Children of Little Hearts School stood first in the taluk level competitions organized by Bharat Vikas Parishad
ಗಂಗಾವತಿ :ಭಾರತ್ ವಿಕಾಸ ಪರಿಷತ್ ರವರು ಶಾಲಾ ಮಕ್ಕಳಿಗಾಗಿ ಆಯೋಜಿಸಿದ್ದ ತಾಲೂಕು ಮಟ್ಟದ ಸ್ಪರ್ಧೆಗಳಲ್ಲಿ ಲಿಟಲ್ ಹಾರ್ಟ್ಸ್ ಶಾಲೆಯ ಮಕ್ಕಳು ಉತ್ತಮ ಪ್ರದರ್ಶನ ನೀಡಿ ವಿವಿಧ ಸ್ಪರ್ಧೆಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಚಿತ್ರಕಲೆ ಸ್ಪರ್ಧೆಯ ಪ್ರೌಢಶಾಲಾ ವಿಭಾಗದಲ್ಲಿ ವಿದ್ಯಾರ್ಥಿಗಳಾದ ಕುಮಾರಿ ತಯ್ಯಬಾ ಪ್ರಥಮ ಸ್ಥಾನ, ಕುಮಾರಿ ವೀಣಾ ದ್ವಿತೀಯ ಸ್ಥಾನ ಪಡೆದು, ಹಾಗೂ ಪ್ರಾಥಮಿಕ ವಿಭಾಗದಲ್ಲಿ ಕುಮಾರಿ ಸ್ಪೂರ್ತಿ ಕೆ ತೃತೀಯ ಸ್ಥಾನ ಪಡೆದಿದ್ದಾರೆ. ಮತ್ತು ಸಮಾಧಾನಕರ ಬಹುಮಾನವಾಗಿ ಸುಮಾರು ೫೦ ವಿದ್ಯಾರ್ಥಿ/ನಿಯರಿಗೆ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಿದರು. ಹಾಗೂ ೧೮ ವರ್ಷ ಮೇಲ್ಪಟ್ಟ ಮುಕ್ತ ಚಿತ್ರಕಲಾ ಸ್ಪರ್ಧೆಯಲ್ಲಿ ಲಿಟಲ್ ಹಾರ್ಟ್ಸ್ ಶಾಲೆಯ ಆಡಳಿತ ಮಂಡಳಿಯ ಸದಸ್ಯರಾದ ಶ್ರೀಮತಿ ಶೃತಿ ಚೆನ್ನುಪಾಟಿಯವರು ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ. “ಭಾರತ್ ಕೊ ಜಾನೋ” ಅಡಿಯಲ್ಲಿ ನಡೆಸಲಾದ ರಸಪ್ರಶ್ನೆ ಸ್ಪರ್ಧೆಯಲ್ಲಿ ೧೦ನೇ ತರಗತಿ ವಿದ್ಯಾರ್ಥಿಗಳಾದ ಸಾಕೇತ್ ಆಲಂಪಲ್ಲಿ ಮತ್ತು ಪ್ರದೀಪ ತೃತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ದೇಶಭಕ್ತಿ ಗೀತೆ ಗಾಯನ ಸ್ಪರ್ಧೆಯಲ್ಲಿ ಶಾಲೆಯ ವಿದ್ಯಾರ್ಥಿಗಳು ಸುಶ್ರಾವ್ಯವಾಗಿ ಗಾಯನ ಮಾಡಿ ಹಿಂದಿ ಮತ್ತು ಸಂಸ್ಕೃತ ಗೀತ ಗಾಯನ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದು ಕೀರ್ತಿ ತಂದಿದ್ದಾರೆ. ವಿವಿಧ ವಿಭಾಗದಲ್ಲಿ ಪ್ರಶಸ್ತಿ ಪಡೆದ ಎಲ್ಲ ಶಾಲಾ ಮಕ್ಕಳಿಗೆ ಶಾಲೆಯ ಕಾರ್ಯದರ್ಶಿ ಶ್ರೀ ಜಗನ್ನಾಥ ಆಲಂಪಲ್ಲಿ ಯವರು ಪ್ರಶಸ್ತಿ ಪತ್ರ ನೀಡಿ ಗೌರವಿಸಿ ಪ್ರೋತ್ಸಾಹಿಸಿದರು. ಈ ಸಮಯದಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ಶಿಕ್ಷಕಿಯರಾದ ಶ್ರೀಮತಿ ಯಶೋಧ, ಶ್ರೀಮತಿ ಸುಮಾ ಆಲಂಪಲ್ಲಿ, ಶ್ರೀಮತಿ ಭುವನೇಶ್ವರಿ, ಶ್ರೀಮತಿ ವಿಜಯಲಕ್ಷಿ, ಕುಮಾರಿ ಕವಿತಾ, ಶ್ರೀಮತಿ ದೀಪ ಹಾಗೂ ಶ್ರೀಮತಿ ಶ್ವೇತಾ ಉಪಸ್ಥಿತರಿದ್ದರು