Breaking News

ಮಸ್ಕಿ ಜಲಾಶಯದಿಂದ ಹಳ್ಳಗಳಿಗೆ 500 ಕ್ಯೂಸೆಕ್ ನೀರು ಬಿಡಲಾಗಿದೆ

500 cusecs of water has been released to the wells from Muski Reservoir

ಜಾಹೀರಾತು

ರಾಯಚೂರು :ಜಿಲ್ಲೆಯ ಮಸ್ಕಿ ತಾಲೂಕಿನ (ಮರಲದಿನ್ನಿ) ಮಸ್ಕಿ ನಾಲಾ ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಭಾನುವಾರದಿಂದ ಮಸ್ಕಿ ಹಿರೇಹಳ್ಳಕ್ಕೆ 500 ಕ್ಯೂಸೆಕ್‌ ನೀರು ಹರಿಸಲಾಗುತ್ತಿದೆ. ಕುಷ್ಟಗಿ, ಗಜೇಂದ್ರಗಡ ಭಾಗದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ನಾಗಲಾಪುರ ಹಳ್ಳಗಳಿಂದ ಮಸ್ಕಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಎಂಎನ್‌ಪಿ ಜಲಾಶಯದ ಎಂಜಿನಿಯರ್ ದಾವೂದ್ ಮಾತನಾಡಿ, ಜಲಾಶಯಕ್ಕೆ ಹೆಚ್ಚಿನ ನೀರು ಹರಿಯುತ್ತಿದೆ.

29 ಅಡಿ (0.5 ಟಿಎಂಸಿ) ಶೇಖರಣಾ ಸಾಮರ್ಥ್ಯವನ್ನು ಹೊಂದಿರುವ ಹಿರೇಹಳ್ಳ ಹಳ್ಳಗಳಿಗೆ ತಿರುಗಿಸಲಾಗುತ್ತಿದೆ. ಅಲ್ಲದೆ, ಜಲಾಶಯ ಭರ್ತಿಯಾಗಿದ್ದರಿಂದ ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಈ ಬಾರಿ ಬೆಳೆಗೆ ಸಾಕಷ್ಟು ನೀರು ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಸ್ಕಿ ತಹಶೀಲ್ದಾರ್ ಮಲ್ಲಪ್ಪ ಕೆ.ಯರಗೋಳ್ ಮಾತನಾಡಿ, ಜಲಾನಯನ ಪ್ರದೇಶದ ಗ್ರಾಮಸ್ಥರು ಹಳ್ಳಕ್ಕೆ ಇಳಿಯದೆ ಜಾನುವಾರುಗಳ ರಕ್ಷಣೆಗೆ ಮುಂದಾಗಬೇಕು ಎಂದು ಸೂಚನೆ ನೀಡಿದರು.

About Mallikarjun

Check Also

ಸೆ. 2 ಮತ್ತು 3 ರಂದು ವಿವಿಧ ಇಲಾಖೆಗಳ ಗ್ರೂಪ್ ಸಿ ಹುದ್ದೆಗಳ ಪರೀಕ್ಷೆ: ನಿಷೇಧಾಜ್ಞೆ ಜಾರಿ

Exams for Group C posts of various departments on Sept. 2 and 3: Prohibitory order …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.