Hanumamala Dissolution Work District Officers, GPM CEO visit, verification inspection
ಭಕ್ತರಿಗೆ ಯಾವ ತೊಂದರೆಯಾಗದಂತೆ ಕ್ರಮವಹಿಸಲು ಸೂಚನೆ
ಅಂಜನಾದ್ರಿ ಬೆಟ್ಟ ಏರಿ ಪರಿಶೀಲಿಸಿದ ಡಿಸಿ, ಸಿಇಓ
ಗಂಗಾವತಿ : ಅಂಜನಾದ್ರಿ ಬೆಟ್ಟದಲ್ಲಿ ಡಿ.12, 13ರಂದು ನಡೆಯಲಿರುವ ಹನುಮಮಾಲಾ ವಿಸರ್ಜನೆಗೆ ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಿದ್ದತೆ ನಡೆಸಿದ್ದು, ಬುಧವಾರ ಸಂಜೆ ಜಿಲ್ಲಾಧಿಕಾರಿಗಳಾದ ಮಾನ್ಯ ನಲೀನ್ ಅತುಲ್, ಜಿ.ಪಂ ಸಿಇಓ ಮಾನ್ಯ ರಾಹುಲ್ ರತ್ನಂ ಪಾಂಡೆಯ ಅವರು ಭೇಟಿ ನೀಡಿ ಪರಿಶೀಲಿಸಿದರು.
ನಂತರ ಉಪವಿಭಾಗದ ಅಧಿಕಾರಿಗಳು,
ದೇವಸ್ಥಾನದ ಪ್ರಭಾರ ಕಾರ್ಯ ನಿವಾರ್ಹಕ ಅಧಿಕಾರಿಗಳಿಂದ ಲಾಡು, ತೀರ್ಥ ಪ್ರಸಾದ, ಅಡುಗೆ ತಯಾರಿ ಸಿದ್ದತೆ, ತರಕಾರಿ, ದವಸ-ಧ್ಯಾನ್ಯ, ಪಾರ್ಕಿಂಗ್, ವಿದ್ಯುತ್ ಅಲಂಕಾರ, ಪೊಲೀಸ್ ಬಂದೊಬಸ್ತ್, ಸ್ನಾನ ಘಟ್ಟ, ಅನೌನ್ಸ್ ಮೆಂಟ್, ಸ್ವಚ್ಛತಾ ಕಾರ್ಯ, ಕುಡಿಯುವ ನೀರಿನ ವ್ಯವಸ್ಥೆ ಸೇರಿ ಅಗತ್ಯ ಸಿದ್ದತೆಗೆ ಬಗ್ಗೆ ಮಾಹಿತಿ ಪಡೆದರು.
ನಂತರ ಮಾತನಾಡಿ, ಎರಡು ದಿನಗಳ ಕಾಲ ನಡೆಯುವ ಹನುಮಮಾಲಾ ವಿಸರ್ಜನೆ ಕಾರ್ಯಕ್ರಮದಲ್ಲಿ ಭಕ್ತರಿಗೆ ಯಾವ ತೊಂದರೆಯು ಆಗಬಾರದು. ಹಾಗೇ ಅಂಜನಾದ್ರಿ ಬೆಟ್ಟದ ಕೆಳಬದಿ, ಮಧ್ಯೆ, ಹಿಂಬದಿ ಸೇರಿ ಅಗತ್ಯ ಸ್ಥಳಗಳಲ್ಲಿ ತುರ್ತು ಪ್ರಾಥಮಿಕ ಚಿಕಿತ್ಸಾ ಕೇಂದ್ರ ಜತೆಗೆ ಆ್ಯಂಬುಲೆನ್ಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಿದರು.
ಸಂಚಾರ ದಟ್ಟಣೆ ತಪ್ಪಿಸಲು ಪೊಲೀಸರು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳು ಸಿದ್ದತಾ ಕಾರ್ಯ ಪರಿಶೀಲಿಸಿದರು.
ವಿವಿಧ ಸಮಿತಿಯ ಜವಾಬ್ದಾರಿ ವಹಿಸಿಕೊಂಡ ಅಧಿಕಾರಿಗಳು ಅಚ್ಚುಕಟ್ಟಾಗಿ ತಮ್ಮ ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.
ಅಂಜನಾದ್ರಿ ಬೆಟ್ಟ ಏರಿದ ಡಿಸಿ, ಸಿಇಓ
ಹನುಮಮಾಲಾ ವಿಸರ್ಜನೆಗೆ ಸಿದ್ದತಾ ಕಾರ್ಯ ಬುಧವಾರ ಸಂಜೆ ಪರಿಶೀಲಿಸಿ, ನಂತರ ಜಿಲ್ಲಾಧಿಕಾರಿಗಳು, ಜಿ.ಪಂ. ಸಿಇಓ ಅವರು ಅಧಿಕಾರಿಗಳು ಅಗತ್ಯ ಮಾಹಿತಿ ಪಡೆದು, ನಂತರ ಅಂಜನಾದ್ರಿ ಬೆಟ್ಟ ಏರಿ ದೇವಸ್ತಾನ ಸತ್ತಲೂ ಸೌಲಭ್ಯಗಳ ಪರಿಶೀಲಿಸಿದರು.
ಸ್ವಚ್ಚತಾ ಕಾರ್ಯ : ಗಂಗಾವತಿ ತಾಲೂಕಿನ ವಿವಿಧ ಗ್ರಾಮ ಪಂಚಾಯತ್ ಸ್ವಚ್ಛತಾ ಹಾಗೂ ನೀರಗಂಟಿ ಸಿಬ್ಬಂದಿಗಳು, ಸ್ವಚ್ಛತಾ 8 ವಾಹಿನಿಗಳೊಂದಿಗೆ ನಿರಂತರ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿದ್ದಾರೆ. ವೇದ ಪಾಠಶಾಲೆ, ಅಂಜನಾದ್ರಿ ಬಳಿ ಪಾರ್ಕಿಂಗ್ ಸ್ಥಳ, ತಳವಾರ ಘಟ್ಟ, ಚಿಂತಾಮಣಿ ಸ್ನಾನಘಟ್ಟ, ಅಂಜನಾದ್ರಿ ಪ್ರದಕ್ಷಣಾ ಪಥ, ಪಂಪಾ ಸರೋವರ ಬಳಿ ಹಾಗೂ ಪಾರ್ಕಿಂಗ್ ಸ್ಥಳದಲ್ಲಿ ಸ್ವಚ್ಛತಾ ಕಾರ್ಯ ಸೇರಿ ತಿರುಮಲಾಪುರದಿಂದ- ಗಂಗಾವತಿ ನಗರದ ಸಾಯಿನಗರ ವರೆಗೆ ರಸ್ತೆಎ ಎರಡು ಬದಿ ಸ್ವಚ್ಛತಾ ಕಾರ್ಯ ಪ್ರತಿ ದಿನ ನಡೆಸುತ್ತಿದ್ದಾರೆ. ಅಂಜನಾದ್ರಿ ಸುತ್ತಲಿನ ಕುಡಿವ ನೀರಿನ ಟ್ಯಾಂಕ್ ಗಳ ಸ್ವಚ್ಚತೆ, ಮಾಲಾಧಾರಿಗಳಿಗೆ ಕುಡಿವ ನೀರಿನ ವ್ಯವಸ್ಥೆಯೂ ಕಲ್ಪಿಸಲಾಗಿದೆ.
ಈ ವೇಳೆ, ಉಪವಿಭಾಗದ ಅಧಿಕಾರಿಗಳು ಹಾಗೂ ಅಂಜನಾದ್ರಿ ಆಡಳಿತ ಅಧಿಕಾರಿಗಳಾದ ಶ್ರೀ ಕ್ಯಾಪ್ಟೆನ್ ಮಹೇಶ ಮಾಲಗಿತ್ತಿ, ಎಡಿಸಿ ಶ್ರೀ ಸಿದ್ದರಾಮೇಶ್ವರ, ಡಿಯುಡಿಸಿ ಶ್ರೀಮತಿ ರೇಷ್ಮಾ, ಅಂಜನಾದ್ರಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಪ್ರಕಾಶರಾವ್ ಎಂ ಎಚ್, ಗಂಗಾವತಿ ತಹಸೀಲ್ದಾರರಾದ ಶ್ರೀ ಯು.ನಾಗರಾಜ, ಕನಕಗಿರಿ ತಹಸೀಲ್ದಾರ್ ಶ್ರೀ ವಿಶ್ವನಾಥ ಮುರಡಿ, ನಗರಸಭೆ ಪೌರಾಯುಕ್ತರಾದ ವಿರುಪಾಕ್ಷಮೂರ್ತಿ,
ಎಇಇ ಶ್ರೀ ವಿಜಯ ಕುಮಾರ, ಅರಣ್ಯ ಇಲಾಖೆ ಅಧಿಕಾರಿಗಳಾದ ಶ್ರೀ ಸುಭಾಷ್ ಚಂದ್ರ, ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡ, ಶಿರಸ್ತೇದಾರ್ ಪ್ರಕಾಶ, ತಾಪಂ ಯೋಜನಾಧಿಕಾರಿಗಳಾದ ಗುರುಪ್ರಸಾದ, ಸಣಾಪುರ ಪಿಡಿಓ ವತ್ಸಲಾ, ಆನೆಗೊಂದಿ ಪಿಡಿಓ ಕೃಷ್ಣಪ್ಪ ಸೇರಿ ವಿವಿಧ ಇಲಾಖೆಯ ಸಿಬ್ಬಂದಿಗಳು ಇದ್ದರು.