Breaking News

ಅತ್ತ್ಯುತ್ತಮ ಗೆಲುವು ಸಾಧಿಸಿದ ಕೆಪಿಎಸ್ ಪತ್ರಕರ್ತರ ತಂಡ

The best winner was the KPS team of journalist

ಜಾಹೀರಾತು
IMG 20241223 WA0017 Scaled

ವಿಜಯಮಾಲೆ ಧರಿಸಿದ (ಕೆಪಿಎಸ್) ಕರ್ನಾಟಕ ಪತ್ರಕರ್ತರ ಸಂಘದ ಪತ್ರಕರ್ತರ ತಂಡ”

ಕೊಟ್ಟೂರಿನಲ್ಲಿ  ಹಳೆ  ಕೊಟ್ಟೂರು ಸೇವಾ ಟ್ರಸ್ಟ್ (ರಿ) ಕೊಟ್ಟೂರು ಅವರಿಂದ ಆಯೋಜಿಸಿದ ಸ್ಟಂಪರ್ ಬಾಲ್  ಟೂರ್ನಮೆಂಟ ಮೊದಲನೇ ಬಾರಿಗೆ ಸುಖಾಂತ್ಯ ಕಂಡಿತು.

ಕೊಟ್ಟೂರು : ಹಳೆ  ಕೊಟ್ಟೂರು ಸೇವಾ ಟ್ರಸ್ಟ್ (ರಿ) ಕೊಟ್ಟೂರು ವತಿಯಿಂದ ಆಯೋಜಿಸಿದ ಸ್ಟಂಪರ್ ಬಾಲ್ ಮೊದಲನೇ ಬಾರಿಗೆ  ಡಿಸೆಂಬರ್ 21 ,22 ಎರಡು ದಿನ ಆಯೋಜಿಸಲಾಗಿತ್ತು. ಒಟ್ಟು 10 ತಂಡಗಳು ಭಾಗವಹಿಸಿದ್ದವು. ಅಂತಿಮ ಪಂದ್ಯದ ಸೆಣಸಾಟಕ್ಕಾಗಿ ಲಾಯನ್ಸ್ ಕೊಟ್ಟೂರು  ಮತ್ತು  ಕೆಪಿಎಸ್ ಪತ್ರಕರ್ತರ ತಂಡ ಸೆಮಿಫೈನಲ್‌ನಲ್ಲಿ ಹಣಾಹಣಿಯಾಗಿ  ಕೆಪಿಎಸ್ ಪತ್ರಕರ್ತರ ತಂಡ  ಫೈನಲ್‌ಗೆ ಲಗ್ಗೆಯಿಟ್ಟಿತು. ನಂತರ
ಹಳೆ ಕೊಟ್ಟೂರು ಮತ್ತು ಗೇಮ್ ಚೆಜರ್ ತಂಡ
ಸೆಮಿಫೈನಲ್‌ನಲ್ಲಿ ರೋಚಕದ ಆಟ ನಡೆಯುತು.
ಭಾನುವಾರ ಮಧ್ಯಾಹ್ನ ಕೆಪಿಎಸ್ ಪತ್ರಕರ್ತರ ತಂಡ ಮತ್ತು ಗೇಮ್  ಚೆಜರ್ ಫೈನಲ್ ಆಟವನ್ನು ನಡೆದವು.

ಪ್ರಥಮ ಬಹುಮಾನ ಆಕರ್ಷಕ ಟೋಪಿ 20,001/
ಎನ್ ಹೇಮಣ್ಣ ಅಲಬೂರು ಅವರಿಂದ ನೀಡಲಾಯಿತು.ಮತ್ತು ದ್ವಿತೀಯ ಬಹುಮಾನ ಆಕರ್ಷಕ ಟ್ರೋಫಿ 10001/ ಬಹುಮಾನವನ್ನು ನಿಡಿ ಎಂ ಎಂ ಜೆ ಮಂಜುನಾಥ ಮಾತನಾಡಿ ಕ್ರೀಡೆ ಜೀವನದಲ್ಲಿ ಬಹಳ ಮುಖ್ಯ. ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ದೈಹಿಕ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಬಹುದು ಎಂದರು

ಫೈನಲ್ ಪಂದ್ಯಾವಳಿಯಲ್ಲಿ ಎನ್ ಹೇಮಣ್ಣ ಅಲಬೂರು ಅವರು ಬ್ಯಾಟಿಂಗ್ ನಡೆಸಿ ಕ್ರೀಡಾಪಟುಗಳಿಗೆ ಉರಿ ತುಂಬಿಸಿದರು. ನಾನು ಮೊದಲಿನಿಂದಲೂ ಕ್ರಿಕೆಟ್  ಕ್ರೀಡಾಪಟು ಕ್ರೀಡೆಯಲ್ಲಿ ಆಸಕ್ತಿ  ಹೆಚ್ಚು ,ಎಲ್ಲಾ ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಿ  ಮುಂದಿನ ದಿನಗಳಲ್ಲಿ ಕ್ರಿಕೆಟ್ ಆಟದಲ್ಲಿ ಭಾಗಿಯಾಗಿರುತ್ತೇನೆ.ಎಂದರು

ಟಾಸ್ ಗೆದ್ದ ಗೇಮ್ ಚೆಜರ್ ತಂಡ ಮೊದಲು   ಬ್ಯಾಟಿಂಗ್ ಆಯ್ದುಕೊಂಡಿತು ನಿಗದಿತ 10 ಓವರ್‌ಗಳಲ್ಲಿ 8 ವಿಕಟ್‌ಗಳ ನಷ್ಟಕ್ಕೆ 82 ರನ್ ಸೇರಿಸಿದರು ಮರು ಉತ್ತರವಾಗಿ ಕೆಪಿಎಸ್ ಪತ್ರಕರ್ತರ ತಂಡ 4 ವಿಕಟ್‌ಗಳ ನಷ್ಟ ಅನುಭವಿಸಿ  9 ಓವರ್ 4 ಬಾಲ್ ಗೆ 87 ರನ್ ಗಳಿಸಿ ವಿಜಯಮಾಲೆ ಧರಿಸಿದರು

ಸರಣಿ ಶ್ರೇಷ್ಠ ಟ್ರೂಫೀ ಕೆಪಿಎಸ್ ಪತ್ರಕರ್ತರ ತಂಡದ ಆಟಗಾರ  ಸುವೇಭ್ ವಲಿ ಕೆ ಅವರಿಗೆ ,ಉತ್ತಮ ಬಾಲರ್ ಗೇಮ್ ಚೇಂಜರ್ ತಂಡದ ಭರತ್ ಅವರು ಪಡೆದುಕೊಂಡರು, ಉತ್ತಮ ಬ್ಯಾಟ್ಸ್ಮನ್ ಕೆಪಿಎಸ್ ಪತ್ರಕರ್ತರು ತಂಡದ ಆಟಗಾರ  ಮರ್ಧನ್ ಅಲಿ, ಉತ್ತಮ ಫೀಲ್ಡರ್ ಹಳೆ ಕೊಟ್ಟೂರು ತಂಡದ ರಾಜು, ನಂತರ ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಚಾಂದ್ ಸಾಬ್  ಅವರಿಗೆ ಟ್ರೂಫೀ  ನಿಡಲಾಯಿತು.

ಅಂತಿಮ ಹಣಾಹಣಿಯಲ್ಲಿ ರೋಚಕವಾಗಿತ್ತು. ಅಂತಿಮವಾಗಿ  ಕೆಪಿಎಸ್ ಪತ್ರಕರ್ತರ ತಂಡ   ಪಂದ್ಯವನ್ನು ಗೆಲ್ಲುವುದರ ಮೂಲಕ ವಿಜಯದ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿತು.

ಕ್ರೀಡಾಂಗಣದಲ್ಲಿ ಕಿಕ್ಕಿರಿದ ಜನರಿಗೆ ರಸದೌತಣ ನೀಡಿದರು. ರನ್ನರ್ ಅಪ್ ಗೇಮ್ ಚೆಜರ್ ತಂಡ, ಫೈನಲ್‌ನಲ್ಲಿ ಕೆಪಿಎಸ್ ಪತ್ರಕರ್ತರ ತಂಡ ಗೆಲುವನ್ನು ಸಾಧಿಸಿದರು

ಈ ಸಂದರ್ಭದಲ್ಲಿ,ಕಾಮಿಟ್ರಿಯನ್ನು ಕಬ್ಬಡ್ಡಿ ಕಿರಣ್, ಕಾರ್ತಿಕ್, ರಾಜು ಅನ್ವರ್  ಉತ್ತಮ ತೀರ್ಪುಗಾರರಾಗಿದ್ದರು
ಹಳೆ ಕೊಟ್ಟೂರು ಸಂಸ್ಥಾಪಕರು ವಿಜಯ ಕುಮಾರ್ ಹಟ್ಟಿ,ಕೃಷಿ ಉತ್ಪನ್ನ ಮಾರುಕಟ್ಟೆ ಸದಸ್ಯರಾದ ಶಿರಿಬಿ ಕೊಟ್ರೇಶ್, ಕರವೇ ಅಧ್ಯಕ್ಷ ಎಂ ಶ್ರೀನಿವಾಸ್, ಗೌಸ್, ಪರುಶುರಾಮ ಎಸ್, ತಗ್ಗಿನಕೇರಿ ಕೊಟ್ರೇಶ್, ಎಸ್ ಪ್ರಕಾಶ್, ಇನ್ನು ಅನೇಕ ಕ್ರೀಡಾಪಟುಗಳು ಇದ್ದರು

About Mallikarjun

Check Also

screenshot 2025 10 15 21 38 17 03 6012fa4d4ddec268fc5c7112cbb265e7.jpg

ಸಂಘಟಕಿ ಜ್ಯೋತಿ ಗೊಂಡಬಾಳ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ

Organizer Jyoti Gondbal is the District Women's Congress President. ಕೊಪ್ಪಳ: ಜಿಲ್ಲೆಯ ಆಡಳಿತರೂಢ ಕಾಂಗ್ರೆಸ್ ಪಕ್ಷದ ಮಹಿಳಾ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.