Breaking News

ಋಗ್ವೇದಿಗಳಿಗಾಗಿ ಉತ್ಸರ್ಜನೋಪಾಕರ್ಮ (ಯಜ್ಞೋಪವೀತ-ಧಾರಣ) ಹಾಗೂ ನೂತನೋಪಾಕರ್ಮ

Utsarjanopakarma (Yajnopaveeta-dharana) and Nutanopakarma for Rig Vedas

ಜಾಹೀರಾತು

ಗಂಗಾವತಿ: ನಗರದ ಶಂಕರಮಠದ ಶ್ರೀ ಭಾರತಿತೀರ್ಥ ಕಲ್ಯಾಣ ಮಂಟಪದಲ್ಲಿ ಋಗ್ವೇದಿಗಳಿಗಾಗಿ, ದಿನಾಂಕ ೨೯.೦೮.೨೦೨೩ ಮಂಗಳವಾರದAದು ಯಜ್ಞೋಪವಿತ್ರಧಾರಣ ಹಾಗೂ ನೂತನೋಪಕರ್ಮ ಮುಂಜಾನೆ: ೧೦.೦೦ ರಿಂದ ವೇದಮೂರ್ತಿ ಮಹೇಶ ಭಟ್ ಜೋಷಿ ಅವರ ನೇತೃತ್ವದಲ್ಲಿ ಶ್ರದ್ಧೆ ಭಕ್ತಿಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಉಪನಯನಗೊಂಡಿದ್ದ ನಾಲ್ಕು ವಿಪ್ರ ಸಮಾಜದ ಮಕ್ಕಳಿಗೆ ನೂತನ ಉಪಕರ್ಮವನ್ನು, ವೇದಮೂರ್ತಿ ಮಹೇಶ್ ಭಟ್ ತಂಡದವರು ನೆರೆವೇರಿಸಿದರು. ಬಳಿಕ ಋಗ್ವೇದಿ, ವಿಪ್ರರು, ಪವಿತ್ರ ಯಜ್ಞೋಪವಿತ ಧಾರಣೆಯನ್ನು ಮಾಡಿದರು.
ಸಮಾರಂಭವನ್ನು ಉದ್ದೇಶಿಸಿ ಧರ್ಮದರ್ಶಿ ನಾರಾಯಣರಾವ್ ವೈದ್ಯ ಮಾತನಾಡಿ, ಶೃಂಗೇರಿ ಜಗದ್ಗುರುಗಳ ಅನುಗ್ರಹದ ಮೇರೆಗೆ ಶ್ರೀಮಠದಲ್ಲಿ ಪವಿತ್ರ ಜನಿವಾರ ಧಾರಣೆ ಹಾಗೂ ಉಪಕರ್ಮ ಹೋಮವನ್ನು ನಡೆಸಲಾಗಿದ್ದು, ಮುಂದಿನ ವರ್ಷ ಋಗ್ವೇದಿಗಳಿಗೆ ಯಾವುದೇ ಭೇದ ಭಾವವಿಲ್ಲದೇ, ಜನಿವಾರ ಧಾರಣೆಗೆ ಮುಕ್ತ ಅವಕಾಶವನ್ನು ಕಲ್ಪಿಸಲಾಗುವುದು, ವೇದಶಾಸ್ತç ಅಧ್ಯಯನಕ್ಕೆ ಅತ್ಯಂತ ಮಹತ್ವದ ಆಗಿದೆ. ಜಗದ್ಗುರು ಶ್ರೀ ಶಂಕರಾಚಾರ್ಯರು ೫ನೇಯ ವರ್ಷಕ್ಕೆ ಉಪನಯವನ್ನು ಮಾಡಿಕೊಂಡು ವೇದ ಅಧ್ಯಯನ ಜೊತೆಗೆ, ಅಪಾರವಾದ ಪಾಂಡಿತ್ಯವನ್ನು ಗಳಿಸಿ, ಸನಾತನ ಧರ್ಮ ರಕ್ಷಣೆಯ ಜೊತೆಗೆ, ಅವರ ತತ್ವ ಸಿದ್ಧಾಂತಗಳು ಜಗತ್ಪçಸಿದ್ಧಿಯಾಗಿವೆ ಎಂದು ಹೇಳಿದರು.
ವೇದಮೂರ್ತಿ ಮಹೇಶ್ ಭಟ್ ಜೋಷಿ ಮಾತನಾಡಿ, ವಿದ್ಯಾರ್ಥಿ ಜೀವನಕ್ಕೆ ಶಿಕ್ಷಣ ಎಷ್ಟು ಮುಖ್ಯವೋ ಅಷ್ಟೇ ಅತ್ಯಂತ ಪವಿತ್ರವಾದ ಉಪನಯದ ಜನಿವಾರ ಧಾರಣೆ ಅವಶ್ಯವಾಗಿದೆ. ಇದರಿಂದ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲು ಅರ್ಹತೆಯನ್ನು ಹೊಂದಿರುತ್ತಾರೆ. ನಾಲ್ಕು ಪುರುಷಾರ್ಥಗಳಲ್ಲಿ ಪ್ರಥಮವಾಗಿದ್ದೆ ಬ್ರಹ್ಮಚರ್ಯ, ಇದು ಉಪನಯದ ಮೂಲಕ ಆರಂಭಗೊಳ್ಳುತ್ತದೆ ಎಂದು ಆಚರಣೆ ಮಹತ್ವ ಕುರಿತು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಹ್ಲಾದರಾವ್ ಮಾಸ್ಟರ್, ಶಂಕ್ರಣ್ಣ ದತ್ತಾತ್ರೇಯ ಹೊಸಳ್ಳಿ, ವೇಣುಗೋಪಾಲ್, ಬಾಲಕೃಷ್ಣ ದೇಸಾಯಿ, ಕರಮೂಡಿ ಭೀಮ್‌ಭಟ್, ನಾಗರಾಜ ಶಾಮರಾವ್, ಅನಿಲ್, ಕೆ.ವಿ ಜೋಶಿ, ಸಮಾಜ ಬಾಂಧವರು ಮಹಿಳೆಯರು, ಪುರುಷರು, ಯುವಕರು ಪಾಲ್ಗೊಂಡಿದ್ದರು.

About Mallikarjun

Check Also

screenshot 2025 08 30 17 28 56 12 e307a3f9df9f380ebaf106e1dc980bb6.jpg

ಹೆಚ್.ಐ.ವಿ. ಏಡ್ಸ್: ಬೈಕ್ ರ‍್ಯಾಲಿ ಮೂಲಕ ಜಾಗೃತಿ

HIV AIDS: Awareness through bike rally ಕೊಪ್ಪಳ ಆಗಸ್ಟ್ 30 (ಕರ್ನಾಟಕ ವಾರ್ತೆ): ಹೆಚ್.ಐ.ವಿ. ಏಡ್ಸ್ ಕುರಿತು ಬೈಕ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.