
Woman dies after slipping into Bannikoppa lake


ವರದಿ : ಪಂಚಯ್ಯ ಹಿರೇಮಠ,,
ಕೊಪ್ಪಳ : ಕುಕನೂರು ಸಮೀಪದ ಬನ್ನಿಕೊಪ್ಪ ಗ್ರಾಮದ ದಿ.ಅಂದಯ್ಯ ಹಿರೇಮಠ ಇವರ ಪುತ್ರಿ ಗೌರಮ್ಮ (23) ಗಂಡ ಕಲ್ಲೇಶ ಗುರುಮಠ ಇವರು ನವರಾತ್ರಿ ಪೂಜೆಯ ಅಂಗವಾಗಿ ಬನ್ನಿಕೊಪ್ಪ ಗ್ರಾಮದ ಸಮೀಪದ ಕುಡಿಯುವ ನೀರಿನ ಕೆರೆಗೆ ಪೂಜೆಗೆ ಹೋಗಿದ್ದ ಸಂದರ್ಭದಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ.

ಅ.10ರ ಗುರುವಾರದಂದು ಬನ್ನಿಕೊಪ್ಪ ಗ್ರಾಮದ ಸಮೀಪವಿರುವ ಕುಡಿಯುವ ನೀರಿನ ಕೆರೆಗೆ ಬೆಳಗಿನ ಜಾವ 5.30 ರಿಂದ 6 ಗಂಟೆಯ ಒಳಗೆ ಪೂಜೆಗೆ ತೆರಳಿದ ವೇಳೆ ಕಾಲುಜಾರಿ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಈ ಮಹಿಳೆಯನ್ನು ಕುಕನೂರು ಸಮೀಪದ ಕಲ್ಲೂರ ಗ್ರಾಮದ ಗುರುಬಸಯ್ಯ ಗುರುಮಠ ಇವರ ಪುತ್ರ ಕಲ್ಲೇಶ ಇವರಿಗೆ ಮದುವೆ ಮಾಡಿ ಕೊಡಲಾಗಿತ್ತು. ದಂಪತಿಗಳಿಗೆ 4 ತಿಂಗಳು ಹಸೂಗೂಸು ಇದ್ದು ಈ ಪ್ರಕರಣದಿಂದ ಮಗು ತಬ್ಬಲಿಯಾಗಿದ್ದು ಸಾರ್ವಜನಿಕರು ಮಮ್ಮಲು ಮರುಗುವಂತಾಯಿತು. ಅಲ್ಲದೇ ಕುಟುಂಬದವರ ಆಕ್ರಂದನ ನೆರದವರ ಮನಕಲುಕುವಂತಿತ್ತು. ಈ ಘಟನೆ ಕುರಿತು ಕುಕನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
