Breaking News

ದೇಶದ ವಿವಿಧ ಭಾಗದ ನಾಲ್ಕುರೈತಸಂಘಟನೆಗಳು ವಿಲೀನ, “AIUKS” ಹೊಸ ಸಂಘಟನೆ ಸ್ಥಾಪನೆ..

Merger of four farmer organizations from different parts of the country, establishment of new organization “AIUKS”.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು




ಮೋದಿ ಆಡಳಿತದ ನವ ಉದಾರವಾದಿ ನೀತಿಗಳಿಂದಾಗಿ ನಮ್ಮ ದೇಶದ ಕೃಷಿ ಕ್ಷೇತ್ರ ತೀವ್ರ ಬಿಕ್ಕಟ್ಟಿಗೆ ಸಿಲುಕಿದೆ. ಈ ಕಾರಣದಿಂದ ರೈತರು ಅತಂತ್ರ ಮತ್ತು ಅಪಾಯಕಾರಿ ಪರಿಸ್ಥಿತಿ ಗೆ ಸಿಲುಕಿದ್ದಾರೆ. ಅಂದರೆ ಕೃಷಿಯಲ್ಲಿ ನಿರಂತರ ನಷ್ಟ ಅನುಭವಿಸುತ್ತ, ಸಾಯಲು ಆಗದೆ ಬದುಕಲು ಸಾಧ್ಯವಾಗದೆ ಅತಂತ್ರದಲ್ಲಿದ್ದಾರೆ.ಇಂತಹ ಪರಸ್ಥಿತಿಯ ಮಧ್ಯ ಕಾರ್ಪೋರೇಟ ಪ್ಯಾಸಿಸ್ಟ್ ಶಕ್ತಿಗಳು ಕೋಮು ಧ್ರುವೀಕರಣದ ಮೂಲಕ ರೈತರು ಮತ್ತು ಶ್ರಮಜೀವಿಗಳನ್ನು ವಿಭಜಿಸುವ ಪ್ರಯತ್ನಗಳು ನಡೆಸಿವೆ.ನಾಗರಿಕ ಸ್ವಾತಂತ್ರ್ಯ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳನ್ನು ನಾಶಪಡಿಸುವ ವ್ಯವಸ್ಥಿತ ಪ್ರಯತ್ನಗಳು ಮುಂದುವರೆದಿವೆ.ಮೋದಿ ಸರ್ಕಾರವನ್ನು ನಿಯಂತ್ರಿಸುವ ಅದಾನಿ,ಅಂಬಾನಿ ಇತರೆ ಕಾರ್ಪೊರೇಟ್ ದೈತ್ಯರು, ಆರ್‌ಎಸ್‌ಎಸ್-ಬಿಜೆಪಿ ಕೋಮುವಾದಿ ಫ್ಯಾಸಿಸ್ಟ್ ಶಕ್ತಿಗಳ ಮೂಲಕ ನಾಗರಿಕ ಸಮಾಜದ ಮೇಲೆ ದಾಳಿ ನಡೆಸಿವೆ.ಈ ಎಲ್ಲಾ ಅಪಾಯಕಾರಿ ಪ್ರಯತ್ನಗಳನ್ನು ವಿರೋಧಿಸಲು ಮತ್ತು ಸೋಲಿಸಲು, ದೇಶದ ಕ್ರಾಂತಿಕಾರಿಗಳ ರೈತ ಸಂಘಟನೆಗಳನ್ನು ಒಂದುಗೂಡಿಸುವುದು ನಮ್ಮ ಮುಂದಿರುವ ಅತ್ಯಂತ ಮಹತ್ವದ ಅನಿವಾರ್ಯ ಕಾರ್ಯವಾಗಿದೆ.
ಈ ಹಿನ್ನೆಲೆಯಲ್ಲಿ 19-20 ಡಿಸೆಂಬರ್ 2024 ರಂದು; ನಾಲ್ಕು ಕ್ರಾಂತಿಕಾರಿ ರೈತ ಸಂಘಟನೆಗಳ ಏಕತಾ ಸಭೆ ಜರುಗಿತು.
1)ಅಖಿಲ ಭಾರತ ಪ್ರಗತಿಪರ ಕಿಸಾನ್ ಸಭಾ (AIPKS) 2)ಸಾದುವೋ ಅಸ್ಸಾಂ ಖೆಟಿಯೋಕ್ ಸಂತ (Saduo Assam khetiok) 3)ತ್ರಿಪುರಾ ಕೃಷಕ್ ಮುಕ್ತಿ ಪರಿಷತ್ ಮತ್ತು 4)ಅಖಿಲ ಭಾರತ ಕ್ರಾಂತಿಕಾರಿ ಕಿಸಾನ್ ಸಭಾ (AIKKS) ಭಾಂಗರ ಪ್ರದೇಶದ ಮಾಚಿಭಂಗಾ ಗ್ರಾಮದಲ್ಲಿ ಸಭೆ ನಡೆಯಿತು – ಈ ಭಾಂಗರ್ ಪ್ರದೇಶದ ಮಾಚಿ ಬಂಗ್ ಗ್ರಾಮವು, ಕಾರ್ಪೋರೇಟ್ ಕಂಪನಿಗಳ ವಿರುದ್ದ ಶಕ್ತಿಯುತ ಕ್ರಾಂತಿಕಾರಿ ಚಳುವಳಿ ನಡೆಸಿದ ಪ್ರಬಲ ಕೇಂದ್ರಗಳಲ್ಲಿ ಒಂದಾಗಿದೆ. 2217-18 ರಲ್ಲಿ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರ, ಕೇಂದ್ರ ಸರ್ಕಾರ ಪವರ್ ಗ್ರಿಡ್ ಸ್ಪಾಪನೆಯ ಹೆಸರಿನಲ್ಲಿ ಸಾವಿರಾರು ಎಕರೆ ಫಲವತ್ತದ ಭೂಮಿಯನ್ನು ಕಾರ್ಪೋರೇಟ್ ಕಂಪನಿಗಳಿಗೆ ಕೊಡಲು ಮುಂದಾಗಿದ್ದವು.ಸತತ ಎರಡು ವರ್ಷಗಳವರಿಗೆ ಚಳುವಳಿ ನಡೆಸಿದ ರೈತರು ಜಯ ಸಾಧಿಸಿದರು. ಈ ಚಳುವಳಿಯಲ್ಲಿ ಪೋಲಿಸರ್ ಗೋಲಿಬಾರ ದಾಳಿಯಿಂದ ಮೂರು ಜನ ರೈತರು ಪ್ರಾಣ ಕಳೆದುಕೊಂಡಿದ್ದರು. ಈ ಐತಿಹಾಸಿಕ ಹಿನ್ನೆಲೆಯ ಸ್ಥಳದಲ್ಲಿ, ನಾಲ್ಕು ಸಂಘಟನೆಗಳ ಏಕತಾ ಸಭೆ ಜರುಗಿತು.
ಈ ಸಭೆಯಲ್ಲಿ ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಒಡಿಶಾ, ಜಾರ್ಖಂಡ್, ಪಶ್ಚಿಮ ಬಂಗಾಳ, ಅಸ್ಸಾಂ, ಪಂಜಾಬ್, ಹರಿಯಾಣ, ದೆಹಲಿ,ತ್ರಿಪುರಾ,ಉತ್ತರ ಪ್ರದೇಶ, ಮಹಾರಾಷ್ಟ್ರ, ಕೇರಳ,ತಮಿಳುನಾಡಿನ ಪ್ರಮುಖ ಮಖಂಡರು, ರೈತ ಪ್ರತಿನಿಧಿಗಳು ಬಾಗವಹಿಸಿದ್ದರು. ಸಭೆ ಹೊಸ ಸಂಯುಕ್ತ ರೈತ ಸಂಘಟನೆಯನ್ನು ಅಂಗೀಕರಿಸಿತು. – ಅಖಿಲ ಭಾರತ ಯುನೈಟೆಡ್ ಕಿಸಾನ್ ಸಭಾ (AIUKS) ಸ್ಥಾಪಿಸಲಾಯಿತು. 21 ಸದಸ್ಯರ ಅಖಿಲ ಭಾರತ ಸಂಘಟನಾ ಸಮಿತಿಯನ್ನು ಮತ್ತು
ಒಡನಾಡಿಗಳಾದ ಕೆ ರಂಗಯ್ಯ (ತೆಲಂಗಾಣ) , ಬಿಮಲ್ (ದೆಹಲಿ) ಮತ್ತು ಕೃಷ್ಣ ಗೊಗೊಯ್ (ಅಸ್ಸಾಂ) ಮೂರು ಜನರನ್ನು ಸಂಘಟನಾ ಸಮಿತಿಗೆ ಸಂಚಾಲಕರನ್ನಾಗಿ ಆಯ್ಕೆ ಮಾಡಲಾಯಿತು. ಸಂಸ್ಥಾಪಕ AIUKS ಸಂಘಟನೆಯ ನೇತ್ರತ್ವದಲ್ಲಿ ಜನವರಿ 9- 2025 ರಂದು ಅಖಿಲ ಭಾರತ ಹಕ್ಕೊತ್ತಾಯಗಳ ದಿನವನ್ನಾಗಿ ಆಚರಿಸಲು ಸಭೆ ಘೋಷಿಸಿತು. ರಾಷ್ಟ್ರೀಯ ಮತ್ತು ಪ್ರಾಂತಿಯ ಭಾಗದ ರೈತರ, ಶ್ರಮಜೀವಿಗಳ, ದಲಿತರ,ಆದಿವಾಸಿಗಳ, ಮಹಿಳೆಯರ ತಕ್ಷಣದ ಸಾಮಾಜಿಕ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಹೋರಾಡುವುದು.2020 ರಲ್ಲಿ ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆದಿದ್ದ ಕೇಂದ್ರ ಸರ್ಕಾರ,ಇತ್ತೀಚೆಗೆ ನಡೆದ ಚಳಿಗಾಲದ ಅಧಿವೇಶನದಲ್ಲಿ ಕೃಷಿ ಮಾರುಕಟ್ಟೆ ಕಾಯ್ದೆಗೆ ತಿದ್ದುಪಡಿ ತರುವುದರೊಂದಿಗೆ, ಹಿಂಪಡೆದ ಮೂರು ಕಾಯ್ದಗಳನ್ನು ಪುನ್ ಜಾರಿಗೊಳಿಸಲು ಮುಂದಾಗಿದೆ.
ಆದಾನಿ ಕಂಪನಿ 2500 ಸಾವಿರ ಕೋಟಿ ಲಂಚದ ಪ್ರಕರಣವನ್ನು ಮೋದಿ ಸರ್ಕಾರ ಮುಚ್ಚಿ ಹಾಕಿದೆ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅಂಬೇಡ್ಕರವರಿಗೆ ಅವಮಾನ ಮಾಡುವುದರೊಂದಿಗೆ ಮನುವಾದದ ರಾಜಕೀಯವನ್ನು ಬಯಲುಗೋಳಿಸಿಕೊಂಡಿದ್ದಾರೆ.
AIUKS ಸಂಘಟನೆಯು, ತಕ್ಷಣದ ಬೇಡಿಕೆಗಳು ಅಷ್ಟೇ ಅಲ್ಲ ಸಾಮ್ರಾಜ್ಯಶಾಹಿ ಮತ್ತು ದೊಡ್ಡ ಬಂಡವಾಳಿಗರ ಲೂಟಿಯನ್ನು ಮತ್ತು ಆರ್ಥಿಕ ದಾಳಿಯನ್ನು ಸಂಪೂರ್ಣ ನಿರ್ಮೂಲನೆ ಮಾಡಲು ದೃಢ ಸಂಕಲ್ಪ ಮಾಡಿದೆ.ದೇಶದ ಸಮಾನ ಮನಸ್ಕ ರೈತ ಸಂಘಟನೆಗಳೊಂದಿಗೆ ವಿಶೇಷವಾಗಿ ಸಂಯುಕ್ತ ಕಿಸಾನ ಮೋರ್ಚಾ SKM ನ ಜಂಟಿ ಹೋರಾಟಗಳಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುತ್ತದೆ.ಕ್ರಾಂತಿಕಾರಿ ಚಳುವಳಿಯೊಂದಿಗೆ ದೇಶದ ಇತರೆ ರೈತ ಸಂಘಟನೆಗಳನ್ನು ಒಂದುಗೂಡಿಸು ವ ಕಾರ್ಯ ಪ್ರಮುಖ ಆದ್ಯತೆಯಾಗಿದೆ.
ಮೇಲಿನ ವಿಷಯವನ್ನು

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *