Prosperity of society is possible only through education. KAS Officer Mangalli Shiva
ವರದಿ : ಬಂಗಾರಪ್ಪ ಸಿ ಹನೂರು .
ಹನೂರು :- ಉನ್ನತ ಶಿಕ್ಷಣದಲ್ಲಿ ಮುಂದುವರಿದಾಗ ಮಾತ್ರ ಪ್ರತಿಯೊಂದು ಸಮಾಜವು ಏಳಿಗೆಯಾಗಲು ಸಾಧ್ಯ. ಎಂದು ಕೆಎಎಸ್ ಅಧಿಕಾರಿ ಮಣಗಳ್ಳಿ ಶಿವು ತಿಳಿಸಿದರು.
ತಾಲ್ಲೂಕಿನ ಮಣಗಳ್ಳಿ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಸಮಾಜಮುಖಿ ನೌಕರರ ಒಕ್ಕೂಟವು ಅಮ್ಮಿಕೊಂಡಿದ್ದ ನಿವೃತ್ತಿ ನೌಕರರು ಸರ್ಕಾರಿ ಮತ್ತು ಖಾಸಗಿ ವಲಯದ ನೌಕರರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ರವರು ಪ್ರತಿಭೆ ಎಂಬುದು ಗ್ರಾಮೀಣ ಭಾಗದ ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದು ನಮ್ಮ ಗ್ರಾಮದಿಂದ ಈಗಾಗಲೇ ಶಿಕ್ಷಕರು ಉಪನ್ಯಾಸಕರು ಮುಖ್ಯೋಪಾಧ್ಯಾಯರು ಸಹಾಯಕ ಅಧ್ಯಾಪಕರು ರೈಲ್ವೆ ಪೋಲೀಸ್ ಇಲಾಖೆ ನೌಕರರು ಹಾಗೂ ಬೇರೆ ಬೇರೆ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು ಎಲ್ಲರನ್ನು ಸನ್ಮಾನಿಸುವ ಮೂಲಕ ಶಿಕ್ಷಣದ ಮಹತ್ವ ಅರಿತು ಕೊಳ್ಳಬೇಕಾಗಿದೆ.
ಹಾಗೆಯೆ ಶೈಕ್ಷಣಿಕವಾಗಿ ಪ್ರಗತಿಗೊಳ್ಳಬೇಕಾದರೆ ಮಹಾನೀಯರಾದ ಬುದ್ದ ಬಸವಣ್ಣ ಜ್ಯೋತಿ ಬಾಪುಲೆ ಸಾವಿತ್ರಿ ಬಾಪುಲೆ ಸಾಹುಮಹಾರಾಜ್ ನಾಲ್ವಡಿ ಕೃಷ್ಣರಾಜ ಒಡೆಯರ್ ಅಂಬೇಡ್ಕರ್ ರವರ ಆದರ್ಶ ತತ್ವ ಸಿದ್ದಾಂತಗಳನ್ನು ಪಾಲನೆ ಮಾಡುವ ಅವಶ್ಯಕತೆ ಇದೆ. ಮತ್ತು ನಮ್ಮ ತಂದೆ ತಾಯಿ ಹಾಗೂ ಕುಟುಂಬ ವರ್ಗದವರ ಶ್ರಮ ಮತ್ತು ಪರಿಶ್ರಮದ ಫಲ ಎಂದು ತಿಳಿಸುತ್ತ ಎಲ್ಲ ನೌಕರರ ಜವಾಬ್ದಾರಿಗಳ ಬಗ್ಗೆ ಮನವರಿಕೆ ಮಾಡಿದರು.
ಇದೇ ವೇಳೆ ಗ್ರಾಮೀಣ ಮಟ್ಟದಿಂದ ಶಿಕ್ಷಣವನ್ನು ಪಡೆದು ವಿವಿಧ ಹುದ್ದೆಗಳನ್ನು ಅಲಕಂರಿಸಿ ನಿವೃತ್ತಿ ಹೊಂದಿರುವ ಎಇಇ ಅಂಕಯ್ಯರವರು ತಮ್ಮ ಗ್ರಾಮೀಣ ಬದುಕು ಹಾಗೂ ಹುದ್ದೆಯಲ್ಲಿನ ಅನುಭವ ಹಂಚಿಕೊಂಡರು. ಹಾಗೆಯೇ ಮುಖ್ಯೋಪಾಧ್ಯಾಯರಾದ ಜಯಸ್ವಾಮಿರವರು ಮಾತನಾಡಿದರು. ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಕ್ಯಾಷಿಯರ್ ಮತ್ತು ಕಂದಾಯ ಸಹಾಯಕರಾದ ಪ್ರಭುಸ್ವಾಮಿ ಹಾಗೂ ಕೆಂಪಯ್ಯರವರನ್ನು ಸನ್ಮಾನಿಸಲಾಯಿತು.
ಶಿಕ್ಷಣ ಇಲಾಖೆ ಬಿಆರ್ಸಿ ಮಹಾದೇವಕುಮಾರ ರವರು ನೌಕರರಿಗೆ ಬುದ್ಧವಂದನೆ ಮೂಲಕ ಸಂದೇಶ ಸಾರಿದರು. ಹಾಗೂ ಮುಂದಿನ ಜಾಗೃತಿ ಬಗ್ಗೆ ತಿಳಿಸಿದರು. ಉಪನ್ಯಾಸಕ ಮಹದೇವ ಕಾರ್ಯಕ್ರಮದಲ್ಲಿ ಭಾಗ ವಹಿಸದವರಿಗೆ ಧನ್ಯವಾದ ತಿಳಿಸಿದರು. ಪ್ರಕಾಶ್ ಎಲ್ಲರನ್ನು ಪರಿಚಯಿಸದರು ಗ್ರಾಮದ ಪ್ರಮುಖರು ಪ್ರತಿಕ್ರಿಯಿಸಿ ಇದು
ವಿಶಿಷ್ಟವಾದ ಕಾರ್ಯಕ್ರಮ ಹಾಗೂ ಆದರ್ಶ ಪ್ರಾಯ ಮತ್ತು ಈ ಗ್ರಾಮದ ಇತಿಹಾಸದಲ್ಲೇ ಮೊದಲೆಂದು ಎಲ್ಲ ಯಜಮಾನರು ಮುಖಂಡರು ಗ್ರಾ.ಪಂ. ಸದಸ್ಯರು/ಮಾಜಿ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸದಸ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಹಾಗೆಯೇ ಈ ಗ್ರಾಮದಲ್ಲಿ ಶಿಕ್ಷಣ ಪಡೆದು ಬೇರೆ ಬೇರೆ ಊರುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಖಾಸಗಿ ಕ್ಷೇತ್ರದ ನೌಕರರು ಹಾಗೂ ಪತ್ರಿಕಾ ಪ್ರತಿನಿಧಿಗಳನ್ನು ಗೌರವಿಸಿರುವುದು ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಮತ್ತು ಡಾಕ್ಟರೇಟ್ ಪದವಿ ಪಡೆದಿರುವವರನ್ನು ಸನ್ಮಾನಿಸಿರುವುದು ಕಾರ್ಯಕ್ರಮದಲ್ಲಿ ಬಹಳ ವಿಶೇಷವಾಗಿತ್ತು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯ ಸಿದ್ದರಾಜು ಮಲ್ಲಿಕಾಜು೯ನ ಮಾಜಿ ಗ್ರಾ.ಪಂ.ಉಪಾಧ್ಯಕ್ಷೆ ಪುಟ್ಟ ಮಾರಮ್ಮ ಸದಸ್ಯರುಗಳಾದ ಮಲ್ಲಣ್ಣ ವೆಂಕಟರಾಜು
ಊರಿನ ಎಲ್ಲ ಮುಖಂಡರು ವಿದ್ಯಾರ್ಥಿಗಳು ಊರಿನ ಸರ್ಕಾರಿ ಖಾಸಗಿ ನೌಕರರು ಮತ್ತು ಗ್ರಾಮಸ್ಥರು ಹಾಜರಿದ್ದರು.