Dr HN Sirigere benefits poor patients from health camps
![](https://i0.wp.com/kalyanasiri.in/wp-content/uploads/2024/09/IMG-20240911-WA0301.jpg?fit=300%2C135&ssl=1)
ಗಂಗಾವತಿ: ಪ್ರಸ್ತುತ ದಿನಗಳಲ್ಲಿ ವೈದ್ಯಕೀಯ ದುಂದು ವೆಚ್ಚದ ಮಧ್ಯೆ ಬಡ ರೋಗಿಗಳಿಗೆ ಚಿಕಿತ್ಸೆಗಳಿಗೆ ಸಾಕಷ್ಟು ಅನಾನುಕೂಲವಾಗುತ್ತಿದ್ದು ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬಡ ರೋಗಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ಜನತಾ ಸೇವಾ ಶಿಕ್ಷಣ ಸಂಸ್ಥೆ ನೇತೃತ್ವದಲ್ಲಿ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯ ಸಂಯೋಗ ದೊಂದಿಗೆ ಉಚಿತ ಹೃದಯ ರೋಗ ನರರೋಗ ಕ್ಯಾನ್ಸರ್ ಮೂತ್ರಪಿಂಡ ಹಾಗೂ ದೀರ್ಘ ಪ್ರಮಾಣದ ರೋಗಗಳಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಉದ್ದೇಶದಿಂದ ಆರೋಗ್ಯ ತಪಾಸಣಾ ಹಾಗೂ ಅರ್ಹತೆ ಹೊಂದಿದ ರೋಗಿಗಳಿಗೆ ಶಸ್ತ್ರಚಿಕಿಸ್ತ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ ಎಂದು ಹೇಳಿದರು ಅವರು ಬುಧವಾರದಂದು ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ ಇಂತಹ ಶಿಬಿರಗಳ ಸದುಪಯೋಗವನ್ನು ಸಮಾಜದಲ್ಲಿರುವ ರೋಗಿಗಳು ಪಡೆದು ಕೊಂಡು ಗುಣಮುಖರಾಗಬೇಕಾದ ಅವಶ್ಯಕತೆ ಇದೆ ಎಂದು ತಿಳಿಸಿದರು ಪ್ರಾಚಾರ್ಯ ಭೀಮಸೇನ್ ಆಚಾರ್ ಮಾತನಾಡಿ ಹೆಸರಾಂತ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯ ನುರಿತ ವೈದ್ಯರಿಂದ ಚಿಕಿತ್ಸೆಯನ್ನು ಕಲ್ಪಿಸಲಾಗುತ್ತಿದ್ದು ಆರ್ಥಿಕವಾಗಿ ಹಿಂದುಳಿದ ರೋಗಿಗಳು ತಮ್ಮ ಬಿಪಿಎಲ್ ಪಡಿತರ ಚೀಟಿ ಹಾಗೂ ಆಧಾರ ಕಾರ್ಡ್ ಸಮೇತ ನೊಂದಣಿ ಮಾಡಿಕೊಂಡು ತಪಾಸನಿಗೆ ಮುಂದಾದಲ್ಲಿ ದೀರ್ಘ ಪ್ರಮಾಣದ ಚಿಕಿತ್ಸೆಯ ಅವಶ್ಯಕತೆ ಇದ್ದಲ್ಲಿ ಉಚಿತವಾಗಿ ನಡೆಸಿಕೊಡಲಾಗುವುದೆಂದು ಮಾಹಿತಿ ನೀಡಿದರು ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ಗಂಗಾವತಿ ನಗರ ಸೇರಿದಂತೆ ತಾಲೂಕಿನ ವಿವಿಧ ಭಾಗಗಳಿಂದ 350ಕ್ಕೂ ಅಧಿಕ ರೋಗಿಗಳು ತಪಾಸನಿಗೆ ಒಳಪಟ್ಟರು ಈ ಸಂದರ್ಭದಲ್ಲಿ ಜನತಾ ಸೇವಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸೋಹನ್ ರಾಜ್ ಮೂಥ.ಉಪಾಧ್ಯಕ್ಷ ಹಸನ್ ಮಹ್ಮಮದ್ .ನಿದೇರ್ಶಕ ನರೇಶ್ ಮೂಥಾ.ರಾಘವೇಂದ್ರ ಶಿರೀಗೇರಿ ಸೇರಿದಂತೆ ಇನ್ನಿತರು ಉಪಸ್ಥಿತ ಇದ್ದರು.