Breaking News

ಜಿಲ್ಲಾ ಶ್ರೀ ವಾಲ್ಮೀಕಿ ನಾಯಕ ಸಂಘಗಳ ಒಕ್ಕೂಟದ ವತಿಯಿಂದ ಮನವಿ

Plea by District Shri Valmiki Nayak Federation of Associations

ಜಾಹೀರಾತು




ಮಾನ್ವಿ: ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಶನಿವಾರ ಜಿಲ್ಲಾ ಶ್ರೀ ವಾಲ್ಮೀಕಿ ನಾಯಕ ಸಂಘಗಳ ಒಕ್ಕೂಟದ ವತಿಯಿಂದ ನಾಯಕ ಜನಾಂಗದವರ ಮೇಲೆ ಹಲ್ಲೇ ಮಾಡಿದವರನ್ನು ಬಂದಿಸುವಂತೆ ಒತ್ತಾಯಿಸಿ ಗ್ರೇಡ್-೨ ತಹಸೀಲ್ದಾರ್ ಅಬ್ದುಲ್ ವಾಹಿದ್ ರವರ ಮೂಲಕ ಮನವಿ ಸಲ್ಲಿಸಿ ಹೊಸಕಿಹಾಳ್ ಆತ್ಮನಾಂದಸ್ವಾಮಿ ಮನವಿ ಸಲ್ಲಿಸಿ ಮಾತನಾಡಿ ತಾಲೂಕಿನ ಭೋಗವತಿ ಗ್ರಾಮದಲ್ಲಿನ ಶ್ರೀ ಆಂಜನೇಯ್ಯ ಸ್ವಾಮಿ ದೇವಸ್ಥಾನಕ್ಕೆ ಹೋಗಿದ್ದ ನಾಯಕ ಸಮುದಾಯದ ಎಸ್.ಶಿವರಾಜ ನಾಯಕ ಹಾಗೂ ಅವರ ಕುಟುಂಬ ಸದಸ್ಯರನ್ನು ಗ್ರಾಮದ ಮಾಜಿ ಜಿ.ಪಂ.ಅಧ್ಯಕ್ಷರಾದ ದೊಡ್ಡಬಸಪ್ಪಗೌಡ ಹಾಗೂ ಸಹಚರರು ಮಾರಕಸ್ತçಗಳಿಂದ ದಾಳಿಮಾಡಿ ಮಾರಣಾಂತಿಕವಾಗಿ ಗಾಯಗೊಳಿಸಿದ್ದು ಕೂಡಲೇ ಘಟನೆಯಲ್ಲಿ ಭಾಗವಹಿಸಿದ ಎಲ್ಲಾ ಅರೋಪಿಗಳನ್ನು ಬಂದಿಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪಟ್ಟಣದ ಬಸವ ವೃತ್ತದಿಂದ ತಹಸೀಲ್ದಾರ್ ಕಚೇರಿಯವರೆಗೂ ನೂರಾರು ಸಮಾಜದ ಮುಖಂಡರು ಮೆರವಣಿಗೆ ನಡೆಸಿ ಮನವಿ ಸಲ್ಲಿಸಿದರು.
ವಿವಿಧ ವಾಲ್ಮೀಕಿ ಸಮಾಜದ ಸಂಘಟನೆಗಳ ಮುಖಂಡರಾದ ಲಿಂಗಯ್ಯನಾಯಕ,ಮ್ಯಾಕಲ್ ಮೌನೇಶ ನಾಯಕ, ಅಂಬಣ್ಣನಾಯಕ, ರಂಗನಾಥ ನಾಯಕ, ವೀರೇಶನಾಯಕ,ವಿಜಯಕುಮಾರ,ರಮೇಶ,ರವಿನಾಯಕ, ರಾಯಪ್ಪನಾಯಕ, ಶಿವಶಂಕರ ,ಹನುಮಂತಪ್ಪನಾಯಕ,ಸಾಬಣ್ಣನಾಯಕ, ಸೇರಿದಂತೆ ಇನ್ನಿತರರು ಇದ್ದರು.

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.