Breaking News

ಕಾರ್ಖಾನೆ ವಿರುದ್ಧದ ಹೋರಾಟ ಜನಪ್ರತಿನಿಧಿ ಭೇಟಿಬಲ್ಡೋಟಾ ಬೇಕಿಲ್ಲ; ಯಾವುದೇ ಕಾರಣಕ್ಕೂ ಹೋರಾಟ ನಿಲ್ಲಲ್ಲ : ಹಿಟ್ನಾಳ ಸ್ಪಷ್ಟನೆ

Protest against factory meets people’s representative No need for Baldota; Protest will not stop for any reason: Hitna clarifies

ಜಾಹೀರಾತು

ಕೊಪ್ಪಳ: ನಗರದ ಪಕ್ಕದಲ್ಲಿಯೇ ಬಲ್ಡೋಟಾದಂತಹ ಬೃಹತ್ ಕಾರ್ಖಾನೆ ಮತ್ತು ಹಲವು ಹಳ್ಳಿಗಳಿಗೆ ಹೊಂದಿಕೊAಡಿರುವ ಕಿರ್ಲೋಸ್ಕರ್ ಸೇರಿ ವಿವಿಧ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ಜಿಲ್ಲೆಯ ಜನಪ್ರತಿನಿಧಿಗಳ ಭೇಟಿ ಮಾಡುವ ಸಭೆಯಲ್ಲಿ ಸಂಸದ ಕೆ. ರಾಜಶೇಖರ ಹಿಟ್ನಾಳ ಮಾತನಾಡಿದರು.
ನಗರದ ಪ್ರವಾಸಿ ಮಂದಿರ (ಐಬಿ) ದಲ್ಲಿ ಜಂಟಿ ಕ್ರಿಯಾ ವೇದಿಕೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ಹೋರಾಟಗಾರರಿಗೆ ಸ್ಪಷ್ಟ ಸಂದೇಶ ನೀಡಿ, ಯಾವುದೇ ಕಾರಣಕ್ಕೂ ಎಂತಹ ಬೆಲೆ ತೆತ್ತಾದರೂ ಸರಿ ನಮಗೆ ಕಾರ್ಖಾನೆ ಬೇಡ, ಹೋರಾಟದ ಪರವಾಗಿ ಇದ್ದು, ಶಾಸಕರು ಸೇರಿದಂತೆ ಎಲ್ಲರ ಬೆಂಬಲ ಪಡೆದು ಅಗತ್ಯಬಿದ್ದರೆ ಇನ್ನೊಂದು ಬೃಹತ್ ಹೋರಾಟ ಮಾಡೋಣ, ಅದಕ್ಕೂ ಮೊದಲ ಸರಕಾರದ ಸಚಿವರನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಂಡು ಹೇಳುತ್ತೇವೆ ಎಂದರು.
ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಮತ್ತು ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ಮತ್ತು ಇಲ್ಲಿನ ವಕೀಲರು ಹಲವು ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ, ಅವರೆಲ್ಲರಿಗೂ ನ್ಯಾಯ ಸಿಗುತ್ತದೆ, ನಾವು ಇಲ್ಲಿ ನೆಮ್ಮದಿಯ ಜೀವನ ನಡೆಸಬೇಕಿದೆ, ಉಳಿದ ಹಲವು ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮ ಆಯುಷ್ಯವೇ ಕಮ್ಮಿ ಆಗಿದೆ, ಹಲವು ರೋಗಗಳು ಬಂದಿವೆ ಎಂದು ಆತಂಕ ವ್ಯಕ್ತಪಡಿಸಿದ ಅವರು ಕಾರ್ಖಾನೆ ವಿರುದ್ಧ ಗಟ್ಟಿಯಾಗಿ ನಿಂತಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಈ ವೇಳೆ ಮಾತನಾಡಿದ ಹಲವು ಮುಖಂಡರು, ಕಾರ್ಖಾನೆಗಳು ಅನೇಕ ನಿಯಮವನ್ನು ಮೀರಿ ಲಕ್ಷಾಂತರ ಜನರಿಗೆ ಸಮಸ್ಯೆ ಮಾಡಿರುವದನ್ನು ಮತ್ತು ಅದರಿಂದ ಆಗಿರುವ ಪರಿಸರದ ನಾಶ, ವಾಯು ಶುದ್ಧತೆಯ ನಾಶ, ನೀರಿನ ಸಮಸ್ಯೆ, ಅಂತರ್ಜಲ ಸಮಸ್ಯೆ, ಆರೋಗ್ಯ ಸಮಸ್ಯೆ ಪರಿಗಣಿಸಿ ಸರಕಾರ ವಿಸ್ತರಣೆ ಅನುಮತಿ ವಾಪಸ್ ಪಡೆಯಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಮತ್ತು ಪರಿಸರ ಹಿತರಕ್ಷಣಾ ವೇದಿಕೆಯ ಪ್ರಮುಖರುಗಳಾದ ಪ್ರೊ. ಅಲ್ಲಮಪ್ರಭು ಬೆಟ್ಟದೂರು, ಬಸವರಾಜ ಶೀಲವಂತರ, ಕೆ. ಬಿ. ಗೋನಾಳ, ಮಹಾಂತೇಶ ಕೊತಬಾಳ, ಸೋಮರಡ್ಡಿ ಅಳವಂಡಿ, ಮಂಜುನಾಥ ಜಿ. ಗೊಂಡಬಾಳ, ರಾಜು ಬಾಕಳೆ, ಡಿ. ಎಂ. ಬಡಿಗೇರ, ಶರಣು ಗಡ್ಡಿ, ಡಾ. ಮಂಜುನಾಥ ಸಜ್ಜನ್, ಶರಣು ಶೆಟ್ಟರ್, ಮುದುಕಪ್ಪ ಹೊಸಮನಿ, ಶರಣು ಪಾಟೀಲ್, ಎಸ್. ಎ. ಗಫಾರ್, ಗವಿಸಿದ್ದಪ್ಪ ಹಲಗಿ, ಹನುಮಂತಪ್ಪ ಗೊಂದಿ, ಮಲ್ಲಪ್ಪ ಬಂಡಿ, ಶಾಂತಪ್ಪ ಅಂಗಡಿ ಇತರರು ಇದ್ದರು. ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರ ಭೇಟಿ ಜೂನ್ ೨೩, ೨೪ ರಂದು ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಅವರ ಭೇಟಿ ನಿಗದಿ ಮಾಡಲಾಗಿದೆ.

About Mallikarjun

Check Also

ಹಿರೇಬೆಣಕಲ್ ಸೇತುವೆ ಗ್ರಾಮದ ಸಿದ್ಧಗಂಗಾಶ್ರೀ ಬೆಲ್ಲದಚಹಾಅಂಗಡಿಯ ನಾಮಫಲಕತುಮಕೂರು ಸಿದ್ಧಗಂಗಾ ಮಠದ ಶ್ರೀಗಳಿಂದ ಬಿಡುಗಡೆ.

The nameplate of Siddagangasree Jella Tea Shop in Hirebenakal Bridge Village was released by the …

Leave a Reply

Your email address will not be published. Required fields are marked *