Breaking News

ಶ್ರೀ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ, ರೆಡ್ಡಿ ಸಮಾಜಕ್ಕೆ ತನ್ನದೇ ಆದ ಕೊಡುಗೆ ಇದೆ : ಶಾಸಕ ಕೆ.ನೇಮಿರಾಜ ನಾಯ್ಕ ,

Sri Mahasadhvi Hemareddy Mallamma has her own contribution to the Reddy society: MLA K. Nemiraja Nayak,

ಜಾಹೀರಾತು

ಕೊಟ್ಟೂರು : ಮಹಾಸಾದ್ವಿ ಹೇಮರೆಡ್ಡಿಮಲ್ಲಮ್ಮರ ೫೯೮ನೇ ಜಯಂತಿಯ ಅಂಗವಾಗಿ ಪಟ್ಟಣದ ಮರಿ ಕೊಟ್ಟೂರೆಶ್ವರ ದೇವಸ್ಥಾನದಿಂದ ಮೆರವಣಿಗೆ ಹೊರಟು ಎಪಿಎಂಸಿ ರಸ್ತೆಯ ಮೂಲಕ ಬಸ್‌ನಿಲ್ದಾಣ ಮುಂಬಾಗ, ತೇರು ಬೀದಿ, ರೇಣುಕ ರಸ್ತೆ, ಉಜ್ಜಿನಿ ಸರ್ಕಲ್ ಮೂಲಕ ಗಚ್ಚಿನ ಮಠ ತಲುಪಿತು, ಮೆರವಣಗೆಯಲ್ಲಿ ನಂದಿಕೋಲು, ಸಮಾಳ, ವಾದ್ಯಗಳ ನೀನಾದದೊಂದಿಗೆ ಬೆರಗು ಮೂಡಿತು.


ಗಚ್ಚಿನಮಠದ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ಶ್ರೀ ಮಹಾಸಾಧ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮರ ೫೯೮ನೇ ಜಯಂತಿ ಅಂಗವಾಗಿ ಹಗರಿಬೊಮ್ಮನಹಳ್ಳಿ ಶಾಸಕ ಕೆ.ನೇಮಿರಾಜ ನಾಯ್ಕ , ಪರಮಪೂಜ್ಯರಾದ ಶ್ರೀ ವೇಮನಾನಂದ, ಹಾಗೂ ಯೋಗಿರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ, ಬುಧವಾರ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿದರು.
ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀಯುತ ಕೆ.ನೇಮಿರಾಜ ನಾಯ್ಕ್ ಇವರು ಮಾತನಾಡಿ ರೆಡ್ಡಿ ಸಮಾಜ ತನ್ನದೇ ಆದಂತ ಸಮಾಜ ಸೇವೆ ಹಾಗೂ ಒಳ್ಳೆಯ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದೆ ಮುಂದಿನ ದಿನಗಳಲ್ಲಿ ಈ ಸಮಾಜದ ಅಭಿವೃದ್ಧಿಗೋಸ್ಕರ ನಾನು ಸಹ ತಮ್ಮಲ್ಲಿ ಒಬ್ಬರಾಗಿ ಅಭಿವೃದ್ಧಿಗೆ ಕೈಜೋಡಿಸುವುದಾಗಿ ಭರವಸೆ ನೀಡಿದರು.
ಶ್ರೀ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮರ ೫೯೮ನೇ ಜಯಂತಿಯ ಅಂಗವಾಗಿ ಅತ್ಯಂತ ವಿಜೃಂಭಣೆಯಿAದ ಆಚರಿಸಲಾಯಿತು ಮತ್ತು ರೆಡ್ಡಿ ಸಮಾಜಕ್ಕೆ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡಿದ್ದಾರೆ ಎಂದು ಗೂಳಿ ಮಲ್ಲಿಕಾರ್ಜುನ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಎಂ ಎಂ ಜೆ ಹರ್ಷವರ್ಧನ್, ಕೊಟ್ಟೂರು ತಾಲೂಕು ರೆಡ್ಡಿ ಸಮಾಜದ ಅಧ್ಯಕ್ಷರಾದ ಭರಮರೆಡ್ಡಿ ಅಂಬಳಿ, ಹಾಗು ಮುಖಂಡರುಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.