Breaking News

ರಾಷ್ಟ್ರೀಯ ಹಬ್ಬ ಆಚರಿಸದ ರಾಷ್ಟ್ರೀಕೃತ ಹೊಳಲು ಎಸ್.ಬಿ.ಐ ಬ್ಯಾಂಕ್

Nationalized SBI Bank which does not celebrate national festival

ಜಾಹೀರಾತು
ಜಾಹೀರಾತು

ವ್ಯವಸ್ಥಾಪಕರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು

ಹೊಳಲು: ಸಾಮಾನ್ಯವಾಗಿ ರಾಷ್ಟ್ರೀಯ ಹಬ್ಬಗಳಂದು ಎಲ್ಲಾ ಸರಕಾರಿ ಕಛೇರಿಗಳ ಮುಂದೆ ರಾಷ್ಟ್ರ ಧ್ವಜಾರೋಹಣ ಮಾಡಿ ಪೂಜೆ ಪುನಸ್ಕಾರಗಳನ್ನು ಮಾಡಿ ಹುತಾತ್ಮರನ್ನು ನೆನೆದು ಸಿಹಿ ಹಂಚಿ ಹಬ್ಬವನ್ನು ಆಚರಿಸಿ ರಾಷ್ಟ ಗೌರವವನ್ನು ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ವಾಗಿದೆ. ಆದರೆ ಹಡಗಲಿ ತಾಲೂಕು ಹೊಳಲು ಗ್ರಾಮದ ಎಸ್.ಬಿ.ಐ ಬ್ಯಾಂಕ್‌ನಲ್ಲಿ ಧ್ವಜಾರೋಹಣ ಮಾಡದೆ ರಾಷ್ಟ್ರಕ್ಕೆ ಅಗೌರವ ಮಾಡಲಾಗಿದೆ.
ಬ್ಯಾಂಕ್ ಪ್ರಾರಂಭವಾಗಿ 26ವರ್ಷ ಕಳೆದರೂ ಇದೆ ಮೊದಲ ಬಾರಿ ಇಂತಹ ಅಚಾತುರ್ಯ ನಡೆದಿದೆ. ಬೆಳಗಿನಿಂದ ಬ್ಯಾಂಕ್‌ನಲ್ಲಿ ಯಾವುದೆ ಹಬ್ಬದ ಚಟುವಟಿಕೆ ನಡೆಯದೆ ಕಛೇರಿ ಮೇಲೆ ಧ್ವಜಹಾರದಿದ್ದಾಗ ಮದ್ಯಾಹ್ನ 12-30ರವೇಳೆಗೆ ಗ್ರಾಮಸ್ಥರು ಶಾಖಾ ವ್ಯವಸ್ಥಾಪಕರಾದ ನರಸಿಂಹ ನಾಯ್ಡು ಇವರಿಗೆ ಕರೆಮಾಡಿ ಏಕೆ ಹಬ್ಬ ಆಚರಣೆ ಮಾಡಿಲ್ಲ ಎಂದು ಕೇಳಿದರು. ಈವೇಳೆ ವ್ಯವಸ್ಥಾಪಕರು ಬ್ಯಾಂಕನಲ್ಲಿ ಸಿಬ್ಬಂದಿಯಿಲ್ಲ ಹಾಗಾಗಿ ಧ್ವಜಾರೋಹಣ ಮಾಡಿಲ್ಲ, ನಾನು ಬೆಳಿಗ್ಗೆ ಪೊಟೋಗಳಿಗೆ ಪೂಜೆ ಮಾಡಿ ಬಂದಿದ್ದೇನೆ ಎಂದು ಸುಳ್ಳು ಹೇಳಿದರು. ನಂತರ ಗ್ರಾಮಸ್ಥರ ಕರೆಯಮೇರೆಗೆ ಬ್ಯಾಂಕಿಗೆ ಬಂದ ವ್ಯವಸ್ಥಾಪಕರನ್ನು ಗ್ರಾಮಸ್ಥರು ಹಿಗ್ಗಾ ಮಗ್ಗಾ ತರಾಟೆಗೆ ತೆಗೆದುಕೊಂಡರು ಈವೇಳೆ ಬ್ಯಾಂಕನಲ್ಲಿ ಯಾವುದೆ ಪೂಜೆ ಮಾಡಿರುವುದು ಕಂಡುಬರಲಿಲ್ಲ. ಬ್ಯಾಂಕನಲ್ಲಿ ಹಬ್ಬದ ವಾತವರುಣ ಕಾಣದೆ ಸುತ್ತಲು ಕಸದ ತೊಟ್ಟಿಯಾಗಿ ನಿರ್ಮಾಣಗೊಂಡಿದ್ದರೂ ಕೂಡಾ ಸ್ವಚ್ಚಗೊಳಿಸದೆ ನಮಗೆ ಏಕೆ ಬೇಕು ರಾಷ್ಟ್ರೀಯ ಹಬ್ಬ ಎನ್ನುವ ವಾತಾವರಣ ಸೃಷ್ಠಿಯಾಗಿತ್ತು.
ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಮತ್ತಷ್ಟು ತರಾಟೆಗೆ ತೆಗೆದುಕೊಂಡರು. ಅಷ್ಟರಲ್ಲಿ ಸ್ಥಳಕ್ಕೆ ಎ.ಎಸ್.ಐ ಮಲ್ಲಿಕಾರ್ಜುನ ನಾಯ್ಕ್ ಹಾಗೂ ಪೇದೆ ಕೊಟ್ರೇಶ ಬಂದು ಏಕೆ ಧ್ವಜಾರೋಹಣ ಮಾಡಿಲ್ಲ ಇದು ತಪ್ಪು ಎಂದು ಹೇಳಿದರಲ್ಲದೆ ಗ್ರಾಮಸ್ಥರನ್ನು ಸಮಾದಾನ ಪಡಿಸಿ ಕಳಿಸಿದರು.
ಇದೊಂದು ರಾಷ್ಟ್ರೀಕೃತ ಬ್ಯಾಂಕ್ ಆಗಿದ್ದರೂ ಕೂಡಾ ರಾಷ್ಟ್ರಕ್ಕೆ ಅಪಮಾನ ಮಾಡಿರುವ ವ್ಯವಸ್ಥಾಪಕರ ಮೇಲೆ ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ವರದಿ:
ಹೆಚ್.ಸುಭಾಸಚಂದ್ರ
ಸಾಹಿತಿ ಹಾಗೂ ಪತ್ರಕರ್ತರು ಹೊಳಲು.

About Mallikarjun

Check Also

ಬಿಜೆಪಿಯವರು ನಾಲಿಗೆಯ ಮೇಲೆ ಹಿಡಿತವಿಟ್ಟುಮಾತನಾಡುವುದನ್ನುಕಲಿಯಬೇಕಿದೆ : ಸಂಗಮೇಶ ಗುತ್ತಿ,,,

BJP needs to learn to hold its tongue: Sangamesh Gutti ವರದಿ : ಪಂಚಯ್ಯ ಹಿರೇಮಠ.ಕೊಪ್ಪಳ : …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.