Breaking News

ತುಂಗಭದ್ರಾ ಜಲಾಶಯದ ೧೯ನೇ ಕ್ಟಸ್ಟ್ ಗೇಟ್‌ನ ಚೈನ್‌ಲಿಂಕ್ ಕಡಿತದಿಂದನೀರಿನ ಕೊರತೆ ಆಗದಂತೆ ರೈತರ ಹಿತ ಕಾಪಾಡುವ ಹೊಣೆ ಸರ್ಕಾರ ಮತ್ತು ಅಧಿಕಾರಿಗಳ ಮೇಲಿದೆ.ಭಾರಧ್ವಾಜ್

By cutting the chainlink of the 19th cust gate of Tungabhadra Reservoir
It is the responsibility of the government and officials to protect the interests of farmers so that there is no shortage of water.Bhardwaj

ಜಾಹೀರಾತು

ಗಂಗಾವತಿ: ತುಂಗಭದ್ರ ಜಲಾಶಯ ಪೂರ್ಣ ಪ್ರಮಾಣದಲ್ಲಿ ತುಂಬಿರುವ ಈ ಸುಸಂದರ್ಭದಲ್ಲಿ ನಿನ್ನೆ ಆಗಸ್ಟ್-೧೦ ರ ರಾತ್ರಿ ೯.೩೦ ರ ಸುಮಾರು ಜಲಾಶಯದ ಹೆಚ್ಚುವರಿ ನೀರನ್ನು ಹೊರ ಬಿಡುವ ೩೩ ವರ್ಟಿಕಲ್ ಕ್ರಸ್ಟ್ ಗೇಟ್‌ಗಳಲ್ಲಿ ೧೯ನೇ ಗೇಟ್ ನ ಚೈನ್ ಕಡಿತಗೊಂಡು ಈ ಗೇಟ್ ನದಿಯ ನೀರಿನ ಪಾಲಾಗಿರುತ್ತದೆ. ಇದರಿಂದ ಈ ಗೇಟ್ ವೇ ನಲ್ಲಿ ಸುಮಾರು ೩೦,೦೦೦ ಕ್ಕೂ ಅಧಿಕ ಪ್ರಮಾಣದ ನೀರು ಜಲಾಶಯದಿಂದ ನದಿಗೆ ದುಮ್ಮುಕ್ಕುತ್ತಿದೆ. ಪ್ರಸ್ತುತ ಜಲಾಶಯದ ಪರಿಸ್ಥಿತಿ ಗಂಭೀರವಾಗಿದ್ದು, ಅಚ್ಚುಕಟ್ಟು ರೈತರು ಮುಂಗಾರಿನ ಬೆಳೆಯ ಫಸಲು ಕೈ ಸೇರುವುದೋ ಇಲ್ಲವೋ ಎಂಬ ಆತಂಕದಲ್ಲಿ ಇದ್ದಾರೆ ಎಂದು ತುಂಗಭದ್ರಾ ಉಳಿಸಿ ಆಂದೋಲನ ಸಮಿತಿಯ ಗೌರವಾಧ್ಯಕ್ಷರಾದ ಭಾರಧ್ವಾಜ್ ಪ್ರಕಟಣೆಯಲ್ಲಿ ಕಳವಳ ವ್ಯಕ್ತಪಡಿಸಿದರು.


ಆಣೆಕಟ್ಟೆಯ ೧೯ನೇ ಕ್ರಸ್ಟ್ ಗೇಟ್ ಹಾಳಾಗಿರುವುದರಿಂದ ಈ ಕ್ರಸ್ಟ್ ಗೇಟ್‌ನ ೨೦ ಅಡಿಯಷ್ಟು ಎತ್ತರದ ಜಲಾಶಯದ ನೀರನ್ನು ಖಾಲಿ ಮಾಡಿದರೆ ಮಾತ್ರ ಗೇಟ್ ರಿಪೇರಿ ಮಾಡಲು ಸಾಧ್ಯ ಎಂದು ತಜ್ಞರು ತಿಳಿಸಿದ್ದಾರೆ ಎಂಬುದು ನೀರಾವರಿ ಇಲಾಖೆಯ ಮೂಲಗಳಿಂದ ತಿಳಿದು ಬಂದಿದೆ. ಜಲಾಶಯದ ಕಿತ್ತು ಹೋದ ಗೇಟ್‌ಗೆ ಬೇಕಾದ ೨೦mm ಣhiಛಿಞ ್ಠ ೬೪ ಜಿeeಣ ತಿiಜಣh ್ಠ ೨೦ ಜಿeeಣ highಣ ನ ತಗಡ(sheeಣ)ನ್ನು ನೀಡಲು ಜಿಂದಾಲ್ ಕಂಪನಿಗೆ ಜಲ ಸಂಪನ್ಮೂಲ ಸಚಿವಾಲಯ ಆದೇಶಿಸಿದೆ ಎಂದು ತಿಳಿದು ಬಂದಿದೆ. ಹೈದರಾಬಾದಿನ ಅಒಅ ಯಿಂದ ಗೇಟಿನ ವಿನ್ಯಾಸ ತರಿಸಲಾಗಿದೆ. ಹೈದರಾಬಾದಿನಿಂದ ಗೇಟಿನ ನಿರ್ಮಾಣ ತಜ್ಞರು ಬರುತ್ತಿದ್ದಾರೆ. ಗೇಟ್‌ನ ನಿರ್ಮಾಣ ೫-೭ ದಿನ ಹಿಡಿಯಬಹುದು. ಜಲಾಶಯದ ೨೦ ಅಡಿಗಳಷ್ಟು ನೀರು ಸುಮಾರು ೬೦ ಟಿಎಂಸಿ ಯಷ್ಟಾಗುತ್ತದೆ. ಇದು ಜಲಾಶಯದ ಅರ್ಧ ಭಾಗ ಖಾಲಿಯಾದಂತೆ. ಆಗ ಜಲಾಶಯದಲ್ಲಿ ಉಳಿಯುವ ನೀರು ಕೇವಲ ೪೦-೪೫ ಟಿಎಂಸಿ ಮಾತ್ರ. ಇದು ಮುಂಗಾರಿನ ಬೆಳೆಗೆ ಸಾಲುವುದಿಲ್ಲ. ಆದರೆ ಜಲಾಶಯಕ್ಕೆ ನೀರು ಬರುವ ಆಶಾಭಾವನೆ ಇದೆ. ಹೆಚ್ಚು-ಕಮ್ಮಿ ಮುಂಗಾರಿನ ಬೆಳೆಗೆ ನೀರಿನ ಕೊರತೆಯಾಗಲಾರದು. ತುಂಗಭದ್ರ ಜಲಾಶಯದಿಂದ ಪ್ರಸ್ತುತ ಒಂದು ಲಕ್ಷ ಕ್ಯೂಸೆಕ್ಸ್ ನೀರು ನದಿಗೆ ಹರಿಬಿಡುತ್ತಿದ್ದು, ಇದು ಹಂತ ಹಂತವಾಗಿ ಸುಮಾರು ಎರಡುವರೆ ಲಕ್ಷ ಕ್ಯೂಸೆಕ್ಸ್ ನೀರು ಹರಿಯುವ ಸಾಧ್ಯತೆ ಇದೆ. ನದಿಪಾತ್ರದ ಜನ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ. ಯಾವುದೇ ರೀತಿಯ ನೀರಿನ ಕೊರತೆ ಆಗದಂತೆ ರೈತರ ಹಿತ ಕಾಪಾಡುವ ಹೊಣೆ ಸರ್ಕಾರ ಮತ್ತು ಅಧಿಕಾರಿಗಳ ಮೇಲೆ ಇರುವದರಿಂದ ತ್ವರಿತವಾಗಿ ಕೆಲಸ ಪೂರ್ಣಗೊಳಿಸಲು ತುಂಗಭದ್ರ ಉಳಿಸಿ ಆಂದೋಲನ ಸಮಿತಿಯು ಜಲ ಸಂಪನ್ಮೂಳ ಇಲಾಖೆಯ ಮುಖ್ಯ ಅಭಿಯಂತರರಿಗೆ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ತುಂಗಭದ್ರಾ ಉಳಿಸಿ ಆಂದೋಲನ ಸಮಿತಿಯ ಅಧ್ಯಕ್ಷರಾದ ವೆಂಕಟೇಶ ಎಂ.ಆರ್., ಉಪಾಧ್ಯಕ್ಷ ಹೆಚ್.ಎನ್. ಬಡಿಗೇರ, ಡಿ.ಎಚ್. ಪೂಜಾರ, ಶಿವಬಾಬು ಚಲಸಾನಿ, ವೀರಭದ್ರಯ್ಯ ಭೂಸನೂರಮಠ ಹಾಗೂ ಇನ್ನೀತರರು ಇದ್ದರು.

About Mallikarjun

Check Also

ಸೆ. 2 ಮತ್ತು 3 ರಂದು ವಿವಿಧ ಇಲಾಖೆಗಳ ಗ್ರೂಪ್ ಸಿ ಹುದ್ದೆಗಳ ಪರೀಕ್ಷೆ: ನಿಷೇಧಾಜ್ಞೆ ಜಾರಿ

Exams for Group C posts of various departments on Sept. 2 and 3: Prohibitory order …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.