Dr. Ambedkar Jayanti celebrated by Gangavati Rashtriya Dal

ಗಂಗಾವತಿ: ಇಂದು ನಗರದ ರಾಷ್ಟ್ರೀಯ ಬಸವದಳದ ಬಸವ ಮಂಟಪ ದಲ್ಲಿ ಪ್ರತಿವಾರ ರವಿವಾರ ದಂದು ಸಾಮೋಹಿಕ ಪ್ರಾಥನೆ ಜರುಗುತ್ತದೆ.ಪ್ರಾಥನೆ ಮುಗಿದನಂತರ .ಡಾ.ಬೀಮ್ ರಾವ್ ಅಂಬೇಡ್ಕರ್ ಅವರ 118ನೇ ಜನ್ಮ ದನದ ಅಂಗವಾಗಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೋಜೆ ಸಲ್ಲಿಸಲಾಯಿತು.

ದೀನದಲಿತರ, ತುಳಿತಕ್ಕೊಳಗಾದವರ, ಸುಧಾರಣೆಗಾಗಿ ಶ್ರಮಿಸಿದ ಹರಿಕಾರ ಭಾರತೀಯ ಸಂವಿಧಾನದ ನಿಜವಾದ ನಾಯಕ ಡಾ. ಭೀಮ್ ರಾವ್ ಅಂಬೇಡ್ಕರ್ ಭಾರತದ ಶ್ರೇಷ್ಠ ರಾಜಕೀಯ ನಾಯಕರಲ್ಲಿ ಒಬ್ಬರಾಗಿದ್ದರು,ತಮ್ಮ ಹೃದಯದಾಳದಿಂದ ರಾಷ್ಟ್ರಕ್ಕೆ ಸಲ್ಲಿಸಲು ಸಿದ್ಧರಿದ್ದ ದೂರದೃಷ್ಟಿಯನ್ನು ಹೊಂದಿದ್ದ ವ್ಯಕ್ತಿ. ಅವರ ರಾಜಕೀಯ ಜೀವನದುದ್ದಕ್ಕೂ, ಅವರು ಸಮಾಜದ ಕಲ್ಯಾಣಕ್ಕಾಗಿ ಶ್ರಮಿಸಿದ ಶ್ರೇಷ್ಠ ವ್ಯಕ್ತಿ ಯಾಗಿದ್ದರು. ಅವರ ಚಿಂತನೆಗಳು ಮನುಕುಲಕ್ಕೆ ಪ್ರೇರಣೆಯಾಗಿವೆ ಇವರು ವಿಶ್ವಕಂಡ ಶ್ರೇಷ್ಠ ವ್ಯೆಕ್ತಿ ಯಾಗಿದ್ದಾರೆ. ಇಂಥವರನ್ನು ರಾಷ್ಟ್ರೀಯ ಬಸವದಳದ ಶರಣ, ,ಶರಣಿಯರು ನೆನಪಿಸಿಕೊಂಡರು.
ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷರಾದ ಹೆಚ್ ಮಲ್ಲಿಕಾರ್ಜುನ, ಅಧ್ಯಕ್ಷರಾದ ದಿಲೀಪ್ ಕುಮಾರ್ ವಂದಾಲ, ಉಪಾಧ್ಯಕ್ಷರಾದ ಕೆ ವೀರೇಶಪ್ಪ, ಚನ್ನಬಸಮ್ಮಕಂಪ್ಲಿ, ರೇಣಮ್ಮ ಗೌಡ್ರು, ಹೆಚ್ ಕವಿತಾ, ಅಕ್ಕಮ್ಮ ಹನಮಸಾಗರ, ಮಲ್ಲಿಕಾರ್ಜುನ ಅರಳಹಳ್ಳಿ, ಹನುಮಂತ ಐವಳೆ,ನಾಗರಾಜ್ ಶ್ಯಾವಿ, ಸಿದ್ದಣ್ಣ ಸಿದ್ದಾಪುರ, ವಿನಯ ಕುಮಾರ್ ಅಂಗಡಿ ಚಿನ್ಮಯ ಪ್ರಸಾದ ಭಾವಿಕಟ್ಟಿ , ವೀರೇಶ್ ಅಸರೆಡ್ಡಿ ಹಾಗೂ ಪ್ರಥಮ ಬಾರಿಗೆ ಪ್ರಾರ್ಥನೆಗೆ ಆಗಮಿಸಿದ ಲೋಹಿತ್ ಕುಮಾರ್ ಅವರಿಗೆ ಬಸವ ರಕ್ಷೆ ನೀಡಿ ಗೌರವಿಸಲಾಯಿತು
.