
Training program on the Pre-Conception and Pre-Natal Sex Determination Techniques and Methods Prohibition Act PCPNDT Act
ಗರ್ಭಧಾರಣೆಯ ಪೂರ್ವ ಮತ್ತು ಪ್ರಸವಪೂರ್ವ ಲಿಂಗ ಪತ್ತೆ ತಂತ್ರಗಳು ಮತ್ತು ವಿಧಾನಗಳ ನಿಷೇಧ ಕಾಯ್ದೆ ಪಿಸಿಪಿಎನ್‌ಡಿಟಿ ಕಾಯ್ದೆಯ ಕುರಿತು ತರಬೇತಿ ಕಾರ್ಯಕ್ರಮ
ಕೊಪ್ಪಳ: ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ವೈದ್ಯಕೀಯ ವಿಜ್ಞಾನಗಳ ಮತ್ತು ಬೋಧಕ ಸಂಸ್ಥೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶಿಶು ಅಭಿವೃದ್ಧಿ ಯೋಜನಾ ಕಾರ್ಯಾಲಯ ಕೊಪ್ಪಳ ಇವರೆಲ್ಲರ ಸಂಯುಕ್ತ ಆಶ್ರಯದಲ್ಲಿ
ಗರ್ಭಧಾರಣೆಯ ಪೂರ್ವ ಮತ್ತು ಪ್ರಸವಪೂರ್ವ ಲಿಂಗ ಪತ್ತೆ ತಂತ್ರಗಳು ಮತ್ತು ವಿಧಾನಗಳ ನಿಷೇಧ ಕಾಯ್ದೆ ಪಿಸಿಪಿಎನ್‌ಡಿಟಿ ಕಾಯ್ದೆಯ ಕುರಿತು ತರಬೇತಿ ಕಾರ್ಯಕ್ರಮವನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಶ್ರೀ ಮಾಹಾಂತೇಶ ದರಗದ ಗೌರವಾನ್ವಿತ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಕೊಪ್ಪಳರವರು ಕಾರ್ಯಕ್ರಮದ ಉದ್ಘಾಟನೆಯೊಂದಿಗೆ
ಪ್ರಸವಪೂರ್ವ ಲಿಂಗ ಪತ್ತೆ ತಂತ್ರಜ್ಞಾನಗಳ (ನಿಯಂತ್ರಣ ಮತ್ತು ದುರುಪಯೋಗ ತಡೆ) ಕಾಯ್ದೆ-1994 (PCPNDT Act) ಭಾರತದಲ್ಲಿ ಹೆಣ್ಣು ಭ್ರೂಣ ಹತ್ಯೆಯನ್ನು ತಡೆಯುವ ಮುಖ್ಯ ಕಾನೂನು. ಇದು ಗರ್ಭಧಾರಣೆಯ ಮುನ್ನ ಅಥವಾ ನಂತರದ ಲಿಂಗ ಪರೀಕ್ಷೆಯನ್ನು ಸಂಪೂರ್ಣವಾಗಿ ನಿಷೇಧಿಸುತ್ತದೆ. ಈ ಕಾಯ್ದೆಯು ಹೆಣ್ಣು ಮಕ್ಕಳ ಲಿಂಗ ಅನುಪಾತವನ್ನು ಸುಧಾರಿಸಲು ಮತ್ತು ಲಿಂಗ ತಾರತಮ್ಯವನ್ನು ಹೋಗಲಾಡಿಸಲು ಈ ಕಾಯ್ದೆಯನ್ನು ಅನುಷ್ಠಾನಗೊಳಿಸಲಾಗಿದೆ. ಮೂರು ವರ್ಷ ಜೈಲು ಶಿಕ್ಷೆ ಮತ್ರು ದಂಡ ಹಾಗೂ ಮರುಕಳಿಸುವ ಅಪರಾಧಕ್ಕೆ 5 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿಗಳವರೆಗೆ ದಂಡ ವಿಧಿಸಲಾಗುತ್ತದೆ ಹಾಗೂ ಇದಕ್ಕೆ ಸಂಬಂಧಿಸಿದ ಕುಟುಂಬಸ್ಥರ ವಿರುದ್ಧ ಕೂಡ ಕಾನೂನು ಕ್ರಮದ ಅಡಿಯಲ್ಲಿ ಶಿಕ್ಷಣಕ್ಕೆ ಒಳಪಡಿಸಲಾಗುತ್ತದೆಂದು ಇಂಥ ತಪ್ಪುಗಳು ಆಗದಂತೆ ಜಾಗೃತ ಮಾಹಿತಿಯ ನಾಮಫಲಕಗಳನ್ನು ಹಾಕುವುದರೊಂದಿಗೆ
ಜಾಗೃತಿ ಮೂಡಿಸಬೇಕೆಂದು ತಿಳಿಸಿದರು.

ಶ್ರೀ ನಟರಾಜ ಯೋಜನಾ ನಿರೂಪಣಾಧಿಕಾರಿಗಳು ಅನೋಮಲಿ ನ್ಯೂನ್ಯತೆಯ ಗರ್ಭಾವಸ್ಥೆಯ 18 ರಿಂದ 22 ನೇ ವಾರದ ನಡುವೆ ಭ್ರೂಣದ ಬೆಳವಣಿಗೆ ಮತ್ತು ರಚನೆಯನ್ನು ಪರೀಕ್ಷಿಸಲು ಈ ಸ್ಕ್ಯಾನ್ ಮಾಡಲಾಗುತ್ತದೆ. ಇದು ಮಗುವಿನ ಮೆದುಳು, ಹೃದಯ, ಬೆನ್ನೆಲುಬು ಮತ್ತು ಇತರ ಅಂಗಗಳಲ್ಲಿನ ಯಾವುದೇ ಅಸಹಜತೆಗಳನ್ನು ಪತ್ತೆಹಚ್ಚಲು ನಿರ್ಣಾಯಕವಾಗಿದೆಂದು ಪ್ರಕರಣಗಳ ನೈಜ ಸನ್ನಿವೇಶಗಳನ್ನು ತಿಳಿಸಿ ವೈದ್ಯಾಧಿಕಾರಿಗಳು ಸ್ವಯಂ ತಪ್ಪುಗಳ ಇಕ್ಕಟ್ಟಿಗೆ ಸಿಕ್ಕಿಬಿದ್ದು, ತಮ್ಮ ಜೀವನವನ್ನು ಅಂತ್ಯಗೊಳಿಸಿದ ನೈಜ ಸನ್ನಿವೇಶಗಳನ್ನು ಉದಾಹರಣೆಯೊಂದಿಗೆ ತಿಳಿಸಿದರು.
ಹೆಣ್ಣು ಮಕ್ಕಳು ಹುಟ್ಟುತ್ತಲೇ ಜನಿಟಿಕ್ಕಲಿ ಫಿಟ್ ಆಗಿರುತ್ತಾರೆಂದು ಮತ್ತು ಹಲವಾರು ಕೆಲಸಗಳನ್ನು ನಿಭಾಯಿಸುವ ಶಕ್ತಿಯನ್ನು ನಿರ್ವಹಣೆ ಮಾಡುವಲ್ಲಿ ಬಲಿಷ್ಠರಾಗಿರುತ್ತಾರೆಂದು ಪ್ರಕೃತಿಯು ಗಂಡು ಮತ್ತು ಹೆಣ್ಣುಗಳ ಹುಟ್ಟುವಿಕೆಯಲ್ಲಿ ನೈಜತೆಯನ್ನು ಸೃಷ್ಟಿಸುತ್ತದೆ. ಆದರೆ ನಾವುಗಳು ಸಾಮಾಜಿಕ ಮೌಲ್ಯಗಳಿಗೆ ಒತ್ತುಕೊಟ್ಟು ಹೆಣ್ಣು ಸಂತತಿಯ ಅವಹೇಳನಕಾರಿಯಾಗಿ ಮತ್ತು ಗಂಡು ಸಂತತಿಗೆ ಒತ್ತು ನೀಡುವುದರ ಮೂಲಕ ಪ್ರಚೋದನೆ ನೀಡುವಂತಹ ಮೂಡುತೆಗಳಿಗೆ ಕಡಿವಾಣ ಹಾಕಬೇಕಾಗಿದೆ ಎಂದು ಡಾಕ್ಟರ್ ಸುರೇಖಾ ಮುಖ್ಯ ವೈದ್ಯಧಿಕಾರಿಗಳು, ಪ್ರಸವ ಪೂರ್ವ ಪ್ರಸವ ವೈದ್ಯರ ತಜ್ಞ ವಿಭಾಗ, ಕಿಮ್ಸ್ ರವರು ಹೆಣ್ಣು ಮಕ್ಕಳು ನೈಜ್ಯವಾಗಿ ಉತ್ತಮವಾಗಿ ಬಲಿಷ್ಠರಾಗಿರುತ್ತಾರೆ ಎಂದು ತಿಳಿಸಿದರು. ನ್ಯೂ ಸೆಫ್ ಸಮನ್ವಯಾಧಿಕಾರಿಯಾದ ಹರೀಶ್ ಜೋಗಿ ಅವರು ಹೆಣ್ಣು ಮಕ್ಕಳ ಶಿಶು ಹತ್ಯವನ್ನು ತಡೆಗಟ್ಟುವಲ್ಲಿ ಮುಖ್ಯವಾಗಿ ಸಾವಿರ ಗಂಡು ಮಕ್ಕಳಿಗೆ ಹೆಣ್ಣು ಮಕ್ಕಳ ರೇಶೋ ಮುಂದುವರೆದ ಕೇರಳ ರಾಜ್ಯದಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚು ಇರುವುದನ್ನು ಕಾಣುತ್ತೇವೆ. ಆದರೆ ಇತರೆ ಕೆಲವು ರಾಜ್ಯಗಳಲ್ಲಿ ಹೆಣ್ಣು ಮಕ್ಕಳ ರೇಶೋ ತೀರ ವ್ಯತ್ಯಾಸವಾಗಿದ್ದು
ಇದನ್ನು ತಡೆಗಟ್ಟುವಲ್ಲಿ ಹೆಣ್ಣು ಮಕ್ಕಳ ರಕ್ಷಣೆ ಸುರಕ್ಷತೆ ಭದ್ರತೆಗೆ ಹಾಗೂ ಅವರ ಸಬಲೀಕರಣಕ್ಕೆ ಸಮಾಜದ ವತಿಯಿಂದ ಎಲ್ಲರೂ ಬೆಂಬಲ ನೀಡಬೇಕೆಂದು ತಿಳಿಸಿದರು.
ಡಾಕ್ಟರ್ ರಾಜೇಶ್ ಪ್ರಾಧ್ಯಾಪಕರು ಕಿಂಗ್ಸ್ ರವರು ಮಾತನಾಡುತ್ತಾ ಹೆಣ್ಣು ಮಕ್ಕಳ ಸಂರಕ್ಷಣೆಗೆ ಒಂದಾಗಬೇಕು. ಮಕ್ಕಳ ರಕ್ಷಣೆಯಲ್ಲಿ ವಿರುದ್ಧ ಕ್ರಮವನ್ನು ಕೈಗೊಂಡಲ್ಲಿ ನಮ್ಮ ಕರ್ಮ ರಿಟರ್ನ್ಸ್ ಆಗುತ್ತದೆ ಎಂದು ಮಕ್ಕಳ ಪಾಪ ಕರ್ಮಗಳು ನಮ್ಮನ್ನು ಹಿಂತಿರುಗಿಸಿ ಹಿಂಬಾಲಿಸುತ್ತವೆ ಎಂದು ತಿಳಿಸಿದರು.
ಡಾಕ್ಟರ್ ಕೃಷ್ಣ ಓಂಕಾರ್ ಜಿಲ್ಲಾ ಶಸ್ತ್ರ ಚಿಕಿತ್ಸಕರು, ಹೆಣ್ಣು ಮಕ್ಕಳ ಸಂತತಿಯಿಇಲ್ಲದೇ ಹೋದರೆ ಮುಂದೆ ಮನುಷ್ಯ ಪ್ರಕೃತಿಯೇ ಇಲ್ಲದಂತಾಗುತ್ತದೆ. ಹಾಗೂ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆಯಾಗುವುದರಿಂದ ಲೈಂಗಿಕ ದೌರ್ಜನ್ಯ, ಮಕ್ಕಳ ಮೇಲೆ ದೌರ್ಜನ್ಯ ಶೋಷಣೆಗಳು ಹೆಚ್ಚುತ್ತವೆ, ಸಾಮಾಜಿಕ ಮೌಲ್ಯಗಳನ್ನು ಅಧೋಗತಿಗಿಳಿಸಿ ಸಂಧಿಗ್ಧ ಪರಿಸ್ಥಿತಿಯನ್ನು ಉಂಟುಮಾಡುತ್ತದೆಂದು ನಾವುಗಳು ಪ್ರಜ್ಞಾವಂತರಾಗಿ ಮಕ್ಕಳ ರಕ್ಷಣೆಗೆ ಬದ್ಧರಾಗಬೇಕೆಂದು ತಿಳಿಸಿದರು.
ಶ್ರೀ ಪರಶುರಾಮ್ ವೈ ಶೆಟೆಪ್ಪನವರ್ ಉಪನಿರ್ದೇಶಕರು ರವರು
ಹೆಣ್ಣು ಮಗುವಿನ ರಕ್ಷಣೆಗಾಗಿ ಸರ್ಕಾರವು ಬೇಟಿ ಬಚಾವೋ ಬೇಟಿ ಪಡಾವೋ ನಂತಹ ಯೋಜನೆಗಳನ್ನು ಜಾರಿಗೆ ತಂದಿದೆಂದು ತಿಳಿಸಿದರು.
ಸದರಿ ಕಾರ್ಯಕ್ರಮದದಲ್ಲಿ ಅಂಗನವಾಡಿ ಶಿಕ್ಷಕರು , ಮೇಲ್ವಿಚಾರಕರು , ಕಿಮ್ಸ್ ವೈದ್ಯಕೀಯ ಕಾಲೇಜಿನ ಕಲಿಕಾರ್ಥಿಗಳು, ನರ್ಸಿಂಗ್ ಆಫೀಸರ್ ರವರು ಭಾಗವಹಿಸಿರುತ್ತಾರೆ. ಕಾರ್ಯಕ್ರಮದ ನಿರೂಪಣೆ ಶ್ರೀಮತಿ ಯಮುನಾ ಸಖಿ ಘಟಕ ಆಡಳಿತಾಧಿಕಾರಿಗಳು, ಪ್ರಾರ್ಥನೆ ಮಹಾಲಕ್ಷ್ಮಿ ಎಸ್.ಎನ್.ಸಿ.ಯು ವಿಭಾಗ, ಸಖಿ ಒನ್ ಸ್ಟಾಪ್ ಸೆಂಟರ್ ಸ್ವಾಗತ ಶರಣಪ್ಪ ಶಿಶು ಅಭಿವೃದ್ಧಿ ಯೋಜನಾ ಕಾರ್ಯಾಲಯ, ವಂದನಾರ್ಪಣೆ ಶ್ರೀಮತಿ ಫಾತಿಮಾ ಮಹಿಳಾ ಸಬಲೀಕರಣ ಘಟಕ ಕೊಪ್ಪಳ ರವರು ನೆರವೇರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.




