ಒಳ ಮೀಸಲಾತಿ ಸಮೀಕ್ಷೆಗೆ ಜಾತಿ ರಹಿತ ಬೌಧರಿಗೆ ದತ್ತಾಂಶ ಹಾಗೂ ಪ್ರತ್ಯೇಕ ಧರ್ಮದ ಕಾಲಂ ರಚಿಸಬೇಕು:ಭಾರತೀಯ ಬೌಧ ಮಹಾಸಭಾ ಯುವ ಘಟಕ ಒತ್ತಾಯ

Data for non-caste Buddhists and a separate religion column should be created for the internal reservation survey: Bharatiya Buddhist Mahasabha Youth Unit demands

ಜಾಹೀರಾತು

ಬೆಂಗಳೂರು; ರಾಜ್ಯದಲ್ಲಿ ಮೇ 5 ರಿಂದ 17 ರವರೆಗೆ ಒಳ ಮೀಸಲಾತಿ ವರ್ಗಿಕರಣ ಮಾಡುತ್ತಿದ್ದು, ರಾಜ್ಯ ಸರ್ಕಾರ ಒಳಮೀಸಲಾತಿ ಸಮೀಕ್ಷೆ ದತ್ತಾಂಶದಲ್ಲಿ ಬೌದ್ಧ ಧರ್ಮದ ಕಾಲಂ ಸೃಷ್ಟಿಸಿಲ್ಲ ಹಾಗೂ ಜಾತಿ ರಹಿತ ಬೌಧರೆಂದು ಸೇರಿಸಲು ಯಾವುದೇ ದತ್ತಾಂಶ ಇಲ್ಲ. ಕೂಡಲೇ ಈ ಸಮಸ್ಯೆ ಬಗೆಹರಿಸಬೇಕು ಎಂದು ಭಾರತೀಯ ಬೌಧ ಮಹಾಸಭಾ ಯುವ ಘಟಕದ ರಾಜ್ಯಾಧ್ಯಕ್ಷ ದರ್ಶನ ಬಿ ಸೋಮಶೇಖರ್ ಒತ್ತಾಯಿಸಿದ್ದಾರೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಅಂಬೇಡ್ಕರ್ ಬುದ್ಧರ ಅನುಯಾಯಿಗಳಾಗಿದ್ದು, ನಾವೆಲ್ಲರೂ ಬೌದ್ಧ ಧರ್ಮವನ್ನು ಪರಿಪಾಲನೆ ಮಾಡುತ್ತಿದ್ದೇವೆ. ಜಾತಿ ರಹಿತವಾದ ಬೌದ್ಧ ಧರ್ಮವನ್ನು ಅನುಸರಿಸುತ್ತಿದ್ದೇವೆ. ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗಳು, ಸಚಿವ ಡಾ. ಹೆಚ್. ಸಿ ಮಹಾದೇವಪ್ಪ ಅವರಿಗೆ ಈಗಾಗಲೇ ಮನವಿ ಮಾಡಿದ್ದರೂ ಸಹ ಬೌದ್ಧ ಧರ್ಮದ ಕಾಲಂ ಹಾಗೂ ಜಾತಿ ರಹಿತ ಬೌಧರೆಂದು ಸೇರಿಸಲು ದತ್ತಾಂಶದಲ್ಲಿ ಹೊಸ ವಿಭಾಗ ರಚಿಸಿಲ್ಲ. ಈಗಾಗಲೇ ಒಳಮೀಸಲಾತಿಯ ಜನಗಣತಿಯ ಸಮೀಕ್ಷೆಯಲ್ಲಿ ಜಾತಿ ಹೆಸರನ್ನು ಬರಸದೇ ಇರುವವರನ್ನು ಬೌದ್ದರೆಂದು ಪರಿಗಣಿಸಬೇಕು ಹಾಗೂ ಬೌದ್ಧರಾದವರಿಗೆ ದತ್ತಾಂಶದಲ್ಲಿ ಸರಳಿಕರಣದ ದಾಖಲೆಗಳನ್ನು ಪಡೆಯುವಂತೆ ಕ್ರಮಕೈಗೊಳ್ಳಬೇಕೆಂದು ಹೇಳಿದ್ದಾರೆ.

ಬೌದ್ಧರಾದವರಿಗೆ ದತ್ತಾಂಶದಲ್ಲಿ ಸರಳಿಕರಣದ ದಾಖಲೆಗಳನ್ನು ಪಡೆಯಲು ಕ್ರಮ ತೆಗೆದುಕೊಳ್ಳಬೇಕು. ಇನ್ನು ಮುಂದೆ ನಮೂದಿಸಲ್ಪಟ್ಟ ಜಾತಿ ರಹಿತ ಬೌಧ ಧರ್ಮೀಯರಿಗೆ ಜನಸಂಖ್ಯೆ ಗಾತ್ರಕ್ಕೆ ಅನುಗುಣವಾಗಿ ಅವರ ಸಾಂವಿಧಾನಿಕ ಹಕ್ಕನ್ನು ನೀಡಬೇಕು.

ಒಳಮೀಸಲಾತಿ ಸಮೀಕ್ಷೆಯಲ್ಲಿ ಡ್ರಾವಿಡ, ಆದಿ ದ್ರಾವಿಡ ಸೇರಿದಂತೆ ಒಳ ಪಂಗಡಗಳಿಗೆ ಪ್ರತ್ಯೇಕ ಕಾಲಂ ಇದೆ. ರಾಜ್ಯದಾದ್ಯಂತ ಅಂಬೇಡ್ಕರ್ ಮತ್ತು ಬೌಧರ ಅನುಯಾಯಿಗಳನ್ನು ಸಂಘಟಿಸುವ ಜವಾಬ್ದಾರಿಯನ್ನು ಭಾರತೀಯ ಬೌದ್ಧ ಮಹಾಸಭಾ ಯುವ ಘಟಕ ಹೊಂದಿದೆ. ಡಾ.ಬಿ.ಆರ್. ಅಂಬೇಢ್ಕರ್ ಅವರ ಆಶಯಗಳನ್ನು ಪೂರೈಸಲು ನಮ್ಮ ಸಂಘಟನೆಗೆ ಪೂರಕವಾಗಿ ಒಳ ಮೀಸಲಾತಿಯಲ್ಲಿ ನಮಗೆ ಪೂರಕ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.