Free Tailoring Training: Certificate distribution to beneficiaries
ಮಾನ್ವಿ :ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸರ್ವಧರ್ಮ ಸಮಾಜ ಸೇವೆ ಮತ್ತು ಗೌಸ್ ಓ ಖ್ವಾಜಾ ಅಂಜುಮನ್ ಕಮಿಟಿ ಅಧ್ಯಕ್ಷರಾದ ಸೈಯದ್ ಆರೀಫ್ ಖಾದ್ರಿ ಸಾಹೇಬ್ ಮಾತನಾಡಿ ಟೈಲರಿಂಗ್ ಮತ್ತು ಮೆಹೆಂದಿ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ನಗದು ಬಹುಮಾನ ಹಾಗೂ ವಿವಿಧ ಸಾಧಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು 18-೦8-2024 ರಂದು ಪಟ್ಟಣದ ಎಫ್ ಟಿ ಫಂಕ್ಷನ್ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ.
ಹೀಗಾಗಿ ಟೈಲರಿಂಗ್ ತರಬೇತಿ ಪಡೆದ 970ಮಹಿಳೆಯರು ಇದ್ದು ಇದರಲ್ಲಿ 45 ಮಹಿಳೆಯರಿಗೆ ಪ್ರಮಾಣ ಪತ್ರ ನೀಡುವುದು ಹಾಗೂ 3 ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ ನೀಡಲಾಗುವುದು. ಈ ಕಾರ್ಯಕ್ರಮದಲ್ಲಿ ಸಚಿವರು ಮತ್ತು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭಾಗವಹಿಸಲಿದ್ದಾರೆ ಹಾಗೇ ಜೂನ್ 23 ರಂದು ನಡೆದ ಮೆಹೆಂದಿ ಸ್ಪರ್ಧೆಯಲ್ಲಿ ಭಾಗವಹಿಸಿದ ಸ್ಪರ್ಧೆ ಗಳಲ್ಲಿ 3 ಸ್ಪರ್ಧೆಗಳಿಗೆ ಬಹುಮಾನ ನೀಡಲಾಗುವುದು ಪ್ರಥಮ ಬಹುಮಾನ 21000 ಸಾವಿರ ರೂಪಾಯಿ ಶಿರಡಿ ಸಾಯಿ ಬಾಬಾ ಭಕ್ತರ ಸಂಘದ ಅಧ್ಯಕ್ಷರಾದ ಜೆ, ಸಾಯಿ ಶಾಸ್ತ್ರೀಲು ನೀಡಲಿದ್ದು ಹಾಗೂ ದ್ವಿತೀಯ ಬಹುಮಾನ11000 ಸಾವಿರ ರೂಪಾಯಿ ಪಟ್ಟಣದ ಖ್ಯಾತ ವೈದ್ಯರಾದ ಡಾಕ್ಟರ್ ರೋಹಿನಿ ರವರು ನೀಡಲಿದ್ದು ತೃತೀಯ ಬಹುಮಾನ 5500 ಸಾವಿರ ಸಜ್ಜನ ನಶೀನ್ ಬಾಡೇ ಸಾಹೇಬ್ ದರ್ಗದ ಸೈಯದ್ ಷಾ ಇರಫನ್ ಖಾದ್ರಿ ಸಾಹೇಬ್ ನೀಡಲಿದ್ದಾರೆ. ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ವಿವರ :ರಾಷ್ಟ್ರಪತಿ ಚಿನ್ನದ ಪದಕ ವಿಜೇತ ಸೈಯದ್ ಜಾವೀದ್ ಪಾಷ ರಾಯಚೂರು, ಗಾಯನ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ್ದಕ್ಕಾಗಿ ಲತಾ ಮಂಗೇಶ್ಕರ್ ಪ್ರಶಸ್ತಿ ಪುರಸ್ಕೃತರಾದ ಕುಮಾರಿ ಶಾಂತ ನಾಯಕ್ ಬಲ್ಲಟಗಿ, ಜಿಲ್ಲಾ ಉತ್ತಮ ಪತ್ರಕರ್ತರ ಪ್ರಶಸ್ತಿ ಪುರಸ್ಕೃತರಾದ ಲಕ್ಷಣರಾವ್ ಕಪಗಲ್, ವಿಜ್ಞಾನ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಮಾರಿಯಾ ಅಮ್ರೀನ್ ಅವರಿಗೆ ನೀಡಲಾಗುವುದು ಎಂದರು.
ಕಾರಣ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಮಹಿಳೆಯರು ಮತ್ತು ರಾಜಕಾರಣಿಗಳು ಪಕ್ಷಾತೀತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮೌಲ್ವಿ ಸೈಯದ್ ಹುಸೇನ್ ಬಾಷಾ, ಫಾರುಕ್ ಆಹ್ಮೆದ್ , ಮಹ್ಮದ್ ಉಸ್ಮಾನ್ ಪಾಷ, ಮಹ್ಮದ್ ಇಲಿಯಾಸ್, ಸೈಯದ್ ಜಾವೀದ್ ಹಾಶ್ಮಿ, ಸೈಯದ್ ಖೈಸರ್, ಮುಸ್ತಫಾ ಬಾಗಲ್ಕೊಟ್, ಮಹ್ಮದ್ ಯಾಸೀನ್, ಸುನೀಲ್ ಕುಮಾರ್, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.