ಜಿಲ್ಲಾ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ಜಿಲ್ಲಾಧಿಕಾರಿಗಲಿಗೆ ಮನವಿ
Appeal to the District Collector from the District All-round Development Struggle Committee
ಜಿಲ್ಲಾ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ಜಿಲ್ಲಾಧಿಕಾರಿಗಲಿಗೆ ಮನವಿ


ಗಂಗಾವತಿ: ದಿ, 6 ಶುಕ್ರವಾರ ನಗರಸಭೆಗೆ ಆಗಮಿಸಿದ ಜಿಲ್ಲಾಧಿಕಾರಿಗಳಾದ ಸುರೇಶ ಇಟ್ನಾಳ ಇವರನ್ನು ಕೊಪ್ಪಳ ಜಿಲ್ಲಾ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಭೇಟಿಯಾಗಿ ಗಂಗಾವತಿ ಸಿ ಟಿ ಮಾರ್ಕೆಟ್ ಪ್ರಾರಂಭ ಮಾಡಬೇಕು,ಆನೆಗುಂದಿ ಉತ್ಸವ ಆಚರಿಸಲು ಕ್ರಮ ಕೈಗೊಳ್ಳಬೇಕು ಹಾಗೂ ಉತ್ಸವದ ವೇದಿಕೆ ಸ್ಥಳ ಖಾಸಗಿಯವರದಾಗಿದ್ದು ಮುಂದಿನ ದಿನಗಳಲ್ಲಿ ಉತ್ಸವ ಆಚರಣೆಯನ್ನು ಮಾಡಲು ಸ್ಥಳದ ಅಭಾವವಾಗುತ್ತದೆ. ಖರೀದಿಸಿ ಭೂ ಸ್ವಾಧೀನ ಪ್ರಕ್ರಿಯೆ ನಡೆಸಬೇಕು ಎಂದು ಜಿಲ್ಲಾಧಿಕಾರಿಗಳನ್ನು ಮ್ಯಾಗಳಮನಿ ಒತ್ತಾಯಿಸಿದರು. ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಈ ತಿಂಗಳಲ್ಲಿ ಸಿ ಟಿ ಮಾರ್ಕೆಟ್ ಪ್ರಾರಂಭಿಸಲಾಗುವದು ಹಾಗೂ ಉತ್ಸವ ಆಚರಣೆ ಮಾಡಲು ಸಿದ್ಧತೆ ನಡೆಸುವಾದಾಗಿ ಭರವಸೆ ನೀಡಿದ್ದಾರೆOದು ಮ್ಯಾಗಳಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
