27ನೇ ಸಾಲಿನ ಆಯ-ವ್ಯಯ ಮುಂಗಡ ಪತ್ರದ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿದೆ.
ಗಂಗಾವತಿ ನಗರದ ಅಭಿವೃದ್ಧಿ, ತೆರಿಗೆ ಸಂಗ್ರಹ, ಕುಡಿಯುವ ನೀರು ಸೌಲಭ್ಯ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಒದಗಿಸಲು ಹಾಗೂ ಸೌಂದರೀಕರಣಕ್ಕೆ 2026-27ರಲ್ಲಿ ಕೈಗೊಳ್ಳಬೇಕಾದ ಕ್ರಮ ಕುರಿತು ನಡೆಯುವ ಆಯ ವ್ಯಯದ ಕುರಿತು ಚರ್ಚಿಸಲು ಮತ್ತು ಬಜೆಟ್ ಮಂಡನೆಗೆ ತಮ್ಮಿಂದ ಸೂಕ್ತ ಲಸಹೆಗಳನ್ನು ಸ್ವೀಕರಿಸಲು ಈ ಬಜೆಟ್ ಪೂರ್ವಭಾವಿ ಸಭೆ ನಡೆಸಲಾಗುತ್ತಿದೆ.
ಸರ್ವರು ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಪೌರಾಯುಕ್ತರು ಕೊರಿದ್ದಾರೆ.
